ಕೇದಾರನಾಥದಲ್ಲಿ ಡಿಜಿಟಲ್ ಕಸ ನಿರ್ವಹಣೆ; ಮೊದಲ ದಿನವೇ 1,451 ಕೆ.ಜಿ. ತ್ಯಾಜ್ಯ ಸಂಗ್ರಹ
ಕೇದಾರನಾಥದಲ್ಲಿ ಡಿಜಿಟಲ್ ಕಸ ನಿರ್ವಹಣೆ ವ್ಯವಸ್ಥೆ ಜಾರಿ. ಮೊದಲ ದಿನವೇ 48 ಚೀಲಗಳಲ್ಲಿ 1,451 ಕೆ.ಜಿ. ತ್ಯಾಜ್ಯ ಸಂಗ್ರಹವಾಗಿದ್ದು, ಹಸಿ ಮತ್ತು ಒಣ ಕಸ ಪ್ರತ್ಯೇಕಿಸುವ ಗುರಿ ಹೊಂದಲಾಗಿದೆ.
ಹಿಮಾಲಯದ ಪವಿತ್ರ ಯಾತ್ರಾಸ್ಥಳ ಕೇದಾರನಾಥ ಧಾಮದಲ್ಲಿ ಪರಿಸರ ಸಂರಕ್ಷಣೆಗೆ ಹೊಸ ಪ್ರಯೋಗ ಆರಂಭವಾಗಿದೆ. ಕಸ ಸಂಗ್ರಹ ಮತ್ತು ವಿಲೇವಾರಿ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಪ್ರತಿಯೊಂದು ಕಸದ ಚೀಲಕ್ಕೂ ಪ್ರತ್ಯೇಕ ಗುರುತಿನ ಚೀಟಿ ಅಳವಡಿಸಿ ತೂಕ ದಾಖಲಿಸಲಾಗುತ್ತಿದೆ. ಮೊದಲ ದಿನವೇ 48 ಚೀಲಗಳಲ್ಲಿ ಒಟ್ಟು 1,451 ಕೆ.ಜಿ. ತ್ಯಾಜ್ಯ ಸಂಗ್ರಹವಾಗಿದೆ. ಇದರಲ್ಲಿ 373 ಕೆ.ಜಿ. ಹಸಿ ಕಸ, 472 ಕೆ.ಜಿ. ಒಣ ಕಸ ಹಾಗೂ 604 ಕೆ.ಜಿ. ಮಿಶ್ರ ಕಸ ಸೇರಿದೆ. ಆಶ್ಚರ್ಯದ ಸಂಗತಿಯೆಂದರೆ ಒಟ್ಟು ಕಸದ ಶೇ.42ರಷ್ಟು ಇನ್ನೂ ಹಸಿ ಮತ್ತು ಒಣ ಕಸದ ಮಿಶ್ರಣವಾಗಿದೆ. ಮುಂದಿನ ವರ್ಷದ ವೇಳೆಗೆ ಈ ಪ್ರಮಾಣವನ್ನು ಕಡಿಮೆ ಮಾಡುವುದು ಯೋಜನೆಯ ಗುರಿ. ಯಾವ ಕಟ್ಟಡದಿಂದ ಎಷ್ಟು ಕಸ ಉತ್ಪತ್ತಿಯಾಗುತ್ತಿದೆ ಎಂಬುದನ್ನು ಡಿಜಿಟಲ್ ಮೂಲಕ ಪತ್ತೆಹಚ್ಚುವ ಈ ವ್ಯವಸ್ಥೆ, ಕಸದ ನಿರ್ವಹಣೆಯಲ್ಲಿ ಪಾರದರ್ಶಕತೆ ತರಲಿದೆ. ಕೇದಾರನಾಥದ ಪರಿಸರ ಉಳಿಸಲು ಡಿಜಿಟಲ್ ತಂತ್ರಜ್ಞಾನದ ಹೊಸ ಪ್ರಯೋಗ ಹೇಗೆ ನೆರವಾಗಲಿದೆ? ಸಂಪೂರ್ಣ ಮಾಹಿತಿ ಈ ವರದಿಯಲ್ಲಿ.
Next Story
