ಭಾರತೀಯ ನೌಕಾಪಡೆಯ ಮೂರು ಹಡಗುಗಳು; ಭಾರತ ಮತ್ತು ಶ್ರೀಲಂಕಾ ನಡುವೆ ರಕ್ಷಣಾ ಸಹಕಾರ ಬಲವರ್ಧನೆ
ಭಾರತೀಯ ನೌಕಾಪಡೆಯ ಐಎನ್‌ಎಸ್ ತೀರ್, ಸುಜಾತಾ ಹಾಗೂ ಕರಾವಳಿ ರಕ್ಷಣಾ ಪಡೆಯ ಐಸಿಜಿಎಸ್ ಸಾರಥಿ ಹಡಗುಗಳು ಕೊಲಂಬೊ ಭೇಟಿ ಮುಗಿಸಿ ನಿರ್ಗಮಿಸಿವೆ. ಭಾರತ-ಶ್ರೀಲಂಕಾ ನೌಕಾ ಸಹಕಾರದ ಮಾತುಕತೆ ನಡೆದಿದೆ.
ಭಾರತೀಯ ನೌಕಾಪಡೆಯ ಮೊದಲ ತರಬೇತಿ ದಳದ ಐಎನ್‌ಎಸ್ ತೀರ್, ಐಎನ್‌ಎಸ್ ಸುಜಾತಾ ಹಾಗೂ ಭಾರತೀಯ ಕರಾವಳಿ ರಕ್ಷಣಾ ಪಡೆಯ ಐಸಿಜಿಎಸ್ ಸಾರಥಿ ಹಡಗುಗಳು ಅಕ್ಟೋಬರ್ 29ರಂದು ಶ್ರೀಲಂಕಾದ ಕೊಲಂಬೊ ಬಂದರಿನಿಂದ ನಿರ್ಗಮಿಸಿವೆ. ಯಶಸ್ವಿ ಬಂದರು ಭೇಟಿಯ ಭಾಗವಾಗಿ ಭಾರತೀಯ ನೌಕಾಪಡೆ ಮತ್ತು ಶ್ರೀಲಂಕಾ ನೌಕಾಪಡೆ ನಡುವೆ ದ್ವಿಪಕ್ಷೀಯ ಮಾತುಕತೆ ಹಾಗೂ ವಿವಿಧ ಕಾರ್ಯಕ್ರಮಗಳು ನಡೆದಿವೆ. ಈ ಸಂದರ್ಭದಲ್ಲಿ ಮೊದಲ ತರಬೇತಿ ದಳದ ಹಿರಿಯ ಅಧಿಕಾರಿ ಮತ್ತು ಹಡಗುಗಳ ಕಮಾಂಡಿಂಗ್ ಅಧಿಕಾರಿಗಳು ಶ್ರೀಲಂಕಾ ನೌಕಾಪಡೆಯ ಪಶ್ಚಿಮ ನೌಕಾ ವಲಯದ ಕಮಾಂಡರ್ ಅವರನ್ನು ಭೇಟಿ ಮಾಡಿದ್ದಾರೆ. ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರ, ಸಮುದ್ರ ಭದ್ರತೆ ಮತ್ತು ನೌಕಾಪಡೆಗಳ ನಡುವಿನ ಬಾಂಧವ್ಯ ಬಲಪಡಿಸುವ ಕುರಿತು ಮಾತುಕತೆ ನಡೆದಿದೆ.
Next Story
