ಸೊಮಾಲಿಯಾ ಕರಾವಳಿಯಲ್ಲಿ ಕಡಲ್ಗಳ್ಳರ ದಾಳಿಯಿಂದ 20 ಇರಾನ್ ನಾವಿಕರ ರಕ್ಷಣೆ; ಭಾರತದ ನೌಕಾಪಡೆ ಸಾಧನೆ
ಸೊಮಾಲಿಯಾ ಕರಾವಳಿಯಲ್ಲಿ ಕಡಲ್ಗಳ್ಳರ ವಶದಲ್ಲಿದ್ದ 20 ಇರಾನ್ ನಾವಿಕರನ್ನು ಐಎನ್‌ಎಸ್ ಕೋಲ್ಕತ್ತಾ, ವಾಯುಪಡೆ ಮತ್ತು ಮಾರ್ಕೋಸ್ ಕಮಾಂಡೋಗಳು ರಕ್ಷಿಸಿವೆ.
ಸೊಮಾಲಿಯಾ ಕರಾವಳಿಯಲ್ಲಿ ಕಡಲ್ಗಳ್ಳರ ವಶದಲ್ಲಿದ್ದ 20 ಇರಾನ್ ನಾವಿಕರನ್ನು ಭಾರತೀಯ ನೌಕಾಪಡೆ ಮತ್ತು ವಾಯುಪಡೆ ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿವೆ. ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಕೋಲ್ಕತ್ತಾ ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭಾರತೀಯ ವಾಯುಪಡೆಯ ಸಿ-17 ವಿಮಾನದ ಮೂಲಕ ನೌಕಾಪಡೆಯ ವಿಶೇಷ ಕಮಾಂಡೋ ಪಡೆ ಮಾರ್ಕೋಸ್ (MARCOS) ಯೋಧರನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಸಮುದ್ರದಲ್ಲಿನ ಕಡಲ್ಗಳ್ಳರ ಬೆದರಿಕೆಯನ್ನು ಎದುರಿಸಿ 20 ಇರಾನ್ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಭಾರತದ ಈ ಕಾರ್ಯಾಚರಣೆಗೆ ಇರಾನ್ ರಾಯಭಾರ ಕಚೇರಿ ಮೆಚ್ಚುಗೆ ವ್ಯಕ್ತಪಡಿಸಿದೆ. ಸಮುದ್ರದಲ್ಲಿ ನಡೆದ ಈ ಸಾಹಸಮಯ ರಕ್ಷಣಾ ಕಾರ್ಯಾಚರಣೆಯ ದೃಶ್ಯಾವಳಿಗಳು ಇದೀಗ ಗಮನ ಸೆಳೆದಿವೆ.
ಐಎನ್‌ಎಸ್ ಕೋಲ್ಕತ್ತಾ ಕಾರ್ಯಾಚರಣೆ ಹೇಗಿತ್ತು? ವಾಯುಪಡೆಯ ಸಿ-17 ವಿಮಾನದ ಪಾತ್ರವೇನು? ಮಾರ್ಕೋಸ್ ಕಮಾಂಡೋಗಳು ಹೇಗೆ ಕಾರ್ಯಾಚರಣೆ ನಡೆಸಿದರು? ಸಂಪೂರ್ಣ ದೃಶ್ಯಾವಳಿಗಳೊಂದಿಗೆ ಈ ವರದಿ ವೀಕ್ಷಿಸಿ.
Next Story
