
Sukhoi Su-30 Crash|ಸುಖೋಯ್ ವಿಮಾನ ಪತನದಲ್ಲಿ ಇಬ್ಬರು ಪೈಲಟ್‌ಗಳು ಹುತಾತ್ಮ
ಅಸ್ಸಾಂನಲ್ಲಿ ನಡೆದ ಸುಖೋಯ್ ಸು-30 ಯುದ್ಧ ವಿಮಾನ ಪತನದಲ್ಲಿ ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪುರ್ವೇಶ್ ದುರಗಕರ್ ಹುತಾತ್ಮರಾಗಿದ್ದಾರೆ.
ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಗುರುವಾರ ರಾತ್ರಿ ನಡೆದ ಸುಖೋಯ್ ಸು-30 ಎಂಕೆಐ (Su-30 MKI) ಯುದ್ಧ ವಿಮಾನ ಪತನದ ದುರಂತದಲ್ಲಿ ಭಾರತೀಯ ವಾಯುಪಡೆಯ ಇಬ್ಬರು ಪೈಲಟ್‌ಗಳು ಹುತಾತ್ಮರಾಗಿದ್ದಾರೆ. ವಿಮಾನದಲ್ಲಿದ್ದ ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪುರ್ವೇಶ್ ದುರಗಕರ್ ಅವರು ತೀವ್ರ ಗಾಯಗೊಂಡು ಹುತಾತ್ಮರಾಗಿದ್ದಾರೆ ಎಂದು ವಾಯುಪಡೆ ಅಧಿಕೃತವಾಗಿ ದೃಢಪಡಿಸಿದೆ.
ವಾಯುಪಡೆಯ ಭಾವಪೂರ್ಣ ವಿದಾಯ
ಈ ಘಟನೆಯ ಕುರಿತು ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ಭಾರತೀಯ ವಾಯುಪಡೆ, "ದುರಂತದಲ್ಲಿ ಮೃತಪಟ್ಟ ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪುರ್ವೇಶ್ ದುರಗಕರ್ ಅವರ ಸಾವಿಗೆ ಐಎಎಫ್ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ಈ ಕಷ್ಟದ ಸಮಯದಲ್ಲಿ ವಾಯುಪಡೆಯ ಎಲ್ಲಾ ಸಿಬ್ಬಂದಿ ದು:ಖತಪ್ತ ಕುಟುಂಬಗಳ ಪರವಾಗಿ ದೃಢವಾಗಿ ನಿಲ್ಲುತ್ತಾರೆ" ಎಂದು ತಿಳಿಸಿದೆ.
IAF acknowledges the loss of Sqn Ldr Anuj and Flt Lt Purvesh Duragkar, who sustained fatal injuries in the Su-30 crash. All personnel of the IAF express sincere condolences, and stand firmly with the bereaved family in this time of grief.@DefenceMinIndia@SpokespersonMoD… pic.twitter.com/zUtfUJ2ewr
— Indian Air Force (@IAF_MCC) March 6, 2026
ತರಬೇತಿ ವೇಳೆ ಸಂಭವಿಸಿದ ಅನಾಹುತ
ಜೋರ್ಹತ್ ವಾಯುನೆಲೆಯಿಂದ ತರಬೇತಿ ಕಾರ್ಯಾಚರಣೆಗಾಗಿ ಟೇಕ್-ಆಫ್ ಆಗಿದ್ದ ಸುಖೋಯ್ ವಿಮಾನವು ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ನಾಪತ್ತೆಯಾಗಿತ್ತು. ವಾಯುನೆಲೆಯಿಂದ ಸುಮಾರು 60 ಕಿಲೋಮೀಟರ್ ದೂರದ ಗುಡ್ಡಗಾಡು ಪ್ರದೇಶದಲ್ಲಿ ವಿಮಾನ ಪತನಗೊಂಡಿರುವುದು ಪತ್ತೆಯಾಗಿತ್ತು. ನಿನ್ನೆ ರಾತ್ರಿಯಿಂದಲೇ ಪೈಲಟ್‌ಗಳಿಗಾಗಿ ತೀವ್ರ ಶೋಧ ನಡೆಸಲಾಗಿತ್ತು, ಆದರೆ ದುರದೃಷ್ಟವಶಾತ್ ಇಬ್ಬರೂ ಪೈಲಟ್‌ಗಳು ಪ್ರಾಣ ಕಳೆದುಕೊಂಡಿದ್ದಾರೆ.

