ಗೋಲ್ಡನ್ ಚಾರಿಯೆಟ್‌ಗೆ ಡಿಕೆಶಿ ಚಾಲನೆ | 6 ದಿನಗಳ ಐಷಾರಾಮಿ ಪ್ರವಾಸ, ಟಿಕೆಟ್ ದರ ಎಷ್ಟು?
ಕರ್ನಾಟಕದ ಪ್ರವಾಸಿ ತಾಣಗಳಿಂದ ಗೋವಾವರೆಗೆ ಗೋಲ್ಡನ್ ಚಾರಿಯೆಟ್ ಐಷಾರಾಮಿ ರೈಲು ಸಂಚಾರ ಆರಂಭಿಸಿದೆ. ಆರು ದಿನಗಳ ಪ್ರವಾಸದ ಟಿಕೆಟ್ ದರ 4.4 ಲಕ್ಷ ರೂ.ವರೆಗೆ ಇದೆ.
ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳನ್ನು ಐಷಾರಾಮಿಯಾಗಿ ಸುತ್ತಾಡಲು ಗೋಲ್ಡನ್ ಚಾರಿಯೆಟ್ ರೈಲು ಸಜ್ಜಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರೈಲಿಗೆ ಚಾಲನೆ ನೀಡಿದ್ದಾರೆ. ಬೆಂಗಳೂರಿನಿಂದ ಹೊರಡುವ ಈ ರೈಲು ಬಂಡೀಪುರ, ಮೈಸೂರು, ಬೇಲೂರು, ಹಳೇಬೀಡು, ಚಿಕ್ಕಮಗಳೂರು, ಹಂಪಿ ಮೂಲಕ ಗೋವಾವರೆಗೆ ಸಂಚರಿಸಲಿದೆ. ಐದು ರಾತ್ರಿ, ಆರು ದಿನಗಳ ಈ ಪ್ರವಾಸದಲ್ಲಿ ಜಿಮ್, ಸ್ಪಾ, ಬಾರ್, ಮೂರು ರೆಸ್ಟೋರೆಂಟ್ ಸೇರಿದಂತೆ ಹಲವು ಐಷಾರಾಮಿ ಸೌಲಭ್ಯಗಳಿವೆ. ಕೇವಲ 75 ಪ್ರಯಾಣಿಕರಿಗೆ ಅವಕಾಶವಿರುವ ಈ ರೈಲಿನ ಟಿಕೆಟ್ ದರ ಪ್ರತಿ ಪ್ರಯಾಣಿಕರಿಗೆ ₹3.5 ಲಕ್ಷದಿಂದ ₹4.4 ಲಕ್ಷದವರೆಗೆ ಇದೆ.
Next Story
