ಕೊರಿಯನ್ ಗೇಮ್‌ಗೆ ಬಲಿಯಾದರೇ ಮೂವರು ಸಹೋದರಿಯರು? ಡೆತ್‌ನೋಟ್‌ನಲ್ಲಿ ಏನಿತ್ತು?
x

ಬಾಲಕಿಯರ ಕೊಠಡಿಯಲ್ಲಿ "ಸಾರಿ ಪಾಪಾ" ಎಂದು ಬರೆದ ಪತ್ರ ಸಿಕ್ಕಿದೆ. ಅದರಲ್ಲಿ ತಾವು ಬರೆದಿರುವ ಡೈರಿಯನ್ನು ಓದುವಂತೆ ಹಾಗೂ ಅದರಲ್ಲಿರುವ ವಿಷಯಗಳೇ ಸತ್ಯವೆಂದು ಅವರು ಪೋಷಕರಲ್ಲಿ ವಿನಂತಿಸಿದ್ದಾರೆ.

ಕೊರಿಯನ್ ಗೇಮ್‌ಗೆ ಬಲಿಯಾದರೇ ಮೂವರು ಸಹೋದರಿಯರು? ಡೆತ್‌ನೋಟ್‌ನಲ್ಲಿ ಏನಿತ್ತು?

ಬಾಲಕಿಯರು ಒಂದು ನಿಗೂಢ ಕೊರಿಯನ್ ಟಾಸ್ಕ್-ಆಧಾರಿತ ಆನ್‌ಲೈನ್ ಗೇಮ್‌ಗೆ ದಾಸರಾಗಿದ್ದರು ಎಂದು ಶಂಕಿಸಲಾಗಿದೆ. ಈ ಗೇಮ್‌ನ ಕೊನೆಯ ಹಂತವಾಗಿ ಅವರು ಈ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆ ಇದೆ.


Click the Play button to hear this message in audio format

ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಆನ್‌ಲೈನ್ ಗೇಮಿಂಗ್ ಚಟಕ್ಕೆ ಮೂವರು ಅಪ್ರಾಪ್ತ ಸಹೋದರಿಯರು ಬಲಿಯಾಗಿರುವ ಆಘಾತಕಾರಿ ಘಟನೆಗೆ ಸಂಬಂಧಿಸಿದಂತೆ, ಈ ದುರಂತಕ್ಕೆ ಯಾವುದೋ ಅನಾಮಧೇಯ ಕೊರಿಯನ್ ಟಾಸ್ಕ್ ಆಧಾರಿತ ಗೇಮಿಂಗ್ ಆ್ಯಪ್ ಕಾರಣವಿರಬಹುದು ಎಂದು ಸಂಶಯ ವ್ಯಕ್ತವಾಗಿದೆ.

ಬಾಲಕಿಯರ ತಂದೆ ಚೇತನ್ ಕುಮಾರ್ ಅವರು ಪೋಲೀಸರ ಮಾಹಿತಿಯನ್ನಾಧರಿಸಿ, ತಮ್ಮ ಮಕ್ಕಳು ಆನ್‌ಲೈನ್ ಗೇಮ್‌ ಚಟಕ್ಕೆ ಬಿದ್ದಿದ್ದರು ಎಂದು ತಿಳಿಸಿದ್ದಾರೆ. ಪೋಲಿಸ್ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಅವರು ಯಾವುದೋ ಕೊರಿಯನ್ ಗೇಮ್ ಆಡುತ್ತಿದ್ದರು ಮತ್ತು ನಿನ್ನೆ ಅದರಲ್ಲಿ ನೀಡಲಾಗಿದ್ದ ಕೊನೆಯ ಟಾಸ್ಕ್ ಆಗಿತ್ತು ಎಂದು ಅವರು ನೋವಿನಿಂದ ನುಡಿದಿದ್ದಾರೆ. ಬಾಲಕಿಯರು ಲೂಡೋ ಆಡುತ್ತಿದ್ದಾರೆ ಎಂದು ತಾವು ಭಾವಿಸಿದ್ದಾಗಿ ಅವರು ತಿಳಿಸಿದ್ದಾರೆ.

'ಸಾರಿ ಅಪ್ಪ' ಎಂದು ಬರೆದಿದ್ದ ಡೆತ್ ನೋಟ್‌

ಬಾಲಕಿಯರ ಕೊಠಡಿಯಲ್ಲಿ ಒಂದು ಪುಟದ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಅಳುತ್ತಿರುವ ಎಮೋಜಿಯೊಂದಿಗೆ ʻಸಾರಿ ಅಪ್ಪʼ ಎಂದು ಬರೆಯಲಾಗಿದೆ. ಇದು ನಿಜ ಜೀವನದ ಕಥೆ. ಈ ಡೈರಿಯಲ್ಲಿ ಬರೆದಿರುವ ಪ್ರತಿಯೊಂದನ್ನೂ ಓದಿ, ಯಾಕೆಂದರೆ ಇದೆಲ್ಲವೂ ಸತ್ಯ ಎಂದು ಬಾಲಕಿಯರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಘಟನಾ ಸ್ಥಳದಲ್ಲಿ ಕುಟುಂಬ ಸದಸ್ಯರ ಫೋಟೋಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ.

ಘಟನೆಯ ಬಗ್ಗೆ ಮಾಹಿತಿ ನೀಡಿದ ಎಸ್‌ಪಿ ಅತುಲ್ ಕುಮಾರ್ ಸಿಂಗ್, "ಮೂವರು ಬಾಲಕಿಯರು ಒಂಬತ್ತನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅವರು ಕೊರಿಯನ್ ಸಂಸ್ಕೃತಿಯಿಂದ ಪ್ರಭಾವಿತರಾಗಿದ್ದರು ಎಂಬುದು ತಿಳಿದುಬಂದಿದೆ. ಡಿಜಿಟಲ್ ಪುರಾವೆಗಳಿಗಾಗಿ ಸೈಬರ್ ತಜ್ಞರ ನೆರವು ಪಡೆಯುತ್ತಿದ್ದೇವೆ. ಬಾಲಕಿಯರು ಬಾಲ್ಕನಿಯಿಂದ ಜಿಗಿಯಲು ಏಣಿಯನ್ನು ಬಳಸಿರುವ ಶಂಕೆ ಇದ್ದು, 14 ವರ್ಷದ ಬಾಲಕಿಯೇ ಈ ಆಟದ 'ಲೀಡರ್' ಆಗಿ ಕಾರ್ಯನಿರ್ವಹಿಸುತ್ತಿದ್ದಳು. ಮೊದಲು ಈಕೆ ಹಾರಿದ್ದಾಳೆ. ನಂತರ ಇನ್ನಿಬ್ಬರು ಮೇಲಿನಿಂದ ಜಿಗಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಪೋಲಿಸರು ಬಾಲಕಿಯರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Read More
Next Story