Amazon
x

ಉದ್ಯೋಗ ಕಡಿತದ ಈ ಪ್ರವೃತ್ತಿ ಕೇವಲ ಅಮೆಜಾನ್‌ಗೆ ಮಾತ್ರ ಸೀಮಿತವಾಗಿಲ್ಲ. ಟೆಕ್ ವಲಯದ ಉದ್ಯೋಗ ನಷ್ಟದ ಮೇಲೆ ನಿಗಾ ಇಡುವ 'ಲೇಆಫ್ಸ್.ಎಫ್‌ವೈಐ' ವರದಿಯ ಪ್ರಕಾರ, ಈ ವರ್ಷವೊಂದರಲ್ಲೇ ವಿಶ್ವಾದ್ಯಂತ 1.35 ಲಕ್ಷಕ್ಕೂ ಹೆಚ್ಚು ಟೆಕ್ ಉದ್ಯೋಗಗಳು ನಷ್ಟವಾಗಿವೆ. 

ಅಮೆಜಾನ್‌ನಿಂದ ಮತ್ತೆ ಉದ್ಯೋಗ ಕಡಿತ: 250 ಸಿಬ್ಬಂದಿಗೆ ಮುಂಜಾನೆ ಎದ್ದೇಳುವಾಗ ಬಂತು ಕೆಲಸ ಕಡಿತದ ಇ ಮೇಲ್​​

ಉದ್ಯೋಗ ಕಡಿತದ ನಿರ್ಧಾರವೂ ಹೊರಬಿದ್ದಿದೆ. ಕಂಪನಿಯ ಸಾಧನಗಳ ವಿಭಾಗವು ಮರುವಿನ್ಯಾಸಗೊಳಿಸಲಾದ ಎಕೋ ಶೋ 16 ಸ್ಮಾರ್ಟ್ ಡಿಸ್‌ಪ್ಲೇ, ಅಲೆಕ್ಸಾ ಫೋಟೋ ಫ್ರೇಮ್ ಹಾಗೂ ಎಕೋ ಟೈಮ್ ಬೆಡ್‌ಸೈಡ್ ಕ್ಲಾಕ್ ಅನ್ನು ಅನಾವರಣಗೊಳಿಸಿದೆ.


Click the Play button to hear this message in audio format

ಜಾಗತಿಕ ಟೆಕ್ ವಲಯದಲ್ಲಿ ಉದ್ಯೋಗ ಕಡಿತದ ಕಾರ್ಮೋಡ ಇನ್ನೂ ಮುಗಿದಿಲ್ಲ. ಇ-ಕಾಮರ್ಸ್ ಮತ್ತು ತಂತ್ರಜ್ಞಾನ ದೈತ್ಯ ಅಮೆಜಾನ್ ಮತ್ತೊಮ್ಮೆ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದ್ದು, ಹೊಸದಾಗಿ 250ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದೆ. ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಅಮೆಜಾನ್ ವಕ್ತಾರರು, ಕಂಪನಿಯ ಕೆಲವು ವಿಭಾಗಗಳಲ್ಲಿ ಸಣ್ಣ ಪ್ರಮಾಣದ ಹುದ್ದೆಗಳನ್ನು ಕಡಿತಗೊಳಿಸುವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಂಸ್ಥೆಯ ಉತ್ಪನ್ನಗಳ ಭವಿಷ್ಯದ ಮಾರ್ಗಸೂಚಿಗೆ ಅನುಗುಣವಾಗಿ ಮತ್ತು ಕಾರ್ಯನಿರ್ವಹಣೆಯನ್ನು ಮತ್ತಷ್ಟು ಚುರುಕುಗೊಳಿಸುವ ದೃಷ್ಟಿಯಿಂದ ಈ ಹೆಜ್ಜೆ ಇಡಲಾಗಿದೆ ಎಂದು ಕಂಪನಿ ಸಮರ್ಥಿಸಿಕೊಂಡಿದೆ.

ಎಐ ತಂತ್ರಜ್ಞಾನಕ್ಕೆ ಮಣೆ, ಉದ್ಯೋಗಿಗಳಿಗೆ ಕುತ್ತು

ತಂತ್ರಜ್ಞಾನ ಕ್ಷೇತ್ರವು ಕೃತಕ ಬುದ್ಧಿಮತ್ತೆಯ (ಎಐ) ಕಡೆಗೆ ವೇಗವಾಗಿ ವಾಲುತ್ತಿರುವುದೇ ಈ ಉದ್ಯೋಗ ಕಡಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಅಮೆಜಾನ್ ತನ್ನ ಎಂಜಿನಿಯರಿಂಗ್ ವಿಭಾಗದ ನಾಯಕತ್ವಕ್ಕೆ ಇತ್ತೀಚೆಗಷ್ಟೇ ಕಳುಹಿಸಿದ್ದ ಆಂತರಿಕ ಸುತ್ತೋಲೆಯಲ್ಲಿ, ಎಐ ತಂತ್ರಜ್ಞಾನವನ್ನು ಅಪ್ಪಿಕೊಳ್ಳುವಂತೆ ಅಥವಾ ಹಿಂದುಳಿಯುವ ಅಪಾಯವನ್ನು ಎದುರಿಸುವಂತೆ ಎಚ್ಚರಿಕೆ ನೀಡಿತ್ತು. ಸಾಫ್ಟ್‌ವೇರ್ ಎಂಜಿನಿಯರಿಂಗ್ ವಿಭಾಗದಲ್ಲಿ ಎಐ ಪ್ರಮುಖ ಪಾತ್ರ ವಹಿಸಲಿದೆ ಎಂಬ ಸುಳಿವನ್ನು ಕಂಪನಿ ನೀಡಿತ್ತು. ಒಂದೆಡೆ ಉದ್ಯೋಗ ಕಡಿತ ಮಾಡುತ್ತಿರುವ ಅಮೆಜಾನ್, ಮತ್ತೊಂದೆಡೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅಭಿವೃದ್ಧಿಗಾಗಿ ಈ ವರ್ಷ ಬರೋಬ್ಬರಿ 220 ಶತಕೋಟಿ ಡಾಲರ್ (ಸುಮಾರು 18 ಲಕ್ಷ ಕೋಟಿ ರೂ.) ಬೃಹತ್ ಬಂಡವಾಳ ಹೂಡಿಕೆ ಮಾಡಲು ಸಜ್ಜಾಗಿದೆ.

ಹೊಸ ಉತ್ಪನ್ನಗಳ ಬಿಡುಗಡೆಯ ದಿನವೇ ಲೇಆಫ್ ಶಾಕ್

ವಿಶೇಷವೆಂದರೆ, ಅಮೆಜಾನ್ ತನ್ನ ಅಲೆಕ್ಸಾ ಆಧಾರಿತ ಐದು ಹೊಸ ಸ್ಮಾರ್ಟ್ ಸಾಧನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ದಿನವೇ ಈ ಉದ್ಯೋಗ ಕಡಿತದ ನಿರ್ಧಾರವೂ ಹೊರಬಿದ್ದಿದೆ. ಕಂಪನಿಯ ಸಾಧನಗಳ ವಿಭಾಗವು ಮರುವಿನ್ಯಾಸಗೊಳಿಸಲಾದ ಎಕೋ ಶೋ 16 ಸ್ಮಾರ್ಟ್ ಡಿಸ್‌ಪ್ಲೇ, ಅಲೆಕ್ಸಾ ಫೋಟೋ ಫ್ರೇಮ್ ಹಾಗೂ ಎಕೋ ಟೈಮ್ ಬೆಡ್‌ಸೈಡ್ ಕ್ಲಾಕ್ ಅನ್ನು ಅನಾವರಣಗೊಳಿಸಿದೆ. ಇಷ್ಟೆಲ್ಲಾ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಿರುವ ಸಂದರ್ಭದಲ್ಲೇ ಸಿಬ್ಬಂದಿಯನ್ನು ವಜಾಗೊಳಿಸುತ್ತಿರುವುದು ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ. ಇದೇ ತಿಂಗಳ ಆರಂಭದಲ್ಲಿ ಅಮೆಜಾನ್ ತನ್ನ ಪ್ರಮುಖ ಚಿಲ್ಲರೆ (ರಿಟೇಲ್) ವಿಭಾಗದಲ್ಲಿ ಸುಮಾರು 1,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಅಲ್ಲದೆ, ಈ ವರ್ಷದ ಜನವರಿಯಲ್ಲಿ 16,000 ಹಾಗೂ ಕಳೆದ ವರ್ಷದ ಅಕ್ಟೋಬರ್‌ನಲ್ಲಿ 14,000 ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿತ್ತು.

ಟೆಕ್ ದೈತ್ಯ ಕಂಪನಿಗಳಲ್ಲಿ ಮುಂದುವರಿದ ಕಡಿತ

ಉದ್ಯೋಗ ಕಡಿತದ ಈ ಪ್ರವೃತ್ತಿ ಕೇವಲ ಅಮೆಜಾನ್‌ಗೆ ಮಾತ್ರ ಸೀಮಿತವಾಗಿಲ್ಲ. ಟೆಕ್ ವಲಯದ ಉದ್ಯೋಗ ನಷ್ಟದ ಮೇಲೆ ನಿಗಾ ಇಡುವ 'ಲೇಆಫ್ಸ್.ಎಫ್‌ವೈಐ' ವರದಿಯ ಪ್ರಕಾರ, ಈ ವರ್ಷವೊಂದರಲ್ಲೇ ವಿಶ್ವಾದ್ಯಂತ 1.35 ಲಕ್ಷಕ್ಕೂ ಹೆಚ್ಚು ಟೆಕ್ ಉದ್ಯೋಗಗಳು ನಷ್ಟವಾಗಿವೆ. ಇತ್ತೀಚೆಗಷ್ಟೇ ಪ್ರಸಿದ್ಧ ಕ್ಲೌಡ್ ಸ್ಟೋರೇಜ್ ಕಂಪನಿ ಡ್ರಾಪ್‌ಬಾಕ್ಸ್ ತನ್ನ ಜಾಗತಿಕ ಕಾರ್ಯಪಡೆಯ ಶೇಕಡಾ 9ರಷ್ಟು ಸಿಬ್ಬಂದಿಯನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಮತ್ತೊಂದೆಡೆ, ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್ ತನ್ನ ಒಟ್ಟು ಉದ್ಯೋಗಿಗಳ ಪೈಕಿ ನಾಲ್ವರಲ್ಲಿ ಒಬ್ಬರಿಗೆ, ಅಂದರೆ ಸುಮಾರು 60,000 ಸಿಬ್ಬಂದಿಗೆ ಸ್ವಯಂ ನಿರ್ಗಮನದ (ವಿಆರ್‌ಎಸ್) ಆಯ್ಕೆಯನ್ನು ಮುಂದಿಟ್ಟಿದೆ. ಒಟ್ಟಾರೆಯಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಈ ದಿಢೀರ್ ಬೆಳವಣಿಗೆಗಳು ಐಟಿ ಉದ್ಯೋಗಿಗಳಲ್ಲಿ ತೀವ್ರ ಅಭದ್ರತೆ ಸೃಷ್ಟಿಸಿವೆ.

Read More
Next Story