ಅಮರನಾಥ ಯಾತ್ರಿಕರಿಗೆ ಬಿಗ್ ಶಾಕ್! ವೇಗವಾಗಿ ಕರಗ್ತಿದೆ ಪವಿತ್ರ ಹಿಮಲಿಂಗ
ಹವಾಮಾನ ಬದಲಾವಣೆ ಮತ್ತು ಹಿಮಾಲಯದ ಏರುತ್ತಿರುವ ತಾಪಮಾನವೂ ಹಿಮಲಿಂಗ ಬೇಗ ಕರಗಲು ಪ್ರಮುಖ ಕಾರಣವಾಗಿರಬಹುದು ಎಂದು ಹೇಳುತ್ತಿದ್ದಾರೆ.
ಜಮ್ಮು-ಕಾಶ್ಮೀರದ ಅಮರನಾಥ ಗುಹೆಯಲ್ಲಿರುವ ಸ್ವಾಭಾವಿಕ ಹಿಮಲಿಂಗ ಈ ಬಾರಿ ವೇಗವಾಗಿ ಕುಗ್ಗುತ್ತಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಮೊದಲ ನಾಲ್ಕೇ ದಿನಗಳಲ್ಲಿ ಸುಮಾರು 93 ಸಾವಿರಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದಾರೆ. ಈ ದಾಖಲೆ ಸಂಖ್ಯೆಯ ಯಾತ್ರಿಕರಿಂದ ಗುಹೆಯೊಳಗಿನ ಪರಿಸರದ ಮೇಲೆ ಒತ್ತಡ ಹೆಚ್ಚಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ.
ಮತ್ತೊಂದೆಡೆ, ತಜ್ಞರು ಹವಾಮಾನ ಬದಲಾವಣೆ ಮತ್ತು ಹಿಮಾಲಯದ ಏರುತ್ತಿರುವ ತಾಪಮಾನವೂ ಹಿಮಲಿಂಗ ಬೇಗ ಕರಗಲು ಪ್ರಮುಖ ಕಾರಣವಾಗಿರಬಹುದು ಎಂದು ಹೇಳುತ್ತಿದ್ದಾರೆ. ಇದರ ನಡುವೆ ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ, ಯಾತ್ರಿಕರ ಸಂಖ್ಯೆಗೆ ಮಿತಿ ವಿಧಿಸುವ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಉಲ್ಲೇಖಿಸಿ, ಪರಿಸರ ಸಂರಕ್ಷಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
Next Story

