
ಅಜಿತ್ ಪವಾರ್ ವಿಮಾನದ ಕಾಕ್‌ಪಿಟ್‌ನಲ್ಲಿ ಕೊನೆಯ ಕ್ಷಣದ ಮಾತು ರೆಕಾರ್ಡ್
ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನರಾದ ಕರಾಳ ಕ್ಷಣದ ಕಾಕ್‌ಪಿಟ್ ಧ್ವನಿ ಮುದ್ರಣ ಬಹಿರಂಗವಾಗಿದೆ.
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಇದ್ದ ವಿಮಾನ ದುರಂತದ ಬಗ್ಗೆ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದೆ. ಅಪಘಾತ ಸಂಭವಿಸುವ ಕೇವಲ ಕೆಲವು ಕ್ಷಣಗಳ ಮೊದಲು ವಿಮಾನದ ಪೈಲಟ್‌ಗಳು ಆಡಿದ ಕೊನೆಯ ಕ್ಷಣದ ಮಾತುಗಳು "Oh S*"** ಎಂಬುದು ಈಗ ತನಿಖೆಯಿಂದ ತಿಳಿದುಬಂದಿದೆ.
ಅಪಘಾತದ ಆಘಾತಕಾರಿ ಕ್ಷಣಗಳು
ಬುಧವಾರ ಬೆಳಗ್ಗೆ 8:45ರ ಸುಮಾರಿಗೆ ಸಂಭವಿಸಿದ ಈ ದುರಂತದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐವರು ಮೃತಪಟ್ಟಿದ್ದರು. ಪೈಲಟ್-ಇನ್-ಕಮಾಂಡ್ ಸುಮಿತ್ ಕಪೂರ್ (15,000 ಗಂಟೆಗಳ ಹಾರಾಟದ ಅನುಭವ ಹೊಂದಿದ್ದವರು) ಮತ್ತು ಫಸ್ಟ್ ಆಫೀಸರ್ ಶಾಂಭವಿ ಪಾಠಕ್ ವಿಮಾನವನ್ನು ನಿಯಂತ್ರಿಸುತ್ತಿದ್ದರು. ಡಿಜಿಸಿಎ ಮೂಲಗಳ ಪ್ರಕಾರ, ಕಾಕ್‌ಪಿಟ್‌ನಿಂದ ಕೇಳಿಬಂದ ಕೊನೆಯ ಧ್ವನಿ ಅತ್ಯಂತ ಆತಂಕಕಾರಿಯಾಗಿತ್ತು.
ಘಟನೆಗಳ ಸರಣಿ
ನಾಗರಿಕ ವಿಮಾನಯಾನ ಸಚಿವಾಲಯವು ಬಿಡುಗಡೆ ಮಾಡಿದ ವರದಿಯಂತೆ ಅಪಘಾತದ ಮೊದಲು ನಡೆದ ಸಂವಹನ ಹೀಗಿದೆ. ಬೆಳಗ್ಗೆ 8:18 ಸುಮಾರಿಗೆ ವಿಮಾನವು ಬಾರಾಮತಿ ವಿಮಾನ ನಿಲ್ದಾಣದ ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕ ಸಾಧಿಸಿತು. ಪೈಲಟ್‌ಗಳು ಗಾಳಿಯ ವೇಗ ಮತ್ತು ಗೋಚರತೆಯ ಬಗ್ಗೆ ಮಾಹಿತಿ ಕೇಳಿದರು. ಆಗ 3,000 ಮೀಟರ್‌ಗಳಷ್ಟು (3 ಕಿ.ಮೀ) ಗೋಚರತೆ ಇದೆ ಎಂದು ತಿಳಿಸಲಾಯಿತು, ಇದು ಲ್ಯಾಂಡಿಂಗ್ ಮಾಡಲು ಪೂರಕವಾದ ವಾತಾವರಣವಾಗಿತ್ತು.
ರನ್‌ವೇ 11 ರಲ್ಲಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದಾಗ, ಪೈಲಟ್‌ಗಳು "ರನ್‌ವೇ ಕಾಣಿಸುತ್ತಿಲ್ಲ" ಎಂದು ತಿಳಿಸಿದರು. ತಕ್ಷಣವೇ ಅವರಿಗೆ 'ಗೋ-ಅರೌಂಡ್' (ಲ್ಯಾಂಡಿಂಗ್ ಕೈಬಿಟ್ಟು ಮತ್ತೆ ವಿಮಾನವನ್ನು ಎತ್ತರಕ್ಕೆ ಕೊಂಡೊಯ್ಯುವುದು) ಮಾಡಲು ಸೂಚಿಸಲಾಯಿತು.
ಮರು ಲ್ಯಾಂಡಿಂಗ್ ಪ್ರಯತ್ನದ ವೇಳೆ, "ರನ್‌ವೇ ಕಾಣಿಸುತ್ತಿದೆ" ಎಂದು ಪೈಲಟ್‌ಗಳು ದೃಢಪಡಿಸಿದರು. ಎಟಿಸಿ (ATC) ವಿಮಾನಕ್ಕೆ ಲ್ಯಾಂಡಿಂಗ್ ಮಾಡಲು ಅನುಮತಿ ನೀಡಿತು. ಆದರೆ, ನಿಯಮದಂತೆ ಪೈಲಟ್‌ಗಳು ಆ ಅನುಮತಿಯನ್ನು ಮರುದೃಢೀಕರಿಸುವ 'Readback' ಸಂದೇಶವನ್ನು ನೀಡಲಿಲ್ಲ.ಕೇವಲ ಒಂದು ನಿಮಿಷದ ನಂತರ, ರನ್‌ವೇ ಸಮೀಪ ವಿಮಾನವು ಅಪ್ಪಳಿಸಿ ಬೆಂಕಿ ಕಾಣಿಸಿಕೊಂಡಿದ್ದನ್ನು ಸಿಬ್ಬಂದಿ ಗಮನಿಸಿದರು.
ತನಿಖೆಯ ಹಾದಿ
ಬಾರಾಮತಿಯಲ್ಲಿ ಪೂರ್ಣ ಪ್ರಮಾಣದ ಎಟಿಸಿ ಇಲ್ಲದ ಕಾರಣ, ಅಲ್ಲಿನ ಖಾಸಗಿ ಏವಿಯೇಷನ್ ಅಕಾಡೆಮಿಗಳ ಕೆಡೆಟ್ ಪೈಲಟ್‌ಗಳೇ ಸಂಪರ್ಕ ಕೊಂಡಿಯಾಗಿದ್ದರು. ಸದ್ಯ ಏರ್‌ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಶನ್ ಬ್ಯೂರೋ (AAIB) ಸ್ಥಳಕ್ಕೆ ಭೇಟಿ ನೀಡಿದ್ದು, ವಿಮಾನದ ಫೋರೆನ್ಸಿಕ್ ತನಿಖೆಯನ್ನು ಆರಂಭಿಸಿದೆ.

