ವಿಮಾನ ಅವಘಡ: ಗುರುವಾರ ಅಜಿತ್‌ ಪವಾರ್‌ ಅಂತ್ಯ ಸಂಸ್ಕಾರ;  ಸಾವಿನ ತನಿಖೆಗೆ ಖರ್ಗೆ ಅಗ್ರಹ,
x
ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್

ವಿಮಾನ ಅವಘಡ: ಗುರುವಾರ ಅಜಿತ್‌ ಪವಾರ್‌ ಅಂತ್ಯ ಸಂಸ್ಕಾರ; ಸಾವಿನ ತನಿಖೆಗೆ ಖರ್ಗೆ ಅಗ್ರಹ,

ಮಹಾರಾಷ್ಟ್ರದ ಬಾರಾಮತಿಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಂಡಿಂಗ್ ವೇಳೆ ಪತನಗೊಂಡಿದೆ. ವಿಮಾನದಲ್ಲಿದ್ದ ನಾಲ್ಕೈದು ಮಂದಿಗೆ ಗಂಭೀರ ಗಾಯಗಳಾಗಿವೆ.


Click the Play button to hear this message in audio format

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನವು ಪತನಗೊಂಡಿದೆ. ಮಹಾರಾಷ್ಟ್ರದ ಭಾರಾಮತಿಯಲ್ಲಿ ಈ ದುರಂತ ಸಂಭವಿಸಿದೆ. ಲ್ಯಾಂಡಿಂಗ್ ಆಗುವ ಸಂದರ್ಭದಲ್ಲಿ ತಾಂತ್ರಿಕ ದೋಷಗಳಿಂದ ಅಪಘಾತಕ್ಕೀಡಾಗಿದೆ.

ಭೀಕರ ದುರಂತದ ದೃಶ್ಯ

ಘಟನೆ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.ಇನ್ನು ವಿಮಾನದಲ್ಲಿ ನಾಲ್ಕರಿಂದ ಐದು ಜನರಿದ್ದರು. ವಿಮಾನದಲ್ಲಿದ್ದವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ದುರ್ಘಟನೆ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.

Live Updates

  • 28 Jan 2026 9:55 AM IST

    ಭೀಕರ ವಿಮಾನ ದುರಂತದಲ್ಲಿ ಅಜಿತ್‌ ಪವಾರ್‌ ಸಾವು

    ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರು ಪ್ರಯಾಣಿಸುತ್ತಿದ್ದ ವಿಮಾನವು ಪತನಗೊಂಡು, ಅವರು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಹಲವಾರು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡುತ್ತಿವೆ.

  • 28 Jan 2026 9:48 AM IST

    ವಿಮಾನ ಪತನದಲ್ಲಿ ಒಟ್ಟು ಐವರು ಬಲಿ

    ವಿಮಾನ ಪತನದಲ್ಲಿ ಒಟ್ಟು ಐವರು ಮೃತಪಟ್ಟಿದ್ದಾರೆ. ಮೂವರು ಪ್ರಯಾಣಿಕರು ಮತ್ತು ಇಬ್ಬರು ಪೈಲಟ್‌ಗಳು ದಾರುಣವಾಗಿ ಬಲಿಯಾಗಿದ್ದಾರೆ ಎನ್ನಲಾಗಿದೆ. ಆದರೆ ಮೃತರಲ್ಲಿ ಅಜಿತ್‌ ಪವಾರ್‌ ಕೂಡ ಸೇರಿದ್ದಾರೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಎಎನ್‌ಐ ತಿಳಿಸಿದೆ.

  • 28 Jan 2026 9:46 AM IST

    ಪತನಗೊಂಡಿದ್ದ ವಿಮಾನದಲ್ಲಿದ್ದರು ಅಜಿತ್‌ ಪವಾರ್‌

    ಪತನಗೊಂಡಿದ್ದ ವಿಮಾನದಲ್ಲಿ ಅಜಿತ್‌ ಪವಾರ್‌ ಇದ್ದರು ಎಂದು ಎಎನ್‌ಐ ವರದಿ ಮಾಡಿದೆ. 

  • 28 Jan 2026 9:44 AM IST

    ಬಾರಾಮತಿಯಲ್ಲಿ ಆಯೋಜನೆಯಾಗಿದ್ದ ರ್ಯಾಲಿ

    ಬಾರಾಮತಿಯಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಅಜಿತ್‌ ಪವಾರ್‌ ಭಾಗಿಯಾಗಬೇಕಿತ್ತು. ಇದೇ ನಿಟ್ಟಿನಲ್ಲಿ ಅವರು ಆಗಮಿಸಿದ್ದರು ಎನ್ನಲಾಗಿದೆ. ಆದರೆ ವಿಮಾನದಲ್ಲಿ ಅವರು ಇದ್ದರೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಸ್ಥಳೀಯ ರ ಮಾಹಿತಿ ಪ್ರಕಾರ ಗಂಭೀರವಾಗಿ ಗಾಯಗೊಂಡಿದ್ದ ಅಜಿತ್‌ ಪವಾರ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎನ್ನಲಾಗಿದೆ.

Read More
Next Story