
Karnataka legislative session: ವಿಧಾನ ಪರಿಷತ್‌ನಲ್ಲಿ ಮುಂದುವರಿದ ಪ್ರತಿಭಟನೆ
ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.
ಇಂದು ಬುಧವಾರ ಜನವರಿ 28, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪ್ರಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.
Live Updates
- 28 Jan 2026 3:40 PM IST
ಫೋನ್ ಕದ್ದಾಲಿಕೆ, ಪರಸ್ಪರ ಆರೋಪ
ರಾಜಭವನದ ಮೇಲೆ ಕಾನೂನು ಸಚಿವರು, ಇತರೆ ಸಚಿವರು ಆರೋಪ ಮಾಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದಿಂದ ರಾಜ್ಯಪಾಲರಿಗೆ ಕರೆ ಬಂದಿತ್ತು ಎಂದು ತಿಳಿಸಿದ್ದಾರೆ. ಹಾಗಾದರೆ ಇವರಿಗೆ ಕರೆ ಬಂದಿರುವ ಬಗ್ಗೆ ಮಾಹಿತಿ ಹೇಗೆ ಬಂತು ಎಂದು ಶಾಸಕ ಸುರೇಶ್ ಕುಮಾರ್ ಪ್ರಶ್ನಿಸಿದರು.
ಈ ವೇಳೆ ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಈ ಹಿಂದೆ ಬೈರೇಗೌಡರು ಇದ್ದಾಗ ಸರ್ಕಾರವೇ ಬಿದ್ದೋಗಿದೆ. ಹೇಗೆ ಫೋನ್ ಕದ್ದಾಲಿಕೆ ಮಾಡಾಗುತ್ತಿದೆ ಎಂದು ಆರೋಪ ಮಾಡುತ್ತಿದ್ದು, ನಾನು ಕೇಳಿಸಿಕೊಂಡು ಕೂರಬೇಕಾ.? ನಾನು ಜವಾಬ್ದಾರಿಯುತ ಸಚಿವ, ನನಗೆ ಯಾರೂ ಕರೆ ಮಾಡಿಲ್ಲ ಅಂತ ರಾಜ್ಯಪಾಲರೇ ಹೇಳಬೇಕಿತ್ತು ಅಥವಾ ಕೇಂದ್ರದವರೇ ಹೇಳಬೇಕಿತ್ತು ಎಂದರು.
ಎಚ್.ಕೆ. ಪಾಟೀಲ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಸುರೇಶ್ ಕುಮಾರ್, ನೀವು ಜವಾಬ್ದಾರಿ ವ್ಯಕ್ತಿ ಎಂದು ಹೇಳಿದ್ದೀರಿ, ಬೇಜವಾಬ್ದಾರಿ ಹೇಳಿಕೆಯನ್ನ ನೀಡಬೇಡಿ. ನೀವೇ ರಾಜ್ಯಪಾಲರ ಮೇಲೆ ಆರೋಪ ಮಾಡಿದ್ದಿರೀ. ರಾಜ್ಯಪಾಲರು ಸದನಕ್ಕೆ ಬಂದು ಉತ್ತರ ಕೊಡಲು ಸಾಧ್ಯವಾ.? ಇಂತ ಹೇಳಿಕೆ ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ ಎಂದು ಸಚಿವರನ್ನ ತರಾಟೆಗೆ ತೆಗೆದುಕೊಂಡರು.
- 28 Jan 2026 3:28 PM IST
ರಾಜ್ಯ ಸರ್ಕಾರದಿಂದ ಆರ್‌ಎಸ್‌ಎಸ್ ಕಚೇರಿ ಫೋನ್ ಕದ್ದಾಲಿಕೆ: ಆರ್. ಅಶೋಕ್ ಆರೋಪ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿಯ ಪೋನ್‌ನನ್ನು ರಾಜ್ಯ ಸರ್ಕಾರ ಕದ್ದಾಲಿಕೆ ಮಾಡುತ್ತಿದೆ. ಈ ವಿಚಾರವನ್ನು ರಾಜಭವನ ಹಾಗೂ ಆರ್‌ಎಸ್‌ಎಸ್ ಕಚೇರಿ ದೃಢಪಡಿಸಿವೆ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ.
ನಮ್ಮ ಫೋನ್‌ಗಳನ್ನು ಕೂಡ ಸರ್ಕಾರ ಕದ್ದಾಲಿಕೆ ಮಾಡುತ್ತಿದೆ. ಹಿಂದೆ ಫೋನ್ ಟ್ಯಾಪಿಂಗ್ ಮಾಡಿದ್ದ ಸರ್ಕಾರಗಳೆಲ್ಲವೂ ಬಿದ್ದು ಹೋಗಿವೆ ಎಂದು ತಿಳಿಸಿದರು.

- 28 Jan 2026 2:03 PM IST
ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರ ನೀಡಲು ಸರ್ಕಾರ ಸಿದ್ಧ: ಸಿಎಂ
ವಿಧಾನಸಭೆಯಲ್ಲಿ ಎಲ್ಲರೂ ಗೌರವಯುತವಾಗಿ ಚರ್ಚೆ ಮಾಡಬೇಕು. ಎಲ್ಲರೂ ಎದ್ದು ನಿಂತರೆ ಹೇಗೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿದರು.
ನಿಯಮಾವಳಿ ಪ್ರಕಾರ ಸದನ ನಡೆಯಬೇಕು. ನಿಮ್ಮ ಉದ್ದೇಶ ನನಗೆ ಅರ್ಥವಾಗುತ್ತದೆ. ವಿಪಕ್ಷ ನಾಯಕರು ಮಾತಾನಾಡುತ್ತರೆ, ಅವರಿಗೆ ಮಾತಾಡಲು ಶಕ್ತಿ ಇದೆ. ನೀವೆಲ್ಲಾ ಯಾಕೆ ಮಾತನಾಡುತ್ತೀರಿ ಎಂದ ಸಿಎಂ, ಆಡಳಿತ ಪಕ್ಷದ ಶಾಸಕರಿಗೂ ವಿಪಕ್ಷ ನಾಯಕರಿಗೆ ತೊಂದರೆ ನೀಡದಂತೆ ಸೂಚನೆ ನೀಡಿ, ಸರ್ಕಾರ ಉತ್ತರ ಕೊಡಲು ಸಮರ್ಥವಾಗಿದೆ ಎಂದರು.

- 28 Jan 2026 1:56 PM IST
ಸಂವಿಧಾನ ವಿರೋಧಿಗಳಿಗೆ ಏನು ಬೇಕಾದರೂ ಮಾಡುತ್ತೇವೆ: ಬಿ.ಕೆ. ಹರಿಪ್ರಸಾದ್
ವಿಧಾನಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಹಿರಿಯ ಸದಸ್ಯ ಬಿ.ಕೆ ಹರಿಪ್ರಸಾದ್ ಮಾತನಾಡಿ, ಸಂವಿಧಾನ ವಿರೋಧಿಗಳಿಗೆ ಏನೂ ಬೇಕಾದರೂ ಮಾಡುತ್ತೇವೆ ಎಂಬ ಹೇಳಿಕೆಗೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಆಡಳಿತ ಹಾಗೂ ವಿಪಕ್ಷಗಳ ನಡುವೆ ವಾಕ್ಸಮರ ಉಂಟಾಯಿತು.

- 28 Jan 2026 1:42 PM IST
ಮನರೇಗಾ ಚರ್ಚೆ ವೇಳೆ ರಾಹುಲ್ ಗಾಂಧಿಯೇ ಇರಲಿಲ್ಲ: ಸುನೀಲ್ ಕುಮಾರ್ ಮಾತಿಗೆ ಸಚಿವರು ಗರಂ
ಲೋಕಸಭೆಯಲ್ಲಿ ಮನರೇಗಾ ಚರ್ಚೆಯಾದಾಗ ವಿಪಕ್ಷ ನಾಯಕ ರಾಹುಲ್ ಗಾಂಧಿ ಇರಲಿಲ್ಲ. ವಿದೇಶಕ್ಕೆ ಓಡಿ ಹೋಗಿದ್ದರು. ಆಗ ಚರ್ಚೆ ಮಾಡಬೇಕಿತ್ತು. ಈಗ ಪದೇ ಪದೇ ರಾಜ್ಯಪಾಲರು ಓಡಿ ಹೋದರು ಎಂದು ಹೇಳುತ್ತಿರಾ ಎಂದು ಶಾಸಕ ಸುನೀಲ್ ಕುಮಾರ್ ಆಡಳಿ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಸುನೀಲ್ ಕುಮಾರ್ ಮಾತಿಗೆ ಸಚಿವ ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿ, ಲೋಕಸಭೆ ಅಧಿವೇಶನ ನಡೆಯುವಾಗ ಪ್ರಧಾನ ಮಂತ್ರಿ ಇರುವುದಿಲ್ಲ. ರಾಹುಲ್ ಗಾಂಧಿ ಇರೋದೆ ಇಲ್ಲ ಎಂದು ಏಕೆ ಹೇಳುತ್ತೀರಿ ಎಂದರು.
ಈ ವೇಳೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಲ್ಲಿಯ ತನಕ ಎಷ್ಟು ಪತ್ರಿಕಾಗೋಷ್ಠಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

- 28 Jan 2026 1:24 PM IST
ರಾಜ್ಯಪಾಲರನ್ನು ಅವಮಾನಿಸಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡುವ ಸಂದರ್ಭದಲ್ಲಿ ಎದ್ದು ನಿಂತ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರನ್ನು ನಮ್ಮ ರಾಜ್ಯಪಾಲು ಎಂದರೆ ಹೇಗೆ. ರಾಜ್ಯಪಾಲರು ರಾಜ್ಯದ ರಾಜ್ಯಪಾಲರು ಅಷ್ಟೇ. ನಿಮ್ಮ ರಾಜ್ಯಪಾಲ, ನಮ್ಮ ರಾಜ್ಯಪಾಲ ಎಂದರೆ ಹೇಗೆ ಎಂದು ತಿಳಿಸಿದರು.
ರಾಜ್ಯಪಾಲರಿಗೆ ಅವಮಾನ ಮಾಡುವ ಪ್ರಶ್ನೆ ಇಲ್ಲ, ಅವರು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ. ರಾಜ್ಯಪಾಲರಿಗೆ ನಾವು ಅವಮಾನ ಮಾಡುವುದಿಲ್ಲ. ಆದರೆ ಅವರು ನಾವು ಬರೆದ ಭಾಷಣ ಪೂರ್ತಿ ಓದಿಲ್ಲ. ಅವರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ನಾವು ಅವರನ್ನು ಗೌರವಪೂರ್ವಕವಾಗಿ ನಡೆಸಿಕೊಂಡಿದ್ದೇವೆ. ಗೌರವಪೂರ್ವಕವಾಗಿ ಬೀಳ್ಕೊಟ್ಟಿದ್ದೇವೆ ಎಂದರು.
ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆಯಿು. ಮನರೇಗಾ ಯೋಜನೆ ವೇಳೆ ಸಂಸತ್ತಿನಲ್ಲಿ ಚರ್ಚಿಸದೆ ಲೋಕಸಭೆ ಪ್ರತಿಪಕಷದ ನಾಯಕ ರಾಹುಲ್ ಗಾಂಧಿ ವಿದೇಶಕ್ಕೆ ಓಡಿ ಹೋಗಿದ್ದರು ಎಂದ ಬಿಜೆಪಿ ಶಾಸಕ ಸುನಿಲ್ ಕುಮಾರ್ ಹೇಳಿದರು. ಈ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

- 28 Jan 2026 1:05 PM IST
ರಾಜ್ಯಪಾಲರಿಗೆ ಅಗೌರವ ತೋರುವಲ್ಲಿ ಕರ್ನಾಟಕವೇ ಮೊದಲು: ಆರ್. ಅಶೋಕ್
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯನ್ನು ಆರಂಭಿಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ರಾಜ್ಯಪಾಲರಿಗೆ ಅಗೌರವ ತೋರುವ ಕೆಲಸ ನಡೆದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
- 28 Jan 2026 1:03 PM IST
ಊಟಕ್ಕೆ ಬ್ರೇಕ್ ಹಾಕಿದ ಸ್ಪೀಕರ್ ಯು.ಟಿ. ಖಾದರ್!
ಇಂದು ವಿಧಾನಸಭೆ ಕಲಾಪವು ನಿಗದಿತ ಸಮಯಕ್ಕಿಂತ ತಡವಾಗಿ ಆರಂಭವಾದ ಹಿನ್ನೆಲೆಯಲ್ಲಿ, ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಸದಸ್ಯರಿಗೆ ಮಧ್ಯಾಹ್ನದ ಭೋಜನದ ವಿರಾಮದ ಬಗ್ಗೆ ವಿಶೇಷ ಸೂಚನೆಯೊಂದನ್ನು ನೀಡಿದರು.
- 28 Jan 2026 1:01 PM IST
ತುಳು ಭಾಷೆಗೆ ಹೆಚ್ಚುವರಿ ಭಾಷೆ ಸ್ಥಾನಮಾನ ನೀಡಲು ವಿಧಾನಸಭೆಯಲ್ಲಿ ಆಗ್ರಹ
ರಾಜ್ಯದಲ್ಲಿ ತುಳು ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂಬ ಕೂಗು ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅವರು ಈ ವಿಷಯವನ್ನು ಪ್ರಸ್ತಾಪಿಸಿ, ತುಳು ಭಾಷೆಯ ಉನ್ನತಿಗೆ ಒತ್ತಾಯಿಸಿದರು.
ಶಾಸಕ ಅಶೋಕ್ ರೈ ಅವರ ಮಾತಿಗೆ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಈ ವೇಳೆ ಅಶೋಕ್ ರೈ ಅವರು ಇತರೆ ರಾಜ್ಯಗಳ ಉದಾಹರಣೆ ನೀಡಿ ಗಮನ ಸೆಳೆದರು:
- 28 Jan 2026 1:00 PM IST
ಮಹಿಳಾ ಸುರಕ್ಷತೆಯ ಕಿಚ್ಚು: ಬಿಜೆಪಿ ಶಾಸಕ ಭರತ್ ಶೆಟ್ಟಿ ಪ್ರಶ್ನೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ
ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಈ ವೇಳೆ ಸರ್ಕಾರವನ್ನು ಪ್ರಶ್ನಿಸಿದ ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ, ದೌರ್ಜನ್ಯ ತಡೆಗೆ ಕಠಿಣ ನಿಯಮಗಳಿದ್ದರೂ ಅಪರಾಧ ಪ್ರಮಾಣ ಕಡಿಮೆಯಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

