LIVE Todays news LIVE Feb 13: ನಟ ವಿಜಯ್ ರ್ಯಾಲಿಯಲ್ಲಿ ದುರಂತ:ಬಿಸಿಲ ಬೇಗೆಗೆ ವ್ಯಕ್ತಿ ಬಲಿ
x

Today's news LIVE Feb 13: ನಟ ವಿಜಯ್ ರ್ಯಾಲಿಯಲ್ಲಿ ದುರಂತ:ಬಿಸಿಲ ಬೇಗೆಗೆ ವ್ಯಕ್ತಿ ಬಲಿ

ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.


Click the Play button to hear this message in audio format

ಇಂದು ಶುಕ್ರವಾರ ಫೆಬ್ರುವರಿ 13, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪ್ರಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.

Live Updates

  • 13 Feb 2026 7:46 PM IST

    ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಸಿಹಿ ಸುದ್ದಿ

    ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಸಿಹಿ ಸುದ್ದಿಯೊಂದನ್ನು ನೀಡಿದ್ದು, ನಿಮ್ಮ ಬಳಿ ಪಾಸ್‌ ಇಲ್ಲದಿದ್ದರೂ ನೀವು ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡಿದೆ.

    ಶುಕ್ರವಾರ (ಫೆ.13) ಕೆಎಸ್‌ಆರ್‌ಟಿಸಿ ವಿಭಾಗದ ಮುಖ್ಯ ಸಂಚಾರ ವ್ಯವಸ್ಥಾಪಕ ಎಸ್‌.ರಾಜೇಶ್‌ ಆದೇಶ ಹೊರಡಿಸಿದ್ದು, "ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಅವಧಿಯಲ್ಲಿ ನಿಯೋಜಿತ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಹಾಗೂ ವಾಸಸ್ಥಳಕ್ಕೆ ಮರಳಲು ಪರೀಕ್ಷಾ ಪ್ರವೇಶ ಪತ್ರ ತೋರಿಸಿದರೆ ಪ್ರಯಾಣಕ್ಕೆ ಅನುಮತಿ ನೀಡಬೇಕು ಎಂದು ನಿಗಮದ ಎಲ್ಲಾ ಚಾಲಕರು ಹಾಗೂ ನಿರ್ವಾಹಕರುಗಳಿಗೆ ತಿಳಿಸಿದ್ದು, ಬಸ್ಸುಗಳ ಕಾರ್ಯಾಚರಣಾ ಮಾರ್ಗದಲ್ಲಿ ಪರೀಕ್ಷಾ ಕೇಂದ್ರಗಳಿದ್ದಲ್ಲಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೋರಿಕೆ ಮೇರೆಗೆ ನಿಲುಗಡೆ ನೀಡಲು ಕ್ರಮ ಕೈಗೊಳ್ಳಬೇಕು. " ಎಂದು ಆದೇಶಿಸಿದ್ದಾರೆ.

  • 13 Feb 2026 7:44 PM IST

    ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋ ಸೈಮನ್ ನಿಧನ

    ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಹಾಗೂ ನಿರ್ಮಾಪಕ ಜೋ ಸೈಮನ್ ಅವರು ನಿಧನರಾಗಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆಗೆ ಹಾಜರಾಗಿದ್ದ ಅವರು ಏಕಾಏಕಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಪಕ್ಕದ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

    ಡಾ. ವಿಷ್ಣುವರ್ಧನ್ ಅವರ ವೃತ್ತಿಜೀವನದ ಮೈಲಿಗಲ್ಲಾದ 'ಸಾಹಸ ಸಿಂಹ' ಚಿತ್ರವನ್ನು ನಿರ್ದೇಶಿಸುವ ಮೂಲಕ ವಿಷ್ಣು ಅವರಿಗೆ ಆ ಬಿರುದು ಶಾಶ್ವತವಾಗಿ ಉಳಿಯುವಂತೆ ಮಾಡಿದ ಕೀರ್ತಿ ಜೋ ಸೈಮನ್ ಅವರಿಗೆ ಸಲ್ಲುತ್ತದೆ.

    ಮಂಡ್ಯದ ಪ್ರತಿಭೆ

    ಮೂಲತಃ ಮಂಡ್ಯ ಜಿಲ್ಲೆಯವರಾದ ಜೋ ಸೈಮನ್, 1967ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಚಿತ್ರರಂಗದ ಒಡನಾಟ ಬೆಳೆಸಿಕೊಂಡ ಅವರು, ನಂತರ ನಿರ್ದೇಶನದತ್ತ ಮುಖ ಮಾಡಿದ್ದರು. . ತಮ್ಮ ಐದು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ನಟರಾಗಿ, ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿ ಸೇವೆ ಸಲ್ಲಿಸಿದ್ದರು.

  • 13 Feb 2026 7:42 PM IST

    ಬಹುನಿರೀಕ್ಷಿತ 'ದೃಶ್ಯಂ 3' ಚಿತ್ರ ಏಪ್ರಿಲ್ 2ಕ್ಕೆ ಬಿಡುಗಡೆ

    ಸಿನಿರಸಿಕರ ಪಾಲಿಗೆ ಕುತೂಹಲದ ಕಣಜವಾಗಿದ್ದ, ಮಲಯಾಳಂನ ಸೂಪರ್ ಹಿಟ್ 'ದೃಶ್ಯಂ' ಸರಣಿಯ ಮೂರನೇ ಭಾಗದ ಬಿಡುಗಡೆ ದಿನಾಂಕ ಅಂತಿಮವಾಗಿದೆ. ಮೋಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು 'ದೃಶ್ಯಂ 3' (Drishyam 3) ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ.

    ನಟ ಮೋಹನ್ ಲಾಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಬಹುನಿರೀಕ್ಷಿತ 'ದೃಶ್ಯಂ 3' ಚಿತ್ರವು 2026ರ ಏಪ್ರಿಲ್ 2 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ. ನಿರ್ದೇಶಕ ಜೀತು ಜೋಸೆಫ್ ಮತ್ತು ಮೋಹನ್ ಲಾಲ್ ಅವರ ಕಾಂಬಿನೇಷನ್ ಮತ್ತೆ ಮೋಡಿ ಮಾಡಲು ಸಜ್ಜಾಗಿದೆ.

  • 13 Feb 2026 3:33 PM IST

    ನಟ ವಿಜಯ್ ರ್ಯಾಲಿಯಲ್ಲಿ ದುರಂತ: ಬಿಸಿಲ ಬೇಗೆಗೆ ವ್ಯಕ್ತಿ ಬಲಿ

    ತಮಿಳುನಾಡಿನ ಸೇಲಂನಲ್ಲಿ ಶುಕ್ರವಾರ ನಡೆದ ಟಿ ವಿಕೆ (TVK) ಪಕ್ಷದ ಸಮಾವೇಶದ ವೇಳೆ ತೀವ್ರ ಬಿಸಿಲಿನ ಕಾರಣದಿಂದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮೃತ ವ್ಯಕ್ತಿ ಮೊದಲು ಪ್ರಜ್ಞೆ ತಪ್ಪಿ ಬಿದ್ದಿದ್ದು, ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪೊಲೀಸರ ಮೂಲಗಳ ಪ್ರಕಾರ, ಮೃತ ವ್ಯಕ್ತಿಯು ಮೊದಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕರೂರ್‌ನಲ್ಲಿ ನಡೆದ ವಿಜಯ್ ಅವರ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನರು ಪ್ರಾಣ ಕಳೆದುಕೊಂಡಿದ್ದರು. ಇದೀಗ ಸೇಲಂ ರ್ಯಾಲಿಯಲ್ಲೂ ಇಂತಹದ್ದೇ ಅಹಿತಕರ ಘಟನೆ ನಡೆದಿರುವುದು ಅಭಿಮಾನಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

  • 13 Feb 2026 1:36 PM IST

    ಅಣೆಕಟ್ಟು ರಕ್ಷಣೆಯಿಂದ ಯುವ ಪೀಳಿಗೆಗೆ ಅನುಕೂಲ

    ದೇಶದಲ್ಲಿನ ಬಹುತೇಕ ಅಣೆಕಟ್ಟುಗಳಿಗೆ 40 ವರ್ಷಗಳಾಗಿದ್ದು, ಅವುಗಳ ರಕ್ಷಣೆಗೆ ಕ್ರಮ‌ಕೈಗೊಳ್ಳಬೇಕು ಇದರಿಂದ ಮುಂದಿನ ಪಿಳೀಗೆಗೆ ಸಹಕಾರವಾಗಲಿದೆ ಎಂದು ಕೇಂದ್ರ ಜಲಶಕ್ತಿ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ತಿಳಿಸಿದರು.

    ಸರ್ಕಾರಗಳು ರೈತರಿಗೆ ಭೂ ಸ್ವಾಧೀನ ಪರಿಹಾರ ನೀಡಬೇಕು. ಸುಸ್ಥಿರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ತಜ್ಞರು ಅಣೆಕಟ್ಟು ಸುರಕ್ಷಿತಗೆ ಅಗತ್ಯ ಇರುವ ಸಲಹೆ ನೀಡಬೇಕು ಎಂದರು.

  • 13 Feb 2026 1:33 PM IST

    ಹವಾಮಾನ ಬದಲಾವಣೆಗೆ ತಕ್ಕಂತೆ ಅಣೆಕಟ್ಟುಗಳ ರಕ್ಷಣೆ ಅಗತ್ಯ : ಡಿ.ಕೆ. ಶಿವಕುಮಾರ್‌

    ಕರ್ನಾಟಕ ಜಲ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿ ಅಣೆಕಟ್ಟುಗಳ ಸುರಕ್ಷತೆಗೆ‌ ಆದ್ಯತೆ ನೀಡಲಾಗಿದೆ. ಡ್ಯಾಂಗಳು 70 ವರ್ಷದ ಹಳೆದಾಗಿವೆ. ಹವಾಮಾನ ಬದಲಾವಣೆಗೆ ತಕ್ಕಂತೆ ರಕ್ಷಣೆ ಅಗತ್ಯ. ಸುಸ್ಥಿರ ಅಭಿವೃದ್ಧಿಗೆ ನೀರಿನ ನಿರ್ವಹಣೆ ಅಗತ್ಯವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.

    ದೇಶದಲ್ಲಿ 6,500 ಅಣೆಕಟ್ಟುಗಳಿದ್ದು, ರಾಜ್ಯದಲ್ಲಿ‌ 230 ಕ್ಕೂ ಹೆಚ್ಚಿವೆ. ಡ್ಯಾಮ್ ರಕ್ಷಣೆ ರಾಷ್ಟ್ರೀಯ ಆದ್ಯತೆಯಾಗಿದೆ. ವಿಶ್ವಸಂಸ್ಥೆಯು ಹಣಕಾಸು ನೀಡಿದೆ. ಅಣೆಕಟ್ಟಿನ 500 ಮೀಟರ್ ಬ್ಲಾಕ್ ಮಾಡಲಾಗಿದೆ. ಕೇಂದ್ರವು ಇದರ ಬಗ್ಗೆ ಗಮನಹರಿಸಬೇಕು ಎಂದರು.

    ಅಣೆಕಟ್ಟು ಸುರಕ್ಷಿತಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ಏಷ್ಯಾದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ 1902ರ ವೇಳೆಗೆ ಹೈಡ್ರೋ ಪವರ್ ಪ್ರಾರಂಭವಾಯಿತು.‌ ದೇಶದಲ್ಲಿ 2,500 ಕ್ಕೂ ಹೆಚ್ಚು ಎಂಜಿನಿಯರ್ ‌ಕಾಲೇಜುಗಳಿದ್ದು, 2.5 ಲಕ್ಷ ಮಿಲಿಯನ್ ಎಂಜಿನಿಯರ್‌ಗಳು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

  • 13 Feb 2026 9:21 AM IST

    ತಾರಿಕ್ ರೆಹಮಾನ್‌ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ!

    ಬಾಂಗ್ಲಾದೇಶದ ಸಂಸತ್ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬಿಎನ್‌ಪಿ ನಾಯಕ ತಾರಿಕ್ ರೆಹಮಾನ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು 'X' ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿಯವರು, ಈ ವಿಜಯವು ತಾರಿಕ್ ರೆಹಮಾನ್ ಅವರ ನಾಯಕತ್ವದ ಮೇಲೆ ಬಾಂಗ್ಲಾದೇಶದ ಜನರು ಇಟ್ಟಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಶ್ಲಾಘಿಸಿದ್ದಾರೆ. ಪ್ರಜಾಪ್ರಭುತ್ವವಾದಿ, ಪ್ರಗತಿಪರ ಮತ್ತು ಒಳಗೊಳ್ಳುವಿಕೆಯ ಬಾಂಗ್ಲಾದೇಶದ ಬೆಂಬಲಕ್ಕೆ ಭಾರತ ಸದಾ ನಿಲ್ಲಲಿದೆ ಎಂದು ಭರವಸೆ ನೀಡಿರುವ ಅವರು, ಉಭಯ ದೇಶಗಳ ನಡುವಿನ ಬಹುಮುಖಿ ಸಂಬಂಧವನ್ನು ಬಲಪಡಿಸಲು ಮತ್ತು ಸಾಮಾನ್ಯ ಅಭಿವೃದ್ಧಿ ಗುರಿಗಳನ್ನು ತಲುಪಲು ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.


  • 13 Feb 2026 8:25 AM IST

    ಜೆಫ್ರಿ ಎಪ್ಸ್ಟೈನ್ ಜೊತೆ ಲಿಂಕ್‌- ಗೋಲ್ಡ್‌ಮನ್ ಸ್ಯಾಕ್ಸ್ ಪ್ರಧಾನ ವಕೀಲೆ ರಾಜೀನಾಮೆ

    ಗೋಲ್ಡ್‌ಮನ್ ಸ್ಯಾಕ್ಸ್ ಸಂಸ್ಥೆಯ ಪ್ರಧಾನ ವಕೀಲೆ ಹಾಗೂ ಬರಾಕ್ ಒಬಾಮಾ ಅವರ ಮಾಜಿ ಶ್ವೇತಭವನದ ಸಲಹೆಗಾರ್ತಿಯಾಗಿದ್ದ ಕ್ಯಾಥಿ ರ್ಯೂಮ್ಲರ್, ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೈನ್ ಜೊತೆಗಿನ ನಿಕಟ ಸಂಬಂಧದ ಇಮೇಲ್‌ಗಳು ಬಹಿರಂಗಗೊಂಡ ಬೆನ್ನಲ್ಲೇ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಇಮೇಲ್‌ಗಳಲ್ಲಿ ರ್ಯೂಮ್ಲರ್ ಅವರು ಎಪ್ಸ್ಟೈನ್ ಅವರನ್ನು "ಅಣ್ಣ" ಎಂದು ಕರೆದಿರುವುದು, "ಅಂಕಲ್ ಜೆಫ್ರಿ" ಎಂದು ಸಂಬೋಧಿಸಿ ಪ್ರೀತಿ ವ್ಯಕ್ತಪಡಿಸಿರುವುದು ಮತ್ತು ಅವರ ಲೈಂಗಿಕ ಅಪರಾಧಗಳನ್ನು ಕಡೆಗಣಿಸಿರುವುದು ಕಂಡುಬಂದಿದೆ.

    2020 ರಿಂದ ಗೋಲ್ಡ್‌ಮನ್ ಸ್ಯಾಕ್ಸ್‌ನ ಉನ್ನತ ಕಾನೂನು ಹುದ್ದೆಯಲ್ಲಿದ್ದ ರ್ಯೂಮ್ಲರ್, ಆರಂಭದಲ್ಲಿ ರಾಜೀನಾಮೆ ನೀಡಲು ನಿರಾಕರಿಸಿದ್ದರಾದರೂ, ಎಪ್ಸ್ಟೈನ್ ಅವರಿಂದ ಐಷಾರಾಮಿ ಹ್ಯಾಂಡ್‌ಬ್ಯಾಗ್ ಮತ್ತು ಫರ್ ಕೋಟ್‌ನಂತಹ ದುಬಾರಿ ಉಡುಗೊರೆಗಳನ್ನು ಪಡೆದ ಸಂಗತಿಗಳು ಹೊರಬಂದ ನಂತರ ತೀವ್ರ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಂಡಿದ್ದಾರೆ. ಎಪ್ಸ್ಟೈನ್ ಅವರನ್ನು ಈಗ "ರಾಕ್ಷಸ" ಎಂದು ಕರೆದು ವಿಷಾದ ವ್ಯಕ್ತಪಡಿಸಿರುವ ಅವರು, ಈ ಹಿಂದೆ ಆತನ ಅಪರಾಧಗಳು ಸಾಬೀತಾದ ನಂತರವೂ ನಿಕಟ ಸ್ನೇಹ ಮುಂದುವರಿಸಿದ್ದರು ಎಂಬುದು ಈ ಇಮೇಲ್ ಬಹಿರಂಗದಿಂದ ದೃಢಪಟ್ಟಿದೆ.

  • 13 Feb 2026 7:52 AM IST

    ಉತ್ತರ ಪ್ರದೇಶದ ಭೀಕರ ಅಪಘಾತ: ಎರಡು ಟ್ರ್ಯಾಕ್ಟರ್‌ಗಳ ಡಿಕ್ಕಿಗೆ ಮೂವರು ಸಾವು

    ಉತ್ತರ ಪ್ರದೇಶದ ಬದಾಯೂನ್ ಜಿಲ್ಲೆಯ ಉಘೈತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಹದಿಹರೆಯದವರು ಮೃತಪಟ್ಟಿದ್ದು, 18ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸರೈ ಬರಾಲಿ ಗ್ರಾಮದ ಇಟ್ಟಿಗೆ ಭಟ್ಟಿಯ ಸಮೀಪ ಗುರುವಾರ ರಾತ್ರಿ ಸುಮಾರು 9:30 ಗಂಟೆಗೆ ಎರಡು ಟ್ರ್ಯಾಕ್ಟರ್‌ಗಳ ನಡುವೆ ಈ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

    ವಜೀರ್‌ಗಂಜ್ ಪ್ರದೇಶದ ಜನರೆಲ್ಲ ಸೇರಿ ಟ್ರ್ಯಾಕ್ಟರ್ ಒಂದರಲ್ಲಿ ಶುಭ ಸಮಾರಂಭವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ವೇಗವಾಗಿ ಬಂದ ಮತ್ತೊಂದು ಟ್ರ್ಯಾಕ್ಟರ್ ಇವರ ವಾಹನಕ್ಕೆ ನೇರವಾಗಿ ಡಿಕ್ಕಿ ಹೊಡೆದಿದೆ. ಈ ಭೀಕರ ಘಟನೆಯಲ್ಲಿ 10 ವರ್ಷದ ನಿತಿನ್, 16 ವರ್ಷದ ರಾಣಿ ಮತ್ತು 18 ವರ್ಷದ ಪೂಜಾ ಎಂಬುವವರು ಮೃತಪಟ್ಟಿದ್ದಾರೆ.

Read More
Next Story