LIVE Todays live news Mar 13th: ಇರಾನ್‌ನ ಪ್ರಮುಖ ಪರಮಾಣು ವಿಜ್ಞಾನಿಗಳು ಬಲಿ: ಬೆಂಜಮಿನ್ ನೆತನ್ಯಾಹು
x

Today's live news Mar 13th: ಇರಾನ್‌ನ ಪ್ರಮುಖ ಪರಮಾಣು ವಿಜ್ಞಾನಿಗಳು ಬಲಿ: ಬೆಂಜಮಿನ್ ನೆತನ್ಯಾಹು

ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.


Click the Play button to hear this message in audio format

ಇಂದು ಶುಕ್ರವಾರ ಮಾರ್ಚ್ 13, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.

Live Updates

  • 13 March 2026 7:34 AM IST

    ಇರಾಕ್‌ನಲ್ಲಿ ಅಮೆರಿಕದ ಮಿಲಿಟರಿ ಇಂಧನ ಮರುಪೂರಣ ವಿಮಾನ ಪತನ

    ಇರಾನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಮೆರಿಕದ ಮಿಲಿಟರಿ ಇಂಧನ ಮರುಪೂರಣ ವಿಮಾನ ಇರಾಕ್‌ನಲ್ಲಿ ಪತನಗೊಂಡಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ತಿಳಿಸಿದೆ. ಪತನಗೊಂಡ ಕೆಸಿ-135 (KC-135) ವಿಮಾನದಲ್ಲಿ ಕನಿಷ್ಠ ಐವರು ಸಿಬ್ಬಂದಿ ಇದ್ದರು ಎನ್ನಲಾಗಿದ್ದು, ಸಾವುನೋವುಗಳ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಪಶ್ಚಿಮ ಇರಾಕ್‌ನಲ್ಲಿ ಸಂಭವಿಸಿದ ಈ ಘಟನೆಯು ಶತ್ರುಗಳ ದಾಳಿಯಿಂದ ಅಥವಾ ಅಪ್ಪಿತಪ್ಪಿ ನಡೆದ ದಾಳಿಯಿಂದ (Friendly fire) ಸಂಭವಿಸಿಲ್ಲ ಎಂದು ಮಿಲಿಟರಿ ಸ್ಪಷ್ಟಪಡಿಸಿದೆ. ಇರಾನ್ ವಿರುದ್ಧದ ಕಾರ್ಯಾಚರಣೆ ಆರಂಭವಾದ ನಂತರ ಪತನಗೊಂಡ ಅಮೆರಿಕದ ನಾಲ್ಕನೇ ವಿಮಾನ ಇದಾಗಿದ್ದು, ಕಳೆದ ವಾರವಷ್ಟೇ ಕುವೈತ್‌ನ ತಪ್ಪಾದ ದಾಳಿಗೆ ಅಮೆರಿಕದ ಮೂರು ಯುದ್ಧ ವಿಮಾನಗಳು ಪತನಗೊಂಡು, ಆರು ಮಂದಿ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದರು. ಸದ್ಯದ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • 13 March 2026 7:30 AM IST

    ಇಸ್ರೇಲ್ ದಾಳಿಗೆ ಇರಾನ್‌ನ ಪ್ರಮುಖ ಪರಮಾಣು ವಿಜ್ಞಾನಿಗಳು ಬಲಿ: ಬೆಂಜಮಿನ್ ನೆತನ್ಯಾಹು ಘೋಷಣೆ

    ಇಸ್ರೇಲ್ ನಡೆಸಿದ ಭೀಕರ ವೈಮಾನಿಕ ದಾಳಿಗಳಲ್ಲಿ ಇರಾನ್‌ನ ಉನ್ನತ ಪರಮಾಣು ವಿಜ್ಞಾನಿಗಳು ಹತರಾಗಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಧಿಕೃತವಾಗಿ ಘೋಷಿಸಿದ್ದಾರೆ. ಗುರುವಾರ ರಾತ್ರಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇರಾನ್‌ನ ನೂತನ ಪರಮೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ ಅವರನ್ನು "ಕ್ರಾಂತಿಕಾರಿ ಪಡೆಗಳ ಕೈಗೊಂಬೆ" ಎಂದು ಟೀಕಿಸಿದ್ದಲ್ಲದೆ, ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಇರಾನ್ ಜನತೆಯನ್ನು ಉದ್ದೇಶಿಸಿ ಮಾತನಾಡಿದ ನೆತನ್ಯಾಹು, ಸ್ವಾತಂತ್ರ್ಯದ ಹೊಸ ಹಾದಿ ಸಮೀಪಿಸುತ್ತಿದೆ ಮತ್ತು ಇಸ್ರೇಲ್ ನಿಮ್ಮ ಪರವಾಗಿ ನಿಂತಿದೆ ಎಂದು ಭರವಸೆ ನೀಡಿದರು. "ಅಂತಿಮವಾಗಿ ಈ ಬದಲಾವಣೆಯು ನಿಮ್ಮ ಕೈಯಲ್ಲಿದೆ ಮತ್ತು ಅದು ನಿಮ್ಮನ್ನೇ ಅವಲಂಬಿಸಿದೆ" ಎಂದು ಅವರು ಇರಾನ್ ಜನತೆಗೆ ಕರೆ ನೀಡಿದ್ದಾರೆ.

Read More
Next Story