
ಯುವತಿಗೆ ಲೈಂಗಿಕ ಕಿರುಕುಳ; ಖಾಸಗಿ ಬಸ್ ಸಿಬ್ಬಂದಿಯ ಬಟ್ಟೆ ಬಿಚ್ಚಿಸಿ ಥಳಿತ
ಪ್ರಯಾಣಿಕರು, ಯುವತಿಯ ಕುಟುಂಬಸ್ಥರು ಸೇರಿ ಆರೋಪಿ ಸಿಬ್ಬಂದಿಯ ಬಟ್ಟೆ ಬಿಚ್ಚಿಸಿ ಥಳಿಸಿದ್ದಾರೆ. ಬಳಿಕ ಆರೋಪಿಯನ್ನು ವಿಧಾನಸೌಧ ಪೊಲೀಸರಿಗೆ ಒಪ್ಪಿಸಿದ್ದು, ಪ್ರಕರಣ ದಾಖಲಾಗಿದೆ.
ಹೈದರಾಬಾದ್‌ನಿಂದ ಬೆಂಗಳೂರಿಗೆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಸ್ ಸಿಬ್ಬಂದಿಗೆ ಪ್ರಯಾಣಿಕರು ಹಾಗೂ ಯುವತಿಯ ಕುಟುಂಬಸ್ಥರು ಥಳಿಸಿದ ಘಟನೆ ಗುರುವಾರ ನಡೆದಿದೆ.
ಖಾಸಗಿ ಬಸ್ ಸಿಬ್ಬಂದಿ ತನಗೆ ಲೈಂಗಿಕ ಕಿರುಕುಳದ ನೀಡಿದ ಬಗ್ಗೆ ಯುವತಿ ತನ್ನ ಕುಟುಂಬದವರಿಗೆ ತಿಳಿಸಿದ್ದರು. ಬೆಂಗಳೂರಿನ ಚಾಲುಕ್ಯ ವೃತ್ತದ ಬಳಿ ಬಸ್ ಆಗಮಿಸಿದಾಗ ಕುಟುಂಬಸ್ಥರು ಧಾವಿಸಿ ಗಲಾಟೆ ಮಾಡಿದ್ದಾರೆ. ಆಗ ಪ್ರಯಾಣಿಕರು, ಯುವತಿಯ ಕುಟುಂಬಸ್ಥರು ಸೇರಿ ಆರೋಪಿ ಸಿಬ್ಬಂದಿಯ ಬಟ್ಟೆ ಬಿಚ್ಚಿಸಿ ಥಳಿಸಿದ್ದಾರೆ. ಬಳಿಕ ಆರೋಪಿಯನ್ನು ವಿಧಾನಸೌಧ ಪೊಲೀಸರಿಗೆ ಒಪ್ಪಿಸಿದ್ದು, ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಮಂಗಳೂರಿನಲ್ಲಿ ಬಸ್ನಲ್ಲಿ ಮಹಿಳೆ ಪ್ರಯಾಣಿಕಳಿಗೆ ಕಿರುಕುಳ ನೀಡಿದ್ದಕ್ಕಾಗಿ ಕೆಎಸ್ಆರ್ಟಿಸಿ ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದರು. ಅದೇ ರೀತಿ ಬೆಂಗಳೂರಿನ ವೈಟ್‌ಫೀಲ್ಡ್ ಇಕೋವರ್ಲ್ಡ್ ಬಳಿ ಮಹಿಳೆಗೆ ಇಬ್ಬರು ಬೈಕ್ ಸವಾರರು ಲೈಂಗಿಕ ಕಿರುಕುಳ ನೀಡಿದ್ದರು.
ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಬೆಂಗಳೂರಿನಿಂದ ಹಾಸನಕ್ಕೆ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರಿಗೆ ನಿರ್ವಾಹಕ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆತನಿಗೆ ಯುವತಿ ಕಪಾಳ ಮೋಕ್ಷ ಮಾಡಿದ್ದಳು. ನಂತರ ಆರೋಪಿತ ನಿರ್ವಾಹಕನನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು.