ತಂದೆಯ ಗನ್‌ನಿಂದ ಫೈರಿಂಗ್‌ ಮಾಡಿಕೊಂಡು ಯುವಕ ಆತ್ಮಹತ್ಯೆ
x

ಕಾಲ್ಪನಿಕ ಚಿತ್ರ

ತಂದೆಯ ಗನ್‌ನಿಂದ ಫೈರಿಂಗ್‌ ಮಾಡಿಕೊಂಡು ಯುವಕ ಆತ್ಮಹತ್ಯೆ

ಪೋಷಕರು ತಿರುಪತಿಯಿಂದ ವಾಪಸ್‌ ಮರಳಿ ಬಂದಾಗ ಫಾರ್ಮ್‌ಹೌಸ್‌ನಲ್ಲಿ ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಿರುಮಲಶೆಟ್ಟಿ ಪೊಲೀಸ್‌ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪ್ರಕರಣ ದಾಖಲಿಸಿದ್ದಾರೆ.


ಇತ್ತೀಚೆಗಷ್ಟೆ ವಿದೇಶದಿಂದ ವಿದ್ಯಾಭ್ಯಾಸ ಪೂರೈಸಿ ಬಂದಿದ್ದ ಯುವಕನೊಬ್ಬ, ತನ್ನ ತಂದೆಯ ಸಿಂಗಲ್‌ ಬ್ಯಾರಲ್‌ ಗನ್‌ನಿಂದ ಫೈರಿಂಗ್‌ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ. 28 ವರ್ಷದ ಬೈಯೇಶ್​ ಆತ್ಮಹತ್ಯೆ ಮಾಡಿಕೊಂಡವರು.

ಬೈಯೇಶ್​ನ ಪೋಷಕರು ಭಾನುವಾರ (ಮೇ 11ರಂದು) ತಿರುಪತಿಗೆ ತೆರಳಿದ್ದರು. ಸೋಮವಾರ (ಮೇ12ರಂದು) ವಾಪಸ್‌ ಬಂದಾಗ ಫಾರ್ಮ್‌ ಹೌಸ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಿರುಮಲಶೆಟ್ಟಿ ಪೊಲೀಸ್‌ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More
Next Story