Year Ender 2025: ಮರೆಯಾದ ಮಾಣಿಕ್ಯಗಳು; ಈ ವರ್ಷ ನಮ್ಮನ್ನಗಲಿದ  ಗಣ್ಯರು ಇವರೇ
x
ಈ ವರ್ಷ ಅಗಲಿದ ಗಣ್ಯರು

Year Ender 2025: ಮರೆಯಾದ ಮಾಣಿಕ್ಯಗಳು; ಈ ವರ್ಷ ನಮ್ಮನ್ನಗಲಿದ ಗಣ್ಯರು ಇವರೇ

2025ರ ವರ್ಷವು ಕೊನೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ಈ ವರ್ಷ ನಮ್ಮನ್ನಗಲಿದ ಹಲವಾರು ಪ್ರಮುಖ ನಾಯಕರು, ರಾಜಕಾರಣಿಗಳು ಮತ್ತು ಚಿತ್ರರಂಗದ ಗಣ್ಯರನ್ನು ಸ್ಮರಿಸಲೇಬೇಕು.


Click the Play button to hear this message in audio format

2025ಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸಲು ಇನ್ನೇನು ದಿನಗಣನೆ ಶುರುವಾಗಿದೆ. ವರ್ಷದ ಕೊನೆಯಲ್ಲಿ ನಿಂತು ಇಡೀ ವರ್ಷವನ್ನೊಮ್ಮೆ ಮೆಲುಕು ಹಾಕಿ ನೋಡಿದರೆ ಹಲವು ಏರಿಳಿತಗಳನ್ನು ಕಾಣಬಹುದಾಗಿದೆ. 2025ರ ವರ್ಷವು ಕೊನೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ಈ ವರ್ಷ ನಮ್ಮನ್ನಗಲಿದ ಇಸ್ರೋ ಮಾಜಿ ಅಧ್ಯಕ್ಷ ಡಾ. ಕೆ. ಕಸ್ತೂರಿ ರಂಗನ್‌, ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ಪಂಚಭಾಷಾ ತಾರೆ ಬಿ. ಸರೋಜಾದೇವಿ, ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ, ಚಿತ್ರನಟ ಉಮೇಶ್‌, ಎಚ್‌.ವೈ.ಮೇಟಿ ಸೇರಿದಂತೆ ಹಲವಾರು ಪ್ರಮುಖ ನಾಯಕರು, ರಾಜಕಾರಣಿಗಳು ಮತ್ತು ಚಿತ್ರರಂಗ ತಾರೆಯರನ್ನು ನಾವು ಸ್ಮರಿಸಲೇಬೇಕು.

ರಾಜಕೀಯ, ಸಾಹಿತ್ಯ, ಕಲೆ ಮತ್ತು ಸಾರ್ವಜನಿಕ ಸೇವೆಯಲ್ಲಿ ಅವರು ನೀಡಿದ ಕೊಡುಗೆಗಳು ಅಳಿಸಲಾಗದ ಪ್ರಭಾವ ಬೀರಿವೆ. ಇನ್ನು ಈ ವರ್ಷ ಕನ್ನಡ ಚಿತ್ರರಂಗ ಹಲವು ಮೇರು ತಾರೆಯರನ್ನು ಕಳೆದುಕೊಂಡು ತುಂಬಲಾರದ ನಷ್ಟ ಅನುಭವಿಸಿದೆ. ಹಾಗಿದ್ದರೆ ಈ ವರ್ಷ ನಮ್ಮಗಲಿದ ಗಣ್ಯರು ಯಾರು ಎಂಬುದನ್ನು ನೋಡೋಣ.

ಸರಿಗಮ ವಿಜಿ

ಹಾಸ್ಯ ನಟ ಸರಿಗಮ ವಿಜಿ ಅವರು ಜ.15ರಂದು ನಿಧನರಾಗಿದ್ದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಹಾಸ್ಯನಟರಾಗಿಯೇ ಕನ್ನಡಗರಿಗೆ ಚಿರಪರಿಚಿತರಾಗಿರುವ ಸರಿಗಮ ವಿಜಿ, ಕನ್ನಡದಲ್ಲಿ 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು.


ಬ್ಯಾಂಕ್‌ ಜನಾರ್ದನ್‌

ಹಿರಿಯ ಹಾಸ್ಯ ನಟ ಬ್ಯಾಂಕ್‌ ಜನಾರ್ದನ್‌ ಏ.14ರಂದು ನಿಧನರಾಗಿದ್ದರು. 1948ರಲ್ಲಿ ಬ್ಯಾಂಕ್ ಜನಾರ್ಧನ್ ಅವರು ಬೆಂಗಳೂರಿನಲ್ಲಿ ಜನಿಸಿದರು. 1985ರಲ್ಲಿ ಪಿತಾಮಹ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಉಪೇಂದ್ರ ನಿರ್ದೇಶನದ ಶ್, ತರ್ಲೆ ನನ್ ಮಗ, ಬೆಳ್ಳಿಯಪ್ಪ ಬಂಗಾರಪ್ಪ, ಜೀ ಬೂಂಬಾ, ಗಣೇಶ ಸುಬ್ರಮಣ್ಯ, ಕೌರವ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬೆಟ್ಟದ ತಾಯಿ, ಪೊಲೀಸ್ ಹೆಂಡತಿ, ತರ್ಲೆ ನನ್ಮಗ ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದರು. ಕನ್ನಡದಲ್ಲಿ 800ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.


ಡಾ.ಕೆ.ಕಸ್ತೂರಿರಂಗನ್

ಇಸ್ರೋ ಮಾಜಿ ಅಧ್ಯಕ್ಷ ಹಾಗೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ(ಎನ್‌ಇಪಿ) ಕರಡು ಸಮಿತಿಯ ಅಧ್ಯಕ್ಷರೂ ಆಗಿದ್ದ ಡಾ.ಕೆ.ಕಸ್ತೂರಿರಂಗನ್ (84) ಏಪ್ರಿಲ್‌ 25ರಂದು ಕೊನೆಯುಸಿರೆಳೆದರು.. ಡಾ. ಕೃಷ್ಣಸ್ವಾಮಿ ಕಸ್ತೂರಿರಂಗನ್ ಅವರು ಕೇರಳದ ಎರ್ನಾಕುಲಂನಲ್ಲಿ 24 ಅಕ್ಟೋಬರ್, 1940ರಲ್ಲಿ ಜನಿಸಿದರು. 1994 ರಿಂದ 2003ರವರೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಅಧ್ಯಕ್ಷರಾಗಿದ್ದರು. ಭಾರತೀಯ ಬಾಹ್ಯಾಕಾಶ ವಿಜ್ಞಾನಿಯಾದ ಇವರು, 2003ರಿಂದ 2009ರವರೆಗೆ ರಾಜ್ಯಸಭೆ ಸದಸ್ಯರಾಗಿದ್ದರು. ಬಳಿಕ ಭಾರತ ಸರ್ಕಾರದ ಯೋಜನಾ ಆಯೋಗದ ಸದಸ್ಯರಾಗಿದ್ದರು.


ರಾಕೇಶ್‌ ಪೂಜಾರಿ

ವಿಶಿಷ್ಟ ಮ್ಯಾನರಿಸಂ, ಪಂಚಿಂಗ್‌ ಡೈಲಾಗ್‌ ಮೂಲಕ ಎಲ್ಲರ ಗಮನ ಗಮನ ಸೆಳೆದಿದ್ದ ನಟ ರಾಕೇಶ್‌ ಪೂಜಾರಿ ಮೇ 12ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಇವರು ಹೊಂಬಾಳೆ ಫಿಲ್ಮ್ಸ್‌ನ ಬಹು ನಿರೀಕ್ಷಿತ ʼಕಾಂತಾರ ಚಾಪ್ಟರ್‌ 1ʼ ಸಿನಿಮಾದಲ್ಲೂ ಅದ್ಬುತ ಪಾತ್ರವನ್ನು ನಿಭಾಯಿಸಿದ್ದರು. ಆದರೆ ಆ ಚಿತ್ರ ತೆರೆ ಕಾಣುವ ಮುನ್ನವೇ 33 ವರ್ಷದ ರಾಕೇಶ್‌ ನಿಧನ ಹೊಂದಿದ್ದರು. ಸ್ನೇಹಿತರೊಬ್ಬರ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರಿಗೆ ಅಲ್ಲಿಯೇ ಹೃದಯಾಘಾತವಾಗಿತ್ತು.


ಮಂಗಳೂರು ದಿನೇಶ್‌

ಕೆಜಿಎಫ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಸ್ಯಾಂಡಲ್ ವುಡ್ ಹಿರಿಯ ಪೋಷಕ ನಟ ಮಂಗಳೂರು ದಿನೇಶ್ ಆ.25ರಂದು ನಿಧನರಾಗಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರದ ಮನೆಯಲ್ಲಿ ನಟ ದಿನೇಶ್ ಇಂದು ಬೆಳಗ್ಗೆ 3.30ಕ್ಕೆ ನಿಧನರಾಗಿದ್ದಾರೆ. ಕೆಜಿಎಫ್, ಉಳಿದವರು ಕಂಡಂತೆ, ರಿಕ್ಕಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು.


ಡಾ. ಶ್ರೀ ಶರಣಬಸವಪ್ಪ ಅಪ್ಪ

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶ್ರೀ ಶರಣಬಸವಪ್ಪ ಅಪ್ಪ (92) ಅವರು ಆ.14ರಂದು ವಿಧಿವಶರಾಗಿದ್ದರು. ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳು, 'ಶಿಕ್ಷಣ ಕ್ರಾಂತಿಯ ಹರಿಕಾರ' ಎಂದು ಪರಿಚಿತರಾಗಿದ್ದು, 60ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣದ ಬೆಳಕನ್ನು ಹರಡಿದ್ದರು; ಆಗಸ್ಟ್ 14, 2025 ರಂದು 92ನೇ ವಯಸ್ಸಿನಲ್ಲಿ ನಿಧನರಾದ ಇವರನ್ನು ಮಹಾದಾಸೋಹಿ ಎಂದು ಕರೆಯಲಾಗುತ್ತಿತ್ತು, ಮತ್ತು ಇವರ ನಂತರ ಪುತ್ರ ದೊಡ್ಡಪ್ಪ ಅಪ್ಪ 9ನೇ ಪೀಠಾಧಿಪತಿಯಾಗಿ ಅಧಿಕಾರ ವಹಿಸಿಕೊಂಡರು.


ಸರೋಜಾ ದೇವಿ

ಬಿ. ಸರೋಜಾದೇವಿ ಅವರು ಸೆ.14ರಂದು ವಿಧಿವಶರಾಗಿದ್ದರು. 1955 ರಿಂದ 1984 ರವರೆಗೆ ಸತತವಾಗಿ 161 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದ ಇವರು, ಕೊನೆಯದಾಗಿ 2020 ರಲ್ಲಿ ಪುನೀತ್‌ ರಾಜ್‌ಕುಮಾರ್‌ ಅಭಿನಯದ ನಟ ಸಾರ್ವಭೌಮ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸರೋಜಾದೇವಿ ಅವರು 1969ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 1992ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿನಿಂದ ಕಲೈಮಾಮಣಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.


ಎಸ್‌.ಎಲ್‌. ಭೈರಪ್ಪ

ಸೆ.24ರಂದು ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರು ವಿಧಿವಶರಾಗಿದ್ದರು. ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರರು ಮತ್ತು ಲೇಖಕರು. ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ಹೆಸರಾಗಿದ್ದಾರೆ. ಇವರ ಕಾದಂಬರಿಗಳು ಹಲವಾರು ಮರುಮುದ್ರಣಗಳನ್ನು ಕಂಡು ಕನ್ನಡದ ಜನಪ್ರಿಯ ಬರಹಗಾರರಾಗಿದ್ದಾರೆ.ಇವರಿಗೆ ಭಾರತ ಸರ್ಕಾರವು 2023ನೇ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.


ಯಶವಂತ್‌ ಸರದೇಶಪಾಂಡೆ

ನಟ, ರಂಗ ನಿರ್ದೇಶಕ ಯಶವಂತ್ ಸರದೇಶಪಾಂಡೆ ಸೆ.29ರಂದು ನಿಧನರಾಗಿದ್ದಾರೆ. ಇವರು 1965ರ ಜೂ.13ರಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಶ್ರೀಧರರಾವ್ ಗೋಪಾಲರಾವ್ ಸರದೇಶಪಾಂಡೆ, ತಾಯಿ ಕಲ್ಪನಾದೇವಿ. ರಾಜ್ಯಾದಂತ್ಯ ಇವರು ನಟಿಸಿ-ನಿರ್ದೇಶಿಸಿರುವ ʻಆಲ್ ದಿ ಬೆಸ್ಟ್ʼ ನಾಟಕ ಅಭೂತಪೂರ್ವ ಯಶಸ್ಸು ಕಂಡಿತ್ತು. ಈಗ ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ಪಾತ್ರವಹಿಸುತ್ತಿದ್ದಾರೆ.


ರಾಜು ತಾಳಿಕೋಟೆ

ಖ್ಯಾತ ಪೋಷಕ ನಟ, ಹಾಸ್ಯ ನಟ ರಾಜು ತಾಳಿಕೋಟೆ ಅವರು ಅ.14 ಹೃದಯಾಘಾತದಿಂದ ನಿಧನರಾಗಿದ್ದರು. ವಿಜಯಪುರ (Vjayapura) ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕ ಸಿಂದಗಿ ಗ್ರಾಮದ ತೋಟದಲ್ಲಿ ಇಂದು ಅಂತ್ಯಕ್ರಿಯೆಗೆ ನಿರ್ಧಾರ ಮಾಡಲಾಗಿದೆ. ಚಿಕ್ಕಸಿಂದಗಿ ಗ್ರಾಮದ ಮೂಲದವರಾಗಿದ್ದ ರಾಜು, ಚಲನಚಿತ್ರದಲ್ಲಿ ಪ್ರಸಿದ್ಧರಾದ ನಂತರ ತಾಳಿಕೋಟಿ ನಗರದಲ್ಲಿ ವಾಸವಾಗಿದ್ದರು.


ಎಚ್.ವೈ. ಮೇಟಿ

ಹಿರಿಯ ಕಾಂಗ್ರೆಸ್ ನಾಯಕ, ಐದು ಬಾರಿ ಶಾಸಕರು ಮತ್ತು ಮಾಜಿ ಅಬಕಾರಿ ಸಚಿವರಾಗಿದ್ದ ಎಚ್.ವೈ. ಮೇಟಿ ಅವರು ನವೆಂಬರ್ 4, 2025 ರಂದು ನಿಧನರಾಗಿದ್ದರು. ಅವರಿಗೆ 79ವರ್ಷ ವಯಸ್ಸಾಗಿತ್ತು. ಎಚ್‌.ವೈ ಮೇಟಿ 2023ರ ವಿಧಾನಸಭೆ ಚುನಾವಣೆಯಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ವೀರಣ್ಣ ಚರಂತಿಮಠರನ್ನು ಸೋಲಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. ಈ ಹಿಂದೆ 2013ರಿಂದ 2016 ರವರೆಗಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಎಚ್‌.ವೈ ಮೇಟಿ ಅಬಕಾರಿ ಖಾತೆ ಸಚಿವರಾಗಿದ್ದರು.


ಹರೀಶ್‌ ರಾಯ್‌

ʻಕೆಜಿಎಫ್‌ʼ ಸಿನಿಮಾದಲ್ಲಿ ಮಾಡಿದ ಚಾಚಾ ಪಾತ್ರದಂದ ʻಕೆಜಿಎಫ್‌ ಚಾಚಾʼ ಎಂದೇ ಖ್ಯಾತರಾದ ಸ್ಯಾಂಡಲ್‌ವುಡ್ ಖ್ಯಾತ ಖಳನಟ ಹರೀಶ್‌ ಆಚಾರ್ಯ (ಹರೀಶ್‌ ರಾಯ್‌) (55) ನ.7ರಂದು ಕೊನೆಯುಸಿರೆಳೆದರು. ಮಾತ್ರವಲ್ಲದೆ, ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದ ಇವರು ಶಿವರಾಜ್ ಕುಮಾರ್ ಅಭಿನಯದ ‘ಓಂ’ ಚಿತ್ರದಲ್ಲಿನ ‘ರಾಯ್’ ಭೂಗತ ಡಾನ್‌ ಪಾತ್ರದಿಂದ ಗಮನ ಸೆಳೆದವರು. ಇದು ಮುತ್ತಪ್ಪ ರೈ ಹೋಲುವ ಪಾತ್ರ ಆಗಿತ್ತು. ಆ ಮೂಲಕ, ಅದುವರೆಗೆ ಹರೀಶ್‌ ಆಚಾರ್ಯ ಆಗಿದ್ದ ಅವರು, ಹರೀಶ್‌ ರಾಯ್‌ ಎನಿಸಿಕೊಂಡಿದ್ದರು.


ಗಡ್ಡಪ್ಪ

ತಿಥಿ ಸಿನಿಮಾ ಮೂಲಕ ಮನೆ ಮಾತಾಗಿದ್ದ ನಟ ಗಡ್ಡಪ್ಪ ನ.12ರಂದು ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಇಂದು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದರು. ಇವರು ಮಂಡ್ಯ ತಾಲೂಕಿನ ನೊದೆಕೊಪ್ಪಲು ಮೂಲದ ಚನ್ನೇಗೌಡ ಅವರು, ತಮ್ಮ ಮೂಲ ಹೆಸರಿಗಿಂತ 'ಗಡ್ಡಪ್ಪ' ಎಂದೇ ನಾಡಿನಾದ್ಯಂತ ಜನಜನಿತರದವರು.


ಸಾಲುಮರದ ತಿಮ್ಮಕ್ಕ

ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನ.14ರಂದು ಇಹಲೋಕ ತ್ಯಜಿಸಿದ್ದರು. ಅವರಿಗೆ 114ವರ್ಷ ವಯಸ್ಸಾಗಿತ್ತು. ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಶತಾಯುಷಿ ಸಾಲುಮರದ ತಿಮ್ಮಕ್ಕ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದ್ದರು. ಮಕ್ಕಳಿಲ್ಲದ ತಿಮ್ಮಕ್ಕನವರು ಮರಗಿಡಗಳನ್ನೇ ತಮ್ಮ ಮಕ್ಕಳಂತೆ ಸಾಕುತ್ತಿದ್ದರು. ಅವರು ನೆಟ್ಟಿರುವ ಮರಗಳು ಇವತ್ತು ಹೆಮ್ಮರವಾಗಿ ಬೆಳೆದು ನಿಂತು ಜನರಿಗೆ ನೆರಳು ನೀಡುತ್ತಿವೆ. ಸುಮಾರು 4,000 ಕ್ಕೂ ಹೆಚ್ಚು ಮರಗಳನ್ನು ಬೆಳೆಸುವ ಮೂಲಕ ಸಾಲುಮರದ ತಿಮ್ಮಕ್ಕ ಎಂದೇ ಹೆಸರು ವಾಸಿಯಾಗಿದ್ದರು.


ಎಂ.ಎಸ್‌. ಉಮೇಶ್‌

ಕನ್ನಡ ಚಿತ್ರರಂಗ ಹಿರಿಯ ನಟ ಉಮೇಶ್‌ ನ.30ರಂದು ವಿಧಿವಶರಾಗಿದ್ದರು. 1960ರ ದಶಕದಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಉಮೇಶ್‌ ಪೋಷಕ ಪಾತ್ರಗಳು ಹಾಗೂ ಹಾಸ್ಯ ಪಾತ್ರಗಳ ಮೂಲಕ ಅವರು ಜನಪ್ರಿಯತೆ ಪಡೆದಿದ್ದರು. ಉಮೇಶ್‌ ಸುಮಾರು 350 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದು, ಡಾ. ರಾಜಕುಮಾರ್‌, ವಿಷ್ಣು ವರ್ಧನ್‌ ಸೇರಿದಂತೆ ಹಲವು ಮೇರು ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದರು.


ಆರ್‌ವಿ ದೇವರಾಜ್‌

ಕಾಂಗ್ರೆಸ್‌ ನಾಯಕ ಆರ್.ವಿ ದೇವರಾಜ್‌ ಡಿ.1ರಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿಗೆ ಹೋಗಿದ್ದ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದರು. ಇವರು 1989ರ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ್ತು 1999 ಹಾಗೂ 2013ರಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. 2004 ರಿಂದ 2010 ರವರೆಗೆ ವಿಧಾನ ಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೇ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಶಾಮನೂರು ಶಿವಶಂಕರಪ್ಪ

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಾಂಗ್ರೆಸ್ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ (94) ಡಿ.14 ರಂದು ವಿಧಿವಶರಾಗಿದ್ದಾರೆ. 94 ವರ್ಷದ ಶಾಮನೂರು ಶಿವಶಂಕರಪ್ಪ ಅವರು ಭಾರತದಲ್ಲೇ ಹಿರಿಯ ಶಾಸಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದವರು. ಶಾಮನೂರ್ ಶಿವಶಂಕರಪ್ಪ ಅವರು 1931 ಜೂನ್‌ 16ರಂದು ಶಾಮನೂರು ಕಲ್ಲಪ್ಪ – ಶಾಮನೂರು ಸಾವಿತ್ರಮ್ಮ ದಂಪತಿ ಪುತ್ರನಾಗಿ ದಾವಣಗೆರೆ ಜಿಲ್ಲೆಯಲ್ಲಿ ಜನಿಸಿದ್ದರು.


Read More
Next Story