Woman Sexually Harassed in Bengaluru During Morning Dog Walk
x

ಸಾಂದರ್ಭಿಕ ಚಿತ್ರ

ಬೆಂಗಳೂರಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ನಾಯಿ ಜತೆ ವಾಕಿಂಗ್ ಹೋಗುವಾಗ ಘಟನೆ

ನವೆಂಬರ್ 1 ರಂದು, ಬೆಳಿಗ್ಗೆ ಸುಮಾರು 11. 57ಕ್ಕೆ, ಮಹಿಳೆಯು ತಮ್ಮ ಸಾಕು ನಾಯಿಯೊಂದಿಗೆ ವಾಕಿಂಗ್‌ನಲ್ಲಿದ್ದರು. ಈ ವೇಳೆ, ಸುಮಾರು 30 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬ 'ಮೇಡಂ' ಎಂದು ಕೂಗಿ ಅವರ ಗಮನ ಸೆಳೆದಿದ್ದಾನೆ.


Click the Play button to hear this message in audio format

ರಾಜಧಾನಿ ಬೆಂಗಳೂರಿನ ಇಂದಿರಾನಗರದಂತಹ ಪ್ರತಿಷ್ಠಿತ ಬಡಾವಣೆಯಲ್ಲಿ, ನಾಯಿಯನ್ನು ವಾಕಿಂಗ್ ಕರೆದೊಯ್ದಿದ್ದ 33 ವರ್ಷದ ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ ನಡೆದಿದೆ.

ನವೆಂಬರ್ 1 ರಂದು, ಬೆಳಿಗ್ಗೆ ಸುಮಾರು 11. 57ಕ್ಕೆ, ಮಹಿಳೆಯು ತಮ್ಮ ಸಾಕು ನಾಯಿಯೊಂದಿಗೆ ವಾಕಿಂಗ್‌ನಲ್ಲಿದ್ದರು. ಈ ವೇಳೆ, ಸುಮಾರು 30 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬ 'ಮೇಡಂ' ಎಂದು ಕೂಗಿ ಅವರ ಗಮನ ಸೆಳೆದಿದ್ದಾನೆ. ಮಹಿಳೆ ಹಿಂತಿರುಗಿ ನೋಡಿದಾಗ, ಆತ ಸಾರ್ವಜನಿಕವಾಗಿಯೇ ತನ್ನ ಅಸಭ್ಯತನ ಪ್ರದರ್ಶಿಸಿ, ಹಸ್ತಮೈಥುನ ಮಾಡಿಕೊಳ್ಳಲು ಆರಂಭಿಸಿದ್ದಾನೆ.

ಈ ಅನಿರೀಕ್ಷಿತ ಘಟನೆಯಿಂದ ಆಘಾತಕ್ಕೊಳಗಾದ ಮಹಿಳೆ ತಕ್ಷಣವೇ ನಾಯಿಯೊಂದಿಗೆ ಮನೆಗೆ ಓಡಿ ಹೋಗಿದ್ದಾರೆ. ನಂತರ, ನಡೆದ ಘಟನೆಯನ್ನು ತಮ್ಮ ಸಹೋದರಿ ಹಾಗೂ ಸ್ನೇಹಿತರಿಗೆ ತಿಳಿಸಿ, ಅವರ ಸಹಾಯದಿಂದ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯು ಉದ್ದೇಶಪೂರ್ವಕವಾಗಿಯೇ ತನ್ನ ಮಾನಭಂಗ ಮಾಡಲು ಯತ್ನಿಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣ ದಾಖಲು, ಆರೋಪಿಗೆ ಶೋಧ

ಸಂತ್ರಸ್ತೆಯ ದೂರಿನ ಅನ್ವಯ, ಇಂದಿರಾನಗರ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 75ರ ಅಡಿಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಯನ್ನು ಗುರುತಿಸಿ, ಬಂಧಿಸಲು ತನಿಖೆ ಚುರುಕುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Read More
Next Story