ಅರಮನೆ ಬಳಿ ಪಾರಿವಾಳಕ್ಕೆ ಆಹಾರ ನಿಷೇಧಕ್ಕೆ ಒತ್ತಾಯಿಸುತ್ತಿರುವುದೇಕೆ?
x

ಅರಮನೆ ಬಳಿ ಪಾರಿವಾಳಕ್ಕೆ ಆಹಾರ ನಿಷೇಧಕ್ಕೆ ಒತ್ತಾಯಿಸುತ್ತಿರುವುದೇಕೆ?


ನೈಸರ್ಗಿಕ ಕಾರಣಗಳಿಂದ ವಾಸ್ತುಶಿಲ್ಪ ಮತ್ತು ಪಾರಂಪರಿಕ ರಚನೆಗಳು ಸವೆತದ ಅಪಾಯ ಎದುರಿಸುತ್ತಿವೆ. ಆದರೆ, ಪಾರಿವಾಳಗಳಿಗೆ ಆಹಾರ ನೀಡುವಿಕೆಯಿಂದ ಪಾರಂಪರಿಕ ಕಟ್ಟಡಗಳಿಗೆ ಹಾನಿಯಾಗುತ್ತದೆ ಎಂದು ಎಷ್ಟು ಜನರಿಗೆ ತಿಳಿದಿದೆ? ಸರಿಸಾಟಿ ಇಲ್ಲದ ಮೈಸೂರು ಅರಮನೆ ಮತ್ತು ಇನ್ನಿತರ ಪಾರಂಪರಿಕ ಕಟ್ಟಡಗಳ ವಿಷಯದಲ್ಲಿ ಇದು ನಿಜ.

ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅರಮನೆ ಬಳಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಲ್ಲಿಸಲು ಮುಂದಾಗಿದ್ದಾರೆ. ಈ ಸಂಬಂಧ ಕಾನೂನು ರೂಪಿಸಬೇಕೆಂದು ಅವರು ಮೈಸೂರು ನಗರ ಪಾಲಿಕೆಯನ್ನು ಕೋರಿದ್ದಾರೆ.

ಆದರೆ, ಸದ್ಯಕ್ಕೆ ಸ್ಥಳೀಯ ಜನರೊಂದಿಗೆ ಚರ್ಚಿಸಿ, ಪಾರಿವಾಳಗಳಿಗೆ ಮೇವು ನೀಡುವಿಕೆ ಸ್ಥಗಿತಗೊಳಿಸಿದ್ದಾರೆ. ನಗರದ ಜೈನ ಸಮುದಾಯ ಮತ್ತು ಇತರರು ಆಹಾರ ನೀಡುವುದನ್ನು ನಿಲ್ಲಿಸಲು ಒಪ್ಪಿಕೊಂಡಿದ್ದಾರೆ. ಸಮುದಾಯದವರು ʻಕಬೂತರ್ ದಾ‌‌ನ್‌ (ಪಾರಿವಾಳಗಳಿಗೆ ಉಡುಗೊರೆ)ʼ ಎಂದು ಕರೆಯುವ ಈ ಚಟುವಟಿಕೆಯಿಂದ ಪಾರಂಪರಿಕ ಕಟ್ಟಡಗಳಿಗೆ ಹೇಗೆ ಹಾನಿಯುಂಟಾಗುತ್ತಿದೆ ಎಂದು ಸಂಸದರು ಭಾನುವಾರ ವಿವರಿಸಿದರು.

ನಿಷೇಧ ಕೋರಿದ್ಧೇಕೆ?: ಒಡೆಯರ್ ಅವರು ಸ್ಥಳೀಯ ಜನರ ಸಭೆಯನ್ನು ಏಕೆ ಕರೆಯಲಾಯಿತು ಮತ್ತು ಪಾರಿವಾಳಕ್ಕೆ ಆಹಾರ ನೀಡುವುದನ್ನು ನಿಲ್ಲಿಸಲು ಏಕೆ ಮುಂದಾಗಿದ್ದೇನೆ ಎಂದು ದ ಫೆಡರಲ್‌ಗೆ ತಿಳಿಸಿದರು.

ʻಮೊದಲಿಗೆ, ಪಾರಿವಾಳಕ್ಕೆ ಆಹಾರ ನೀಡುವಿಕೆಯು ಗಂಭೀರ ಆರೋಗ್ಯ ಸಮಸ್ಯೆಯನ್ನು ಹುಟ್ಟುಹಾಕುತ್ತದೆ. ಪಾರಿವಾಳಗಳು ವಿವಿಧ ಶ್ವಾಸಕೋಶದ ಕಾಯಿಲೆ ಉಂಟುಮಾಡಬಹುದು ಮತ್ತು ವಿಶೇಷವಾಗಿ ಮಕ್ಕಳಲ್ಲಿ ಅಸ್ತಮಾವನ್ನು ಪ್ರಚೋದಿಸಬಹುದು,ʼ ಎಂದು ಹೇಳಿದರು.

ʻಎರಡನೆಯದಾಗಿ, ಮೈಸೂರು ನಗರವು ಅರಮನೆ ಸೇರಿದಂತೆ ಹಲವು ಪಾರಂಪರಿಕ ಕಟ್ಟಡಗಳಿಗೆ ಹೆಸರುವಾಸಿಯಾಗಿದೆ. ಪಾರಿವಾಳದ ಹಿಕ್ಕೆ ತನ್ನ ಆಮ್ಲೀಯ ಗುಣದಿಂದ ಕಲ್ಲುಗಳು ಮತ್ತು ನೆಲಹಾಸಿನಲ್ಲಿ ಸವೆತ ಉಂಟುಮಾಡುತ್ತದೆ. ಕೊನೆಯದಾಗಿ, ಪಾರಿವಾಳಗಳು ನಗರ ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಬರುವುದರಿಂದ ಮತ್ತು ಉಳಿವಿಗೆ ಮನುಷ್ಯರನ್ನು ಅವಲಂಬಿಸಿಲ್ಲವಾದ್ದರಿಂದ ಅವುಗಳಿಗೆ ಆಹಾರ ನೀಡುವ ಅಗತ್ಯವಿಲ್ಲʼ ಎಂದು ಹೇಳಿದರು.

ಸಾರ್ವಜನಿಕರು ಮತ್ತು ಆರೋಗ್ಯ ಅಧಿಕಾರಿಗಳಿಂದ ಈಸಂಬಂಧ ತನಗೆ ಹಲವು ದೂರುಗಳು ಬಂದಿವೆ ಎಂದು ಒಡೆಯರ್ ಹೇಳಿದರು.

ಆರೋಗ್ಯ ಕಾಳಜಿ: ʻಎನ್‌ಜಿಒಗಳು ಮತ್ತು ಸಾರ್ವಜನಿಕರ ವಿನಂತಿ ನಂತರ ತಾನು ಈ ಕೆಲಸಕ್ಕೆ ಇಳಿದಿದ್ದೇನೆ,ʼ ಎಂದು ಒಡೆಯರ್ ಹೇಳಿದರು. ಅವರು ಸಂಪರ್ಕಿಸಿದ ವೈದ್ಯರು ಮತ್ತು ಶ್ವಾಸಕೋಶ ತಜ್ಞರು ಅವರನ್ನು ಬೆಂಬಲಿಸಿದ್ದಾರೆ.

ಭಾನುವಾರ ಮೈಸೂರು ಅರಮನೆ ಬಳಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಲ್ಲಿಸುವಂತೆ ಅವರು ಕೋರಿದರು. ಆದರೆ, ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ನಂಜರಾಜ್ ಅರಸ್ ನೇತೃತ್ವದ ಕಾರ್ಯಕರ್ತರ ಗುಂಪು ಪಾರಿವಾಳಗಳಿಗೆ ಆಹಾರ ನೀಡಲು ಆಗಮಿಸಿತು. ಮೈಸೂರು ಪಾಲಿಕೆ ಅಧಿಕಾರಿಗಳು ಅವರನ್ನು ತಡೆದಾಗ, ವಾಗ್ವಾದ ನಡೆಯಿತು.

ಇದರಿಂದ ಸಾರ್ವಜನಿಕ ಚರ್ಚೆ ನಡೆಸಲು ಒಡೆಯರ್ ನಿರ್ಧರಿಸಿದರು. ನಾಗರಿಕರು, ಪರಿಸರವಾದಿಗಳು ಮತ್ತು ವೈದ್ಯರು ಹಾಜರಿದ್ದರು.

ಸಾರ್ವಜನಿಕ ಮನವಿ: ʻಪಾರಿವಾಳಗಳು ಸಮೀಪದ ಪಾರಂಪರಿಕ ಕಟ್ಟಡಗಳಲ್ಲಿ ನೆಲೆಸುತ್ತವೆ. ಅರಮನೆ ಸುತ್ತಲಿನ ಅಮೃತಶಿಲೆಯ ಪ್ರತಿಮೆಗಳಿಗೆ ಹಾನಿಯುಂಟು ಮಾಡುತ್ತಿವೆʼ ಎಂದು ಜನರಿಗೆ ವಿವರಿಸಿದರು. ಸಭೆಯಲ್ಲಿ ಹಾಜರಿದ್ದ ವೈದ್ಯರು, ಪಾರಿವಾಳಗಳ ಹೆಚ್ಚಳದಿಂದ ಆರೋಗ್ಯಕ್ಕೆ ಅಪಾಯ ಆಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಇತಿಹಾಸಕಾರ ಎನ್.ಎಸ್.ರಂಗರಾಜು ಅವರು ಮೈಸೂರಿನ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ಮಹತ್ವವನ್ನು ವಿವರಿಸಿದರು. ʻಪಾರಂಪರಿಕ ತಾಣಗಳ ಸುತ್ತಮುತ್ತಲಿನ ಉದ್ಯಾನಗಳಲ್ಲಿ ಇಲಿಗಳು ಮತ್ತು ದಂಶಕಗಳು ಇವೆ. ಇವು ಕಟ್ಟಡಗಳಿಗೆ ಅಪಾಯ ಉಂಟು ಮಾಡುತ್ತವೆʼ ಎಂದು ಹೇಳಿದರು.

ಜೈನ ಸಮುದಾಯದ ಮುಖಂಡ ಯಶ್ ವಿನೋದ್ ಜೈನ್ ಅವರು ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಲ್ಲಿಸುವುದಾಗಿ ತಿಳಿಸಿದರು. ʻಪಾರಿವಾಳಗಳಿಗೆ ಆಹಾರ ನೀಡುವ ಸಮುದಾಯದ ಸದುದ್ದೇಶದ ಕ್ರಿಯೆ ತೊಂದರೆಗೆ ಕಾರಣವಾಗುತ್ತಿದೆ ಎಂದು ಗೊತ್ತಿರಲಿಲ್ಲ,ʼ ಎಂದು ಹೇಳಿದರು.

Read More
Next Story