ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ: ಐದು ದಿನ ವಾಹನ ಸಂಚಾರಕ್ಕೆ ನಿರ್ಬಂಧ
x

ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ: ಐದು ದಿನ ವಾಹನ ಸಂಚಾರಕ್ಕೆ ನಿರ್ಬಂಧ

ಆಗಸ್ಟ್ 25ರಿಂದ 30ರವರೆಗೆ ಭಾರೀ ಗಾತ್ರದ ವಾಹನ ಸೇರಿದಂತೆ ಬಸ್‌ಗಳು ಜೆ.ಸಿ. ರಸ್ತೆ ಮತ್ತು ಮಿನರ್ವಾ ಸರ್ಕಲ್ ಕಡೆಗೆ ಸಂಚರಿಸಲು ಅವಕಾಶ ಇರುವುದಿಲ್ಲ ಎಂದು ಬೆಂಗಳೂರು ಪಶ್ಚಿಮ ವಲಯ ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ ಜೆ.ಸಿ. ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಕಾರಣ ಇಂದಿನಿಂದ ಐದು ದಿನಗಳ ಕಾಲ ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ.

ಆಗಸ್ಟ್ 25ರಿಂದ 30ರವರೆಗೆ ಭಾರೀ ಗಾತ್ರದ ವಾಹನ ಸೇರಿದಂತೆ ಬಸ್‌ಗಳು ಜೆ.ಸಿ. ರಸ್ತೆ ಮತ್ತು ಮಿನರ್ವಾ ಸರ್ಕಲ್ ಕಡೆಗೆ ಸಂಚರಿಸಲು ಅವಕಾಶ ಇರುವುದಿಲ್ಲ ಎಂದು ಬೆಂಗಳೂರು ಪಶ್ಚಿಮ ವಲಯ ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಪರ್ಯಾಯ ಮಾರ್ಗ ಯಾವುದು?

ಮೆಜೆಸ್ಟಿಕ್ ಕಡೆಗೆ ಬರುವವರು ರಾಮ ಕೃಷ್ಣ ಆಶ್ರಮ – ಬುಲ್ ಟೆಂಪಲ್ ರಸ್ತೆ – ಚಾಮರಾಜ ಪೇಟೆ – ಗೂಡ್ ಶೆಡ್ ರಸ್ತೆ ಮಾರ್ಗವಾಗಿ ಸಂಚರಿಸಬೇಕು.

ಹೊಸೂರು ರಸ್ತೆಗೆ ಹೋಗುವವರು ಕಲಾಸಿಪಾಳ್ಯ ಬಸ್ ನಿಲ್ದಾಣ – ಕೆ.ಆರ್. ರಸ್ತೆ – ಲಾಲ್ ಬಾಗ್ ವೆಸ್ಟ್ ಗೇಟ್ – ಅಶೋಕ ಪಿಲ್ಲರ್ ರಸ್ತೆ ಬಳಸಬಹುದು.

ಹೊಸೂರು ರಸ್ತೆಯಿಂದ ಮೆಜೆಸ್ಟಿಕ್ ಕಡೆಗೆ ಬರುವವರು ಡಬಲ್ ರಸ್ತೆ – ರಿಚ್ಮಂಡ್ ಸರ್ಕಲ್ – ಹಡ್ನನ್ ಸರ್ಕಲ್ – ಕೆ.ಜಿ. ರಸ್ತೆ ಮಾರ್ಗ ಬಳಸಬೇಕು ಎಂದು ಸಂಚಾರಿ ಪೊಲೀಸರು ಸಲಹೆ ನೀಡಿದ್ದಾರೆ.

ಜೆ.ಸಿ. ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Read More
Next Story