Naxal Affected Area | ನಕ್ಸಲ್‌ಪೀಡಿತ ಪ್ರದೇಶಗಳ ಜನರ ಕಷ್ಟ ಕೇಳುವುದು ಯಾವಾಗ?
x
ಮಲೆಕುಡಿಯ ಸಮುದಾಯದ ಜಿಲ್ಲಾಧ್ಯಕ್ಷ ಗಂಗಾಧರ್‌

Naxal Affected Area | ನಕ್ಸಲ್‌ಪೀಡಿತ ಪ್ರದೇಶಗಳ ಜನರ ಕಷ್ಟ ಕೇಳುವುದು ಯಾವಾಗ?

ಪೊಲೀಸ್ ಮತ್ತು ನಕ್ಸಲರ ನಡುವೆ ಮಲೆಕುಡಿಯ ಸಮುದಾಯ ಕಂಗಾಲಾಗಿದೆ. ಮೂರು ದಶಕದಿಂದ ಕಳೆದರೂ ಅರಣ್ಯವನ್ನೇ ನಂಬಿ ಬದುಕುವ ಮಲೆಕುಡಿಯ ಜನಾಂಗದ ಸ್ಥಿತಿಗತಿ ಬದಲಾಗಿಲ್ಲ


Click the Play button to hear this message in audio format

ಹೋರಾಟ ಬಿಟ್ಟು ಮುಖ್ಯವಾಹಿನಿಗೆ ಬರುವ ನಕ್ಸಲರನ್ನು ಸ್ವಾಗತಿಸುತ್ತೇವೆ ಎಂದು ಸರ್ಕಾರದ ಘೋಷಣೆ ಬೆನ್ನಲ್ಲೇ ಇಂದು 6 ನಕ್ಸಲರು ಶರಣಾಗುತ್ತಿದ್ದಾರೆ. ಹೀಗೆ ಶರಣಾಗತ ನಕ್ಸಲರಿಗೆ ಸರ್ಕಾರದಿಂದ ವಿವಿಧ ಪ್ಯಾಕೇಜ್ ಘೋಷಣೆ ಮಾಡಲಾಗುತ್ತದೆ. ಆದರೆ ನಕ್ಸಲ್ ಪೀಡಿತ ಪ್ರದೇಶಗಳ ಜನರ ಕಷ್ಟಗಳನ್ನು ಕೇಳುವುದು ಯಾವಾಗ ಎಂದು ಮಲೆಕುಡಿಯ ಸಮುದಾಯದ ಜಿಲ್ಲಾಧ್ಯಕ್ಷ ಗಂಗಾಧರ್‌ ಪ್ರಶ್ನಿಸಿದ್ದಾರೆ.

ಮಲೆಕುಡಿಯ ಸಮುದಾಯಕ್ಕೆ ಕಾಡು ಬಿಟ್ಟು ನಾಡಿಗೆ ಬನ್ನಿ ಎಂದು ಸರ್ಕಾರ ಹೇಳುತ್ತದೆ. ಆದರೆ, ಸರ್ಕಾರದ ಭರವಸೆ ಬಗ್ಗೆ ಮಲೆ ಕುಡಿಯ ಸಮುದಾಯಕ್ಕೆ ನಂಬಿಕೆ ಇಲ್ಲ ಎಂಬ ಮಾತು ಕೇಳಿಬಂದಿದೆ. ಮಲೆಕುಡಿಯ ಸಮುದಾಯದ ಅಭಿವೃದ್ಧಿಗೆ ಸರ್ಕಾರ ವಿಶೇಷ ಕಾಳಜಿ ವಹಿಸಬೇಕು. ಸಮುದಾಯದವರು ವಾಸಿಸುವ ಸ್ಥಳಗಳಲ್ಲಿ ಮೂಲಭೂತ ಸೌಕರ್ಯವಿಲ್ಲ ಎಂದು ಮಲೆಕುಡಿಯ ಸಮುದಾಯದ ಜಿಲ್ಲಾಧ್ಯಕ್ಷ ಗಂಗಾಧರ್ ಹೇಳಿದರು.

ಮಲೆಕುಡಿಯ ಸಮುದಾಯದವರಿಗೆ ಉದ್ಯೋಗದಲ್ಲಿ ಮೀಸಲಾತಿ ಕೊಡಬೇಕು. ಗೌರವಯುತ ಜೀವನ ನಡೆಸಲು ಬೇಕಾಗುವಂತ ಸೌಲಭ್ಯಗಳು ಸಿಗುವಂತಾಗಬೇಕು ಎಂದು ಗಂಗಾಧರ್ ಹೇಳಿದರು.

ಅರಣ್ಯ ಬಿಟ್ಟು ಬಂದು ಬದುಕುವುದು ಹೇಗೆ? ಪೊಲೀಸ್ ಮತ್ತು ನಕ್ಸಲರ ನಡುವೆ ಮಲೆಕುಡಿಯ ಸಮುದಾಯ ಕಂಗಾಲಾಗಿದೆ. ಎರಡು ದಶಕ ಕಳೆದರೂ ಅರಣ್ಯವನ್ನೇ ನಂಬಿ ಬದುಕುವ ಮಲೆಕುಡಿಯ ಜನಾಂಗದ ಸ್ಥಿತಿಗತಿ ಬದಲಾಗಿತ್ತು. ಸರ್ಕಾರ ನಮ್ಮ ಹಳೆ ಬೇಡಿಕೆಗಳನ್ನು ಈಡೇರಿಲ್ಲ. ಈಗ ನಂಬುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ಸಮುದಾಯದ ಅಭಿವೃದ್ಧಿಗೆ 100 ಕೋಟಿ ರೂಪಾಯಿ ವಿಶೇಷ ಅನುದಾನಕ್ಕೆ ಮಲೆಕುಡಿಯ ಬೇಡಿಕೆ ಇಟ್ಟಿದೆ. ಕೃಷಿ ಭೂಮಿ ರಹಿತರಿಗೆ 400 ಎಕರೆ ಜಾಗ ಬೇಕು. ರಾಷ್ಟ್ರೀಯ ಉದ್ಯಾನವನ ಅಭಯಾರಣ್ಯದಿಂದ ಸ್ವಯಿಚ್ಛೆಯಿಂದ ಹೊರ ಬಂದರೆ ಬದುಕು ಕಟ್ಟಿಕೊಳ್ಳಲು ಏನು ಮಾಡುತ್ತೀರಿ? ಶಿಕ್ಷಣ, ಆರೋಗ್ಯ, ಉದ್ಯೋಗ ಪೂರಕ ವ್ಯವಸ್ಥೆ ಕಲ್ಪಿಸುವುದು ಯಾವಾಗ ಎಂದು ಮಲೆಕುಡಿಯ ಸಮುದಾಯದವರು ಪ್ರಶ್ನೆ ಮಾಡಿದ್ದಾರೆ.

Read More
Next Story