Naxals Surrender | ಶರಣಾಗಿರುವ ನಕ್ಸಲೀಯರ ಶಸ್ತ್ರಾಸ್ತ್ರ ಪತ್ತೆ
x
ಪೊಲೀಸರು ವಶಪಡಿಸಿಕೊಂಡಿರುವ ನಕ್ಸಲೀಯರ ಶಸ್ತಾಸ್ತ್ರಗಳು

Naxals Surrender | ಶರಣಾಗಿರುವ ನಕ್ಸಲೀಯರ ಶಸ್ತ್ರಾಸ್ತ್ರ ಪತ್ತೆ

Naxals Surrender |ಕೊಪ್ಪ ಠಾಣೆ ಇನ್ಸ್​ಪೆಕ್ಟರ್​​ ಮಂಜುನಾಥ್ ನೇತೃತ್ವದ ತಂಡ ಕಳೆದ ಎರಡು ದಿನಗಳಿಂದ ಹುಡುಕಾಟ ನಡೆಸಿ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಿದೆ.


ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಶರಣಾಗತರಾದ ಆರು ಮಂದಿ ನಕ್ಸಲರು ಬಳಸುತ್ತಿದ್ದ ಶಸ್ತ್ರಾಸ್ತ್ರಗಳನ್ನು ಚಿಕ್ಕಮಗಳೂರು ಪೊಲೀಸರು​ ಜಪ್ತಿ ಮಾಡಿದ್ದಾರೆ

ಕೊಪ್ಪ ತಾಲೂಕಿನ ಮೇಗೂರು ಅರಣ್ಯದಲ್ಲಿ ಹೂತು ಇಡಲಾಗಿದ್ದ AK 56 ಗನ್​​, ರಿವಾಲ್ವಾರ್, ಬಂದೂಕು​​​ ಸೇರಿದಂತೆ 6 ಶಸ್ತ್ರಾಸ್ತ್ರಗಳನ್ನು ಚಿಕ್ಕಮಗಳೂರು ಪೊಲೀಸರು​ ಜಪ್ತಿ ಮಾಡಿದ್ದಾರೆ. ನಕ್ಸಲರು ಶರಣಾಗತಿಗೂ ಮುನ್ನ ಮೇಗೂರು ಅರಣ್ಯದಲ್ಲಿ ಅಡಗಿದ್ದರು. ಶರಣಾಗುವ ದಿನ ಮೇಗೂರು ಅರಣ್ಯದಲ್ಲೇ ಕೊನೆಯಬಾರಿಗೆ ಸಭೆ ನಡೆಸಿದ್ದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಶರಣಾಗಿದ್ದರು.

ಕೊಪ್ಪ ಠಾಣೆ ಇನ್ಸ್​ಪೆಕ್ಟರ್​​ ಮಂಜುನಾಥ್ ನೇತೃತ್ವದ ತಂಡ ಕಳೆದ ಎರಡು ದಿನಗಳಿಂದ ಹುಡುಕಾಟ ನಡೆಸಿ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಿದೆ. ನಕ್ಸಲರು ಕೊನೆಯಬಾರಿಗೆ ಸಭೆ ನಡೆಸಿದ್ದ ಸ್ಥಳದಲ್ಲೇ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ನಕ್ಸಲರ ಬಳಿ‌ ಇದ್ದ ಶಸ್ತ್ರಾಸ್ತ್ರ, ಮದ್ದು ಗುಂಡು ವಿವರ

ಒಂದು AK 56, ಮೂರು 303 ರೈಫಲ್, ಒಂದು 12 bore SBBL, ಒಂದು ಕಂಟ್ರಿ ಮೇಡ್ ಪಿಸ್ತೂಲ್ ಸೇರಿಂದತೆ ಒಟ್ಟು 6 ಬಂದೂಕು ಪತ್ತೆಯಾಗಿವೆ. ಜೊತೆಗೆ ಹನ್ನೊಂದು 7.62ಎಂಎಂ AK ammunitions, 303 ಬಂದೂಕಿನ 133 ಗುಂಡುಗಳು ಸೇರಿದಂತೆ 176 ಜೀವಂತ ಗುಂಡುಗಳು ಪತ್ತೆಯಾಗಿವೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ 25(1ಬಿ), 7 ಮತ್ತು 25(1ಎ) ಶಸ್ತ್ರಾಸ್ತ್ರ ಕಾಯ್ದೆ 1959 ಅಡಿ ಪ್ರಕರಣ ದಾಖಲಾಗಿದೆ.

ಶಸ್ತ್ರಾಸ್ತ್ರ ಪ್ಯಾಕೇಜ್

ಇನ್ನು, ಕಾಂಗ್ರೆಸ್ ಸರ್ಕಾರ 2024ರಲ್ಲಿ ಹೊಸ ನಕ್ಸಲ್ ಶರಣಾಗತಿ ಪ್ಯಾಕೇಜ್ ಘೋಷಣೆ ಮಾಡಿತ್ತು. ಇದರಲ್ಲಿ ಶರಣಾಗತಿಯಾಗುವ ನಕ್ಸಲರು ತಮ್ಮ ಬಳಿ ಇರುವ ಶಸ್ತ್ರಾಸ್ತ್ರಗಳನ್ನ ಸರ್ಕಾರಕ್ಕೆ ಒಪ್ಪಿಸಿದರೆ ಪ್ರತಿ ಶಸ್ತ್ರಕ್ಕೂ ಹಣ ನೀಡುವುದಾಗಿ ಹೇಳಿತ್ತು.

ಸರ್ಕಾರ ಘೋಷಣೆ ಮಾಡಿರುವ ಶಸ್ತ್ರಗಳಿಗೆ ಪರಿಹಾರ ಎಷ್ಟು?

ಒಂದು AK 47ಗೆ: 30 ಸಾವಿರ ರೂ.

UMG, GPM, RPJ, ಸ್ನೈಪರ್ ರೈಫಲ್ ಒಂದಕ್ಕೆ: 50 ಸಾವಿರ ರೂ.

SAM ಮಿಸೈಲ್ ಒಂದಕ್ಕೆ : 40 ಸಾವಿರ ರೂ.

ಒಂದು ಗ್ರೆನೇಡ್​​ಗೆ: 2 ಸಾವಿರ ರೂ.

ಎಲ್ಲ ವಿಧದ ಮದ್ದುಗುಂಡು ಒಂದಕ್ಕೆ‌: 100 ರೂ.

ಪಿಸ್ತೂಲ್, ರಿವಾಲ್ವರ್: 10 ಸಾವಿರ ರೂ.

ರಾಕೆಟ್: 3 ಸಾವಿರ ರೂ.

ಒಂದು ಕೆಜೆ ಸ್ಫೋಟಕ ವಸ್ತುಗಳಿಗೆ: 4 ಸಾವಿರ ರೂ.

ಸೆಟಲೈಟ್ ಫೋನ್ ಒಂದಕ್ಕೆ: 20 ಸಾವಿರ ರೂ. ಸರ್ಕಾರ ನೀಡುತ್ತದೆ.

ಶರಣಾಗತಿ

ಬುಧವಾರ ಸಂಜೆ ಬೆಂಗಳೂರಿನ ಮುಖ್ಯಮಂತ್ರಿಗಳ ಅಧಿಕೃತ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಮ್ಮುಖದಲ್ಲಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಪೊಲೀಸರ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಮುಂಡಗಾರು ಲತಾ ಸೇರಿದಂತೆ ಸುಂದರಿ ಕುತ್ತೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಆರೋಲಿ, ಜಿಶಾ ವಯನಾಡು, ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಕೆ.ವಸಂತ್ ಆರು ಮಂದಿ ನಕ್ಸಲರು ಶರಣಾಗಿದ್ದರು.

ನಮಗೆ ಮನ ಪರಿವರ್ತನೆಯಾಗಿ ಶರಣಾಗಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರು ಶರಣಾಗತಿಗೆ ಆಹ್ವಾನ ನೀಡಿದ ಹಿನ್ನೆಲೆಯಿಂದ ಸ್ವ ಇಚ್ಛೆಯಿಂದ ಬಂದು ಕಾನೂನುಬದ್ದವಾಗಿ ಶರಣಾಗಿದ್ದೇವೆ. ನಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕೂಡ ಒಪ್ಪಿಕೊಂಡಿದೆ. ಕಾನೂನಿಗೆ ತಲೆ ಬಾಗುತ್ತೇವೆ, ಜೊತೆಗೆ ಜನಪರ ಹೋರಾಟಗಳನ್ನು ಮುಂದುವರಿಸುತ್ತೇವೆ ಎಂದು ಮುಂಡಗಾರು ಲತಾ ಹೇಳಿದ್ದರು.

Read More
Next Story