Wayanad Landslide LIVE | ಸಾವಿನ ಸಂಖ್ಯೆ 243ಕ್ಕೆ ಏರಿಕೆ; ಅಮಿತ್ ಶಾ ಮುನ್ಸೂಚನೆ ಹೇಳಿಕೆಗೆ ಕೇರಳ ಸಿಎಂ ತಿರುಗೇಟು
ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದ ಸ್ಥಳಗಳಲ್ಲಿ ಎರಡನೇ ದಿನವೂ ಕಣ್ಮರೆಯಾದ ಜನರ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳು ಪ್ರಾರಂಭವಾಗಿದ್ದು, ಬದುಕುಳಿದವರನ್ನು ಹೊರತೆಗೆಯಲು ರಕ್ಷಣಾ ತಂಡಗಳು ಮುಂದಾಗಿವೆ.
ಮಂಗಳವಾರ (ಜುಲೈ 30) ಮುಂಜಾವ ಭಾರೀ ಮಳೆಯ ನಡುವೆ ಕೇರಳದ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶವಾದ ವಯನಾಡ್ ಜಿಲ್ಲೆಯ ಮೆಪ್ಪಾಡಿಯಲ್ಲಿ ಬಳಿ ಭಾರೀ ಭೂ ಕುಸಿತದಿಂದ ಈವರೆಗೆ, 243 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ.
ನೂರಾರು ಮಂದಿ ಇನ್ನೂ ಅವಶೇಷಗಳಡಿ ಸಿಲುಕಿದ್ದು, ಸಾವು-ನೋವು ಸಂಭವಿಸುವ ಭೀತಿ ಎದುರಾಗಿದೆ.
ಸೇನೆ, ನೌಕಾಪಡೆ ಮತ್ತು NDRF ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಬದುಕುಳಿದವರನ್ನು ಹೊರತೆಗೆಯಲು ಪ್ರಯತ್ನ ನಡೆಸಿವೆ. ಸಂತ್ರಸ್ತರಿಗೆ ನೆರವು ನೀಡಲು ಅನೇಕರು ಮುಂದಾಗಿದ್ದಾರೆ.
ಸರ್ಕಾರದ ಮೂಲಗಳ ಪ್ರಕಾರ, ವಯನಾಡ್ ಜಿಲ್ಲೆಯ ಮೆಪ್ಪಾಡಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಭಾರೀ ಭೂಕುಸಿತಗಳು ಸಂಭವಿಸಿವೆ. ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಭೂಕುಸಿತದಿಂದ ಹಾಳಾಗಿವೆ ಹಾಗಾಗಿ ಸಂಪರ್ಕವೂ ಕಡಿದುಕೊಂಡಿವೆ.
ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಮೃತರ ದೇಹಗಳನ್ನು ಗುರುತಿಸಲು ಮತ್ತು ಮರಣೋತ್ತರ ಪರೀಕ್ಷೆಗಾಗಿ ವಿವಿಧ ಆಸ್ಪತ್ರೆಗಳ ಶವಾಗಾರಗಳಿಗೆ ಕೊಂಡೊಯ್ಯಲಾಗುತ್ತಿದೆ.
ಬದುಕುಳಿದವರನ್ನು ತ್ವರಿತವಾಗಿ ಸ್ಥಳಾಂತರಿಸಲು, ಸೂಲೂರಿನಿಂದ ಭಾರತೀಯ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ
ಹೆಚ್ಚಿನ ಲೈವ್ ಅಪ್‌ಡೇಟ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: https://thefederal.com/category/live/wayanad-landslides-live-rescue-ops-continue-on-second-day-toll-143-136259?infinitescroll=1
Live Updates
- 31 July 2024 10:45 AM IST
ಸಂತ್ರಸ್ತರ ಸಂಕಷ್ಟದ ಮಾತುಗಳು:
Kerala | Wayanad Landslide| Doctor Hasna says, " I have come to this relief camp because in the morning many people in the camp felt unwell. Most people are having issues like headaches, high BP, mainly because of stress. We are giving them medicines...people are in shock so for… pic.twitter.com/uYwgq05pKv
— ANI (@ANI) July 31, 2024Kerala | A victim of Wayanad landslide says, “ I stay alone at my home, at night I felt like my bed is shaking and heard loud noises…I tried to call my neighbours but nobody picked up the phone…I called my son who stays in Coimbatore and he asked me to climb on top of the house… pic.twitter.com/5fzaU1vven
— ANI (@ANI) July 31, 2024 - 31 July 2024 10:42 AM IST
ಕೇರಳದಲ್ಲಿ ಎರಡು ದಿನಗಳ ಶೋಕಾಚರಣೆ
#WATCH | Thiruvananthapuram, Kerala: National flag at half-mast at Kerala Legislative Assembly, as two-day mourning is being observed in the state after Wayanad landslide claimed 143 lives. pic.twitter.com/Bbj1CZsiIr
— ANI (@ANI) July 31, 2024 - 31 July 2024 10:42 AM IST
ವಯನಾಡಿಗೆ ಹೋಗುವ ದಾರಿಯಲ್ಲಿ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅಪಘಾತ
ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ವಯನಾಡ್‌ಗೆ ತೆರಳುವ ವೇಳೆ ಅವರ ವಾಹನವು ಮಲಪ್ಪುರಂ ಜಿಲ್ಲೆಯ ಮಂಜೇರಿ ಬಳಿ ಅಪಘಾತಕ್ಕಿಡಾಗಿದೆ. ಈ ವೇಳೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
- 31 July 2024 10:36 AM IST
ವಯನಾಡಿನ ಇಂದಿನ ದೃಶ್ಯಗಳು
#WATCH | Kerala: Relief and rescue operation underway in Wayanad's Chooralmala after a landslide broke out yesterday early morning claiming the lives of 143 people
— ANI (@ANI) July 31, 2024
(latest visuals) pic.twitter.com/Cin8rzwAzJ - 31 July 2024 10:28 AM IST
ದಿನ 2: ಆಪರೇಷನ್ ಮುಂಡಕ್ಕೈ ಪ್ರಾರಂಭವಾಗಲಿದೆ. 150 ಸದಸ್ಯರ ಪ್ರಬಲ ತಂಡವು ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಮುಂಡಕ್ಕೈ ಪ್ರವೇಶಿಸಲು ಸಿದ್ಧವಾಗಿದೆ. ಭೂಪ್ರದೇಶ ಮತ್ತು ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳನ್ನು ಬಳಸಬಹುದು ಎಂದು ಸ್ಥಳೀಯ ಮಾಧ್ಯಮ ವರದಿಗಳು ಹೇಳುತ್ತವೆ.
- 31 July 2024 10:26 AM IST
2ನೇ ದಿನದ ರಕ್ಷಣಾ ಕಾರ್ಯಕ್ಕೆ ಸಜ್ಜಾದ ಸೇನೆ
#WATCH | Kerala: Soldiers of the 122 Infantry Battalion of the Territorial Army preparing for the second day of rescue operations move out from their temporary shelter at local school to calamity-hit areas in Meppadi, Wayanad.
— ANI (@ANI) July 31, 2024
Source: PRO Defence Kochi pic.twitter.com/zf13Ejo1gI - 31 July 2024 10:25 AM IST
ಸಂತ್ರಸ್ತರು ಕುಸಿದ ಕಟ್ಟಡಗಳಲ್ಲಿ ಸಿಲುಕಿರಬಹುದು: ಎನ್‌ಡಿಆರ್‌ಎಫ್
#WATCH | Wayanad, Kerala: NDRF Commander Akhilesh Kumar says, "... We rescued injured victims from Mundakkai village yesterday. We fear victims might be trapped in collapsed buildings... Till 10 pm last night, we rescued 70 people, after which we had to stop because of bad… https://t.co/617pmF1hf7 pic.twitter.com/sJEwYOj5YS
— ANI (@ANI) July 31, 2024 - 31 July 2024 10:19 AM IST
2 ನೇ ದಿನದ ರಕ್ಷಣಾ ಕಾರ್ಯಾಚರಣೆಗಳು ಪ್ರಾರಂಭವಾಗಿವೆ..
#WATCH | Kerala | Wayanad Landslide | Search operation in the affected villages to rescue trapped people continues as the landslides claim 116 lives. pic.twitter.com/y5hAOSmfhy
— ANI (@ANI) July 31, 2024