ಭರ್ತಿಯಾಗುತ್ತಿರುವ ಕರ್ನಾಟಕ  ಜಲಾಶಯಗಳು; ಬರದಿಂದ ಕಂಗೆಟ್ಟ ರೈತರಿಗೆ ಆಶಾಕಿರಣ
x

ಭರ್ತಿಯಾಗುತ್ತಿರುವ ಕರ್ನಾಟಕ ಜಲಾಶಯಗಳು; ಬರದಿಂದ ಕಂಗೆಟ್ಟ ರೈತರಿಗೆ ಆಶಾಕಿರಣ


ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳುಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಕಳೆದ ವರ್ಷ ಜಲಾಶಯಗಳಲ್ಲಿ ಇದೇ ಅವಧಿಯಲ್ಲಿ ಶೇ. 20ರಷ್ಟು ನೀರಿತ್ತು, ಆದರೆ ಈಗ ಶೇ 51ರಷ್ಟು ನೀರಿದೆ. ಇದರಿಂದಾಗಿ 2023 -24 ರ ಅವಧಿಯ ತೀವ್ರ ಬರದಿಂದ ಕಂಗೆಟ್ಟಿದ್ದ ರೈತಾಪಿ ವರ್ಗ ಸಂತಸಗೊಂಡಿದೆ ಹಾಗೂ ಜಲಾಶಯಗಳು ಪೂರ್ತಿ ಭರ್ತಿಯಾದರೆ ಮುಂದಿನ ಜನವರಿ ವೇಳೆಗೆ ನೀರಾವರಿ ಸೌಲಭ್ಯ ದೊರಕುವ ಸಾಧ್ಯತೆ ಇರುವುದರ ಬಗ್ಗೆ ಹರ್ಷಗೊಂಡಿದ್ದಾರೆ. ಜತೆಗೆ ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರ ಸಿಗಬಹುದು ಎಂಬ ಆಶಾವಾದ ಹುಟ್ಟಿಕೊಂಡಿದೆ.

ಕರ್ನಾಟಕದ ಪ್ರಮುಖ 16 ಜಲಾಶಯಗಳ ಗರಿಷ್ಠ ಸಂಗ್ರಹ ಸಾಮರ್ಥ್ಯ 24.62 ಬಿಸಿಎಂ (ಶತಕೋಟಿ ಘನ ಮೀಟರ್‌ಗಳು). ಸದ್ಯ, ಒಟ್ಟು ಸಾಮರ್ಥ್ಯದ ಶೇ 51ರಷ್ಟು ಅಂದರೆ, 12.56 ಬಿಸಿಎಂನಷ್ಟು ನೀರು ಸಂಗ್ರಹ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಜಲಾಶಯಗಳಲ್ಲಿ 4.89 ಬಿಸಿಎಂನಷ್ಟು ನೀರು ಸಂಗ್ರಹ ಇತ್ತು. ಪ್ರಸ್ತುತ ಸಂಗ್ರಹವು 10 ವರ್ಷಗಳ ಸರಾಸರಿ (ಸಾಮಾನ್ಯ) 10.08 ಬಿಸಿಎಂಗಿಂತ ಹೆಚ್ಚು ಎಂದು ಜಲ ಆಯೋಗ ವಿಶ್ಲೇಷಿಸಿದೆ.

ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ತಮಿಳುನಾಡು ಈ ವರ್ಷವೂ ತಕರಾರು ಎತ್ತಿದೆ. ಪ್ರತಿದಿನ 1 ಟಿಎಂಸಿ ಅಡಿಯನ್ನು ನೀರನ್ನು ನೆರೆ ರಾಜ್ಯಕ್ಕೆ ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯು ಶಿಫಾರಸು ಮಾಡಿದೆ. ಒಂದು ವೇಳೆ ನೀರು ಬಿಡುಗಡೆ ಮಾಡದಿದ್ದರೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವುದಾಗಿ ಎಚ್ಚರಿಸಿದೆ. ಈ ನಡುವೆ, ತಮಿಳುನಾಡಿನ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ನೀರಿನ ಸಂಗ್ರಹ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 44ರಷ್ಟು ನೀರಿದ್ದರೆ, ಈ ವರ್ಷ ಶೇ 31ರಷ್ಟಿದೆ. ರಾಜ್ಯದ ಕೃಷ್ಣಾ ಹಾಗೂ ಕಾವೇರಿ ನದಿಗಳಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ ಎಂದು ಜಲ ಅಯೋಗ ತಿಳಿಸಿದೆ.

ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಸತತ ಮೂರನೇ ದಿನವಾದ ಶನಿವಾರ ಸಹ ಲಕ್ಷ ಕ್ಯುಸೆಕ್ ಮೀರಿದ್ದು, 65.11 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯ ಬಹಳ ಬೇಗ ತುಂಬುತ್ತಿರುವುರಿಂದ ಯಾವುದೇ ಕ್ಷಣದಲ್ಲಿ ಜಲಾಶಯದಿಂದ ನದಿಗೆ ನೀರು ಬಿಡುವ ಸಾಧ್ಯತೆ ಇದೆ. ಇದರಿಂದಾಗಿ ನದಿ ಪಾತ್ರದ ಜನರು ಎಚ್ಚರದಿಂದ ಇರಬೇಕು ಎಂದು ತುಂಗಭದ್ರಾ ಮಂಡಳಿ ಶನಿವಾರ ಬೆಳಿಗ್ಗೆ ಸಾರ್ವಜನಿಕ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದೆ.

ತುಂಗಭದ್ರಾ ಅಣೆಕಟ್ಟೆ1,633 ಅಡಿ ಎತ್ತರವಾಗಿದ್ದು, ಸದ್ಯ ನೀರಿನ ಮಟ್ಟ 1.621.32 ಅಡಿ ತಲುಪಿದೆ. ಆಣೆಕಟ್ಟೆ ಭರ್ತಿಯಾಗಲು ಇನ್ನು 12 ಅಡಿಯಷ್ಟೇ ಬಾಕಿ ಉಳಿದಿದೆ. ಜುಲೈ 1ರಂದು ಅಣೆಕಟ್ಟೆಯ ನೀರಿನ ಮಟ್ಟ 1.,584.15 ಅಡಿಯಷ್ಟಿತ್ತು. ಕೇವಲ 10 ದಿನಗಳಲ್ಲಿ ನೀರಿನ ಮಟ್ಟ 37 ಅಡಿಗಳಷ್ಟು ಹೆಚ್ಚಳವಾಗಿದೆ. ಜಲಾಶಯದ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ 105.78 ಟಿಎಂಸಿ ಅಡಿ. ಜುಲೈ 1ರಂದು ಜಲಾಶಯದಲ್ಲಿ 6.78 ಟಿಎಂಸಿ ಅಡಿಯಷ್ಟು ಮಾತ್ರ ನೀರಿತ್ತು. 20 ದಿನದಲ್ಲಿ ನೀರಿನ ಪ್ರಮಾಣ 10 ಪಟ್ಟು ಅಧಿಕವಾಗಿದೆ.

ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಿರುವ ಆಲಮಟ್ಟಿ ಜಲಾಶಯಕ್ಕೆ ಒಳಹರಿವು, ಹೊರಹರಿವಿನಲ್ಲೂ ಹೆಚ್ಚಳವಾಗಿದೆ. ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಮೊದಲ ಬಾರಿಗೆ 14 ಗೇಟ್​ಗಳು ಹಾಗೂ ವಿದ್ಯುದಾಗಾರದ ಮೂಲಕ 65 ಸಾವಿರ ಕ್ಯುಸೆಕ್​ ನೀರು ಹೊರಬಿಡಲಾಗುತ್ತದೆ. ಆಲಮಟ್ಟಿ ಜಲಾಶಯ ಮಾತ್ರವಲ್ಲದೇ ಬಹುತೇಕ ಜಲಾಶಯಗಳು ಭರ್ತಿಯಾಗುವ ಹಂತದಲ್ಲಿದೆ.

ಆಲಮಟ್ಟಿ ಜಲಾಶಯದ ಗರಿಷ್ಠ ನೀರಿನ ಮಟ್ಟ 519.60ಮೀ ಇದ್ದು, ಒಟ್ಟು ಸಾಮರ್ಥ್ಯ 123.08 ಟಿಎಂಸಿ. ಇಂದಿನ ನೀರಿನ ಮಟ್ಟ 97.42ಟಿಎಂಸಿ ಇದ್ದು, ಕಳೆದ ವರ್ಷ 28.76ಟಿಎಂಸಿ ಇತ್ತು. ನೀರಿನ ಒಳಹರಿವು 43478ಕ್ಯೂಸೆಕ್ಸ್‌ ಮತ್ತು ಹೊರಹರಿವು 65480ಕ್ಯೂಸೆಕ್ಸ್‌ ಇದೆ.

ಮಲಪ್ರಭಾ ಜಲಾಶಯದ ಗರಿಷ್ಠ ನೀರಿನ ಮಟ್ಟ 633.80ಮೀ ಇದ್ದು, ಒಟ್ಟು ಸಾಮರ್ಥ್ಯ 37.73 ಟಿಎಂಸಿ. ಇಂದಿನ ನೀರಿನ ಮಟ್ಟ 15.93ಟಿಎಂಸಿ ಇದ್ದು, ಕಳೆದ ವರ್ಷ 7.17ಟಿಎಂಸಿ ಇತ್ತು. ನೀರಿನ ಒಳಹರಿವು 10935ಕ್ಯೂಸೆಕ್ಸ್‌ ಮತ್ತು ಹೊರಹರಿವು 194 ಕ್ಯೂಸೆಕ್ಸ್‌ ಇದೆ.

ಕೆ.ಆರ್.ಎಸ್ ಜಲಾಶಯದ ಗರಿಷ್ಠ ನೀರಿನ ಮಟ್ಟ 38.04ಮೀ ಇದ್ದು, ಒಟ್ಟು ಸಾಮರ್ಥ್ಯ 49.45 ಟಿಎಂಸಿ. ಇಂದಿನ ನೀರಿನ ಮಟ್ಟ 38.90ಟಿಎಂಸಿ ಇದ್ದು, ಕಳೆದ ವರ್ಷ 15.88ಟಿಎಂಸಿ ಇತ್ತು. ನೀರಿನ ಒಳಹರಿವು 44617ಕ್ಯೂಸೆಕ್ಸ್‌ ಮತ್ತು ಹೊರಹರಿವು 2566 ಕ್ಯೂಸೆಕ್ಸ್‌ ಇದೆ.

ಲಿಂಗನಮಕ್ಕಿ ಜಲಾಶಯದ ಗರಿಷ್ಠ ನೀರಿನ ಮಟ್ಟ 554.44ಮೀ ಇದ್ದು, ಒಟ್ಟು ಸಾಮರ್ಥ್ಯ 151.75 ಟಿಎಂಸಿ. ಇಂದಿನ ನೀರಿನ ಮಟ್ಟ 76.44ಟಿಎಂಸಿ ಇದ್ದು, ಕಳೆದ ವರ್ಷ 26.59ಟಿಎಂಸಿ ಇತ್ತು. ನೀರಿನ ಒಳಹರಿವು 77496ಕ್ಯೂಸೆಕ್ಸ್‌ ಮತ್ತು ಹೊರಹರಿವು ಆರಂಭವಾಗಿಲ್ಲ.

ಕಬಿನಿ ಜಲಾಶಯದ ಗರಿಷ್ಠ ನೀರಿನ ಮಟ್ಟ 696.13ಮೀ ಇದ್ದು, ಒಟ್ಟು ಸಾಮರ್ಥ್ಯ 19.52 ಟಿಎಂಸಿ. ಇಂದಿನ ನೀರಿನ ಮಟ್ಟ 17.05ಟಿಎಂಸಿ ಇದ್ದು, ಕಳೆದ ವರ್ಷ 12.16ಟಿಎಂಸಿ ಇತ್ತು. ನೀರಿನ ಒಳಹರಿವು 49334ಕ್ಯೂಸೆಕ್ಸ್‌ ಮತ್ತು ಹೊರಹರಿವು 61200 ಕ್ಯೂಸೆಕ್ಸ್‌ ಇದೆ.

ಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ 657.73ಮೀ ಇದ್ದು, ಒಟ್ಟು ಸಾಮರ್ಥ್ಯ 71.54 ಟಿಎಂಸಿ. ಇಂದಿನ ನೀರಿನ ಮಟ್ಟ 41.01ಟಿಎಂಸಿ ಇದ್ದು, ಕಳೆದ ವರ್ಷ 27.99ಟಿಎಂಸಿ ಇತ್ತು. ನೀರಿನ ಒಳಹರಿವು 49555ಕ್ಯೂಸೆಕ್ಸ್‌ ಮತ್ತು ಹೊರಹರಿವು 181 ಕ್ಯೂಸೆಕ್ಸ್‌ ಇದೆ.

ಘಟಪ್ರಭಾ ಜಲಾಶಯದ ಗರಿಷ್ಠ ನೀರಿನ ಮಟ್ಟ 662.91ಮೀ ಇದ್ದು, ಒಟ್ಟು ಸಾಮರ್ಥ್ಯ 51.00 ಟಿಎಂಸಿ. ಇಂದಿನ ನೀರಿನ ಮಟ್ಟ 31.57ಟಿಎಂಸಿ ಇದ್ದು, ಕಳೆದ ವರ್ಷ 9.28ಟಿಎಂಸಿ ಇತ್ತು. ನೀರಿನ ಒಳಹರಿವು 21455ಕ್ಯೂಸೆಕ್ಸ್‌ ಮತ್ತು ಹೊರಹರಿವು 1680ಕ್ಯೂಸೆಕ್ಸ್‌ ಇದೆ.

ಹೇಮಾವತಿ ಜಲಾಶಯದ ಗರಿಷ್ಠ ನೀರಿನ ಮಟ್ಟ 890.58ಮೀ ಇದ್ದು, ಒಟ್ಟು ಸಾಮರ್ಥ್ಯ 37.10 ಟಿಎಂಸಿ. ಇಂದಿನ ನೀರಿನ ಮಟ್ಟ 31.63ಟಿಎಂಸಿ ಇದ್ದು, ಕಳೆದ ವರ್ಷ 16.47ಟಿಎಂಸಿ ಇತ್ತು. ನೀರಿನ ಒಳಹರಿವು 35871ಕ್ಯೂಸೆಕ್ಸ್‌ ಮತ್ತು ಹೊರಹರಿವು 1500ಕ್ಯೂಸೆಕ್ಸ್‌ ಇದೆ.

ವರಾಹಿ ಜಲಾಶಯದ ಗರಿಷ್ಠ ನೀರಿನ ಮಟ್ಟ 594.36ಮೀ ಇದ್ದು, ಒಟ್ಟು ಸಾಮರ್ಥ್ಯ 31.10 ಟಿಎಂಸಿ. ಇಂದಿನ ನೀರಿನ ಮಟ್ಟ 10.87ಟಿಎಂಸಿ ಇದ್ದು, ಕಳೆದ ವರ್ಷ 5.35ಟಿಎಂಸಿ ಇತ್ತು. ನೀರಿನ ಒಳಹರಿವು 65559ಕ್ಯೂಸೆಕ್ಸ್‌ ಮತ್ತು ಹೊರಹರಿವು ಇಲ್ಲ.

ಹಾರಂಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 871.38ಮೀ ಇದ್ದು, ಒಟ್ಟು ಸಾಮರ್ಥ್ಯ 8.50 ಟಿಎಂಸಿ. ಇಂದಿನ ನೀರಿನ ಮಟ್ಟ 6.82ಟಿಎಂಸಿ ಇದ್ದು, ಕಳೆದ ವರ್ಷ 5.34ಟಿಎಂಸಿ ಇತ್ತು. ನೀರಿನ ಒಳಹರಿವು 13188ಕ್ಯೂಸೆಕ್ಸ್‌ ಮತ್ತು ಹೊರಹರಿವು 10000ಕ್ಯೂಸೆಕ್ಸ್‌ ಇದೆ.

ಸೂಫಾ ಜಲಾಶಯದ ಗರಿಷ್ಠ ನೀರಿನ ಮಟ್ಟ 564.00ಮೀ ಇದ್ದು, ಒಟ್ಟು ಸಾಮರ್ಥ್ಯ 145.33 ಟಿಎಂಸಿ. ಇಂದಿನ ನೀರಿನ ಮಟ್ಟ 64.37ಟಿಎಂಸಿ ಇದ್ದು, ಕಳೆದ ವರ್ಷ 38.05ಟಿಎಂಸಿ ಇತ್ತು. ನೀರಿನ ಒಳಹರಿವು 47385ಕ್ಯೂಸೆಕ್ಸ್‌ ಮತ್ತು ಹೊರಹರಿವು ಇಲ್ಲ.

ನಾರಾಯಣಪುರ ಜಲಾಶಯದ ಗರಿಷ್ಠ ನೀರಿನ ಮಟ್ಟ 492.25ಮೀ ಇದ್ದು, ಒಟ್ಟು ಸಾಮರ್ಥ್ಯ 33.31 ಟಿಎಂಸಿ. ಇಂದಿನ ನೀರಿನ ಮಟ್ಟ 30.57ಟಿಎಂಸಿ ಇದ್ದು, ಕಳೆದ ವರ್ಷ 13.94ಟಿಎಂಸಿ ಇತ್ತು. ನೀರಿನ ಒಳಹರಿವು 65801ಕ್ಯೂಸೆಕ್ಸ್‌ ಮತ್ತು ಹೊರಹರಿವು 70931ಕ್ಯೂಸೆಕ್ಸ್‌ ಇದೆ.

ವಾಣಿವಿಲಾಸ ಸಾಗರದ ಗರಿಷ್ಠ ನೀರಿನ ಮಟ್ಟ 652.24ಮೀ ಇದ್ದು, ಒಟ್ಟು ಸಾಮರ್ಥ್ಯ 30.42 ಟಿಎಂಸಿ. ಇಂದಿನ ನೀರಿನ ಮಟ್ಟ 17.96ಟಿಎಂಸಿ ಇದ್ದು, ಕಳೆದ ವರ್ಷ 24.81ಟಿಎಂಸಿ ಇತ್ತು. ನೀರಿನ ಒಳಹರಿವು ಇಲ್ಲ ಮತ್ತು ಹೊರಹರಿವು 147ಕ್ಯೂಸೆಕ್ಸ್‌ ಇದೆ.

Read More
Next Story