BANGALORE WATER CRISIS | 15 ಲಕ್ಷ ಐಟಿ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌!
x
ಬೆಂಗಳೂರು (ಚಿತ್ರಕೃಪೆ: pexels)

BANGALORE WATER CRISIS | 15 ಲಕ್ಷ ಐಟಿ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌!

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಮುಂದುವರಿದಿದೆ. ಹೀಗಾಗಿ, ಐಟಿ ಕಂಪನಿಗಳ ಉದ್ಯೋಗಿಗಳಿಗೆ ಮತ್ತೆ ವರ್ಕ್‌ ಫ್ರಮ್‌ ಹೋಮ್‌ ನೀಡಬೇಕು ಎನ್ನುವ ಚರ್ಚೆ ಮುನ್ನೆಲೆಗೆ ಬಂದಿದೆ. ಬೆಂಗಳೂರು ನಿತ್ಯ ಅಂದಾಜು 500 ಮಿಲಿಯನ್ ಲೀಟರ್ ನೀರಿನ ಕೊರತೆ ಎದುರಿಸುತ್ತಿದೆ.


ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಮುಂದುವರಿದಿದೆ. ಹೀಗಾಗಿ, ಐಟಿ ಕಂಪನಿಗಳ ಉದ್ಯೋಗಿಗಳಿಗೆ ಮತ್ತೆ ವರ್ಕ್‌ ಫ್ರಮ್‌ ಹೋಮ್‌ ನೀಡಬೇಕು ಎನ್ನುವ ಚರ್ಚೆ ಮುನ್ನೆಲೆಗೆ ಬಂದಿದೆ. ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಲ್ಲೇ ಇದೆ. ಬೆಂಗಳೂರಿನಲ್ಲಿ ನಿತ್ಯ ಅಂದಾಜು 500 ಮಿಲಿಯನ್ ಲೀಟರ್ ನೀರಿನ ಕೊರತೆ ಎದುರಿಸುತ್ತಿದೆ. 2,600 ಎಂಎಲ್‌ಡಿ ನೀರಿನ ಅವಶ್ಯಕತೆ ಇದೆ.

ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಕಡಿಮೆ ಆಗುವ ವರೆಗೂ ಐಟಿ ಮತ್ತಿತರ ವಲಯದ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನೀಡಬೇಕು ಎನ್ನುವ ಬೇಡಿಕೆ ಕೇಳಿಬಂದಿದೆ. ಬೆಂಗಳೂರಿನಲ್ಲಿ ಅಂದಾಜು 15 ಲಕ್ಷ ಜನ ಐಟಿ ಉದ್ಯೋಗಿಗಳಿದ್ದು, ಅವರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ. ಕನಿಷ್ಠ ಒಂದು ವರ್ಷದ ಅವಧಿಗೆ ಮನೆಯಿಂದಲೇ ಕೆಲಸ ಮಾಡುವುದಕ್ಕೆ ಅವಕಾಶ ಕಲ್ಪಿಸಬೇಕು ಇದರಿಂದಾಗಿ ಬೆಂಗಳೂರಿನ ಸಂಪನ್ಮೂಲಗಳ ಮೇಲೆ ಸ್ವಲ್ಪ ಒತ್ತಡ ಕಡಿಮೆ ಆಗಬಹುದು ಎನ್ನುವ ಅಭಿಪ್ರಾಯವೂ ಸಾರ್ವಜನಿಕರಿಂದ ಕೇಳಿಬಂದಿದೆ.

ಬಹುತೇಕ ವರ್ಕ್ ಫ್ರಮ್ ಹೋಮ್ ಇದೆ

ಬೆಂಗಳೂರಿನಲ್ಲಿ ಬಹುತೇಕ ಕಂಪನಿಗಳು ವಾರದಲ್ಲಿ ಶೇ 70ರಷ್ಟು ವರ್ಕ್ ಫ್ರಮ್ ಹೋಮ್ ನೀಡುತ್ತಿವೆ. ಪ್ರತಿ ವಾರ ಸೋಮವಾರ ಮತ್ತು ಮಂಗಳವಾರ ಕಡ್ಡಾಯವಾಗಿ ಕಚೇರಿಗೆ ಬರಬೇಕು. ಇಲ್ಲವೇ ವಾರದಲ್ಲಿ ಒಂದು ದಿನ ಬರಬೇಕು ಎನ್ನುವ ನಿಯಮ ಇದೆ. ಒಂದೊಂದು ಕಂಪನಿಯೂ ಒಂದೊಂದು ನಿಯಮ ಅಳವಡಿಸಿಕೊಂಡಿದೆ ಎಂದು ಐಟಿ ಉದ್ಯೋಗಿ ಸುನೀಲ್ ಶಾನವಾಡ ತಿಳಿಸಿದರು.

ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, ಕೋವಿಡ್ ನಂತರದಲ್ಲಿ ವರ್ಕ್ ಫ್ರಮ್ ಹೋಮ್ ಆಯ್ಕೆ ಬಹುತೇಕ ಕಡೆ ಇದೆ. ಆದರೆ, ನೆಟ್ ವರ್ಕ್ ಸಮಸ್ಯೆ ಇರುವ ಕಡೆ ವರ್ಕ್ ಫ್ರಮ್ ಹೋಮ್ ಕೊಡಲು ಆಗುವುದಿಲ್ಲ. ಇದು ಪ್ರೊಡಕ್ಷನ್‌ನ (ಕೆಲಸದ) ಮೇಲೂ ಪರಿಣಾಮ ಬೀರುತ್ತದೆ. ಇನ್ನೂ ಕೆಲವೊಬ್ಬರು ವರ್ಕ್ ಫ್ರಮ್ ಹೋಮ್ ಅನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಅಭಿಪ್ರಾಯಪಟ್ಟರು.

ವರ್ಕ್ ಫ್ರಮ್ ಹೋಮ್‌ನಲ್ಲೂ ತಾರತಮ್ಯ ?

“ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಅಥವಾ ಯಾವುದೇ ಸಮಸ್ಯೆಗಳು ಬರಲಿ, ಐಟಿ ಕಂಪನಿಗಳಲ್ಲಿ ದೊಡ್ಡ ಹುದ್ದೆಯಲ್ಲಿ ಇರುವವರು ಅವರ ಅನುಕೂಲಕ್ಕೆ ಅನುಗುಣವಾಗಿ ರಜೆಗಳನ್ನು ಇಲ್ಲವೇ ವರ್ಕ್ ಫ್ರಮ್ ಹೋಮ್ ತೆಗೆದುಕೊಳ್ಳುತ್ತಾರೆ. ಆದರೆ, ಸಣ್ಣ ಹುದ್ದೆಯಲ್ಲಿ ಇರುವವರಿಗೆ ವರ್ಕ್ ಫ್ರಮ್ ಹೋಮ್‌ನಂತಹ ಆಯ್ಕೆಗಳು ಸಿಗುವುದಿಲ್ಲ" ಎಂದು ಹೆಸರು ಹೇಳಲು ಇಚ್ಛಿಸದ ಐಟಿ ಉದ್ಯೋಗಿಯೊಬ್ಬರು ಹೇಳಿದರು.

“ಬೆಂಗಳೂರಿನಲ್ಲಿ ನಾಲ್ಕೈದು ಜನ ಹುಡುಗರು ಅಥವಾ ಹುಡುಗಿಯರು ರೂಮ್ ಮಾಡಿಕೊಂಡು ಇಲ್ಲವೇ ಪಿಜಿಗಳಲ್ಲಿ ಇರುತ್ತಾರೆ. ಈ ರೀತಿ ಜೀವನ ಸಾಗಿಸುವವರಲ್ಲಿ ಬಹುತೇಕರು ಐಟಿಯಲ್ಲಿ ಸಣ್ಣ ಕೆಲಸದಲ್ಲಿ ಇರುತ್ತಾರೆ. ಆದರೆ, ಅವರ ಮೇಲೆಯೇ ಹೆಚ್ಚು ಪ್ರೊಡೆಕ್ಷನ್ (ಕೆಲಸ) ಅವಲಂಬಿತವಾಗಿರುವುದರಿಂದ ಅವರಿಗೆ ವರ್ಕ್‌ಫ್ರಮ್ ಹೋಮ್ ಸಿಗುವುದಿಲ್ಲ ” ಎಂದರು.

Read More
Next Story