
ಮತಗಳವು ಆರೋಪ |ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿದ ಕೇಂದ್ರ ಚುನಾವಣಾ ಆಯೋಗ
ಮಹದೇವಪುರ ವ್ಯಾಪ್ತಿಯಲ್ಲಿ ಷಾಕುನ್ ರಾಣಿ ಎರಡು ಕಡೆ ಮತ ಚಲಾವಣೆ ಮಾಡಿದ್ದಾರೆ. ಅಲ್ಲದೇ 100250 ಮತ ಕಳವು ನಡೆದಿದೆ ಎಂದು ದಾಖಲೆಗಳ ಸಮೇತ ರಾಹುಲ್ ಗಾಂಧಿ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿದ್ದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಮತಗಳವು ಕುರಿತು ಆರೋಪ ಮಾಡಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟನೆ ಕೋರಿ ನೋಟಿಸ್ ಜಾರಿ ಮಾಡಿದ್ದಾರೆ.
ಮಹದೇವಪುರ ವ್ಯಾಪ್ತಿಯಲ್ಲಿ ಷಾಕುನ್ ರಾಣಿ ಎರಡು ಕಡೆ ಮತ ಚಲಾವಣೆ ಮಾಡಿದ್ದಾರೆ. ಅಲ್ಲದೇ 100250 ಮತ ಕಳವು ನಡೆದಿದೆ ಎಂದು ದಾಖಲೆಗಳ ಸಮೇತ ರಾಹುಲ್ ಗಾಂಧಿ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿದ್ದರು.
ಬೆಂಗಳೂರಿನಲ್ಲಿಯೂ ಪ್ರತಿಭಟನಾ ಸಮಾವೇಶ ನಡೆಸಿ, ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ದಾಖಲೆ ಒದಗಿಸುವಂತೆ ಕೋರಿ ನೋಟಿಸ್
ಚುನಾವಣಾ ಅಕ್ರಮದ ಕುರಿತು ತಮ್ಮ ಆರೋಪಗಳಿಗೆ ಸೂಕ್ತ ದಾಖಲೆ ಒದಗಿಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಭಾನುವಾರ ರಾಹುಲ್ ಗಾಂಧಿ ಅವರಿಗೆ ನೋಟಿಸ್ ರವಾನಿಸಿದ್ದಾರೆ.
ಷಾಕುನ್ ರಾಣಿ ಒಂದೇ ಕಡೆ ಮತ ಚಲಾವಣೆ ಮಾಡಿರುವುದು ನಮ್ಮ ದಾಖಲೆಗಳಲ್ಲಿದೆ. ಎರಡು ಕಡೆ ಮತ ಚಲಾಯಿಸಿರುವ ಬಗ್ಗೆ ನೀವು ಮಾಡಿರುವ ಆರೋಪಕ್ಕೆ ದಾಖಲೆ ನೀಡುವಂತೆ ಮನವಿ ಮಾಡಿದೆ.
ಚುನಾವಣಾ ಆಯೋಗದ ಅಂಕಿ ಅಂಶಗಳ ಆಧಾರ ಉಲ್ಲೇಖಿಸಿ ಪತ್ರಿಕಾಗೋಷ್ಟಿಯಲ್ಲಿ ಆರೋಪ ಮಾಡಿದ್ದೀರಿ. ನಾವು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಷಾಕುನ್ ರಾಣಿ ಎಂಬುವರು ಒಂದೇ ಬಾರಿ ಮತ ಚಲಾಯಿಸಿದ್ದಾರೆ. ಅಲ್ಲದೇ ನೀವು ತೋರಿಸಿದ ಗುರುತು ಹಾಕಿರುವ ದಾಖಲೆ ಮತಗಟ್ಟೆ ಅಧಿಕಾರಿ ನೀಡಿಲ್ಲ ಎಂಬುದು ಬಯಲಾಗಿದೆ. ಹಾಗಾಗಿ ನೀವು ಎರಡು ಸಲ ಮತದಾನ ಮಾಡಿರುವ ಷಾಕುನ್ ರಾಣಿ ಅಥವಾ ಇನ್ನಾವುದೇ ವ್ಯಕ್ತಿಯ ದಾಖಲೆಗಳನ್ನು ಒದಗಿಸಿದರೆ ಸಮಗ್ರ ತನಿಖೆ ನಡೆಸುತ್ತೇವೆ ಎಂದು ಮುಖ್ಯ ಚುನಾವಣಾಧಿಕಾರಿ ನೋಟಿಸ್ ನಲ್ಲಿ ತಿಳಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗಕ್ಕೆ ದೂರು
ಮತಗಳವು ಆರೋಪಕ್ಕೆ ಸಂಬಂಧಿಸಿದಂತೆ ಇಂಡಿ ಒಕ್ಕೂಟದ ವತಿಯಿಂದ ಕೇಂದ್ರ ಚುನಾವಣಾ ಆಯೊಗಕ್ಕೆ ಇಂದು ದೂರು ಸಲ್ಲಿಸಲಾಗುವುದು.
ನವದೆಹಲಿಯ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ವರಿಷ್ಠರು ಸೇರಿ ಇಂಡಿ ಒಕ್ಕೂಟದ ನಾಯಕರು ತೆರಳಿ ಮತಗಳವು ಪ್ರಕರಣದ ಕುರಿತು ತನಿಖೆ ನಡೆಸುವಂತೆ ಕೋರಲಿದ್ದಾರೆ. ಅಲ್ಲದೇ ಆರೋಪ ಸಾಬೀತು ಪಡಿಸಲು ಅಗತ್ಯ ದಾಖಲೆ ಹಾಗೂ ವಿಡಿಯೊ ಒದಗಿಸುವಂತೆ ಕೋರಲಿದ್ದಾರೆ.