ನಿಯಮ ಉಲ್ಲಂಘನೆ: ಬೆಂಗಳೂರಿನಲ್ಲಿ 63 ಖಾಸಗಿ ಬಸ್‌ಗಳು ಜಪ್ತಿ
x

ನಿಯಮ ಉಲ್ಲಂಘನೆ: ಬೆಂಗಳೂರಿನಲ್ಲಿ 63 ಖಾಸಗಿ ಬಸ್‌ಗಳು ಜಪ್ತಿ


Click the Play button to hear this message in audio format

ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬೆಂಗಳೂರು ನಗರ ಮತ್ತು ಹೊರವಲಯದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 63 ಖಾಸಗಿ ಬಸ್‌ಗಳನ್ನು ಜಪ್ತಿ ಮಾಡಿದ್ದಾರೆ.

ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರ (ಪ್ರವರ್ತನ ದಕ್ಷಿಣ) ನೇತೃತ್ವದಲ್ಲಿ 12 ತಂಡಗಳು ಈ ಕಾರ್ಯಾಚರಣೆ ನಡೆಸಿವೆ. ನಗರದ ದೇವನಹಳ್ಳಿ, ಅತ್ತಿಬೆಲೆ ಸೇರಿದಂತೆ ಹಲವೆಡೆ ಬಸ್‌ಗಳನ್ನು ತಪಾಸಣೆಗೊಳಪಡಿಸಲಾಗಿದ್ದು, ಒಟ್ಟು 380ಕ್ಕೂ ಹೆಚ್ಚು ಬಸ್‌ಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸುರಕ್ಷತಾ ಕ್ರಮಗಳ ಪರಿಶೀಲನೆ

ತಪಾಸಣೆ ವೇಳೆ ಅಧಿಕಾರಿಗಳು ಬಸ್‌ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಅಗ್ನಿಶಾಮಕ ಸಾಧನ, ತುರ್ತು ನಿರ್ಗಮನ ದ್ವಾರ ಸೇರಿದಂತೆ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ, ಹಲವು ಬಸ್‌ಗಳು ತೆರಿಗೆ ಪಾವತಿಸದಿರುವುದು ಮತ್ತು ರಹದಾರಿ (ಪರ್ಮಿಟ್) ನಿಯಮಗಳನ್ನು ಉಲ್ಲಂಘಿಸಿರುವುದು ಪತ್ತೆಯಾಗಿದೆ.

ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ

ಬಸ್‌ಗಳನ್ನು ಜಪ್ತಿ ಮಾಡಿದ ಕಾರಣ ಅದರಲ್ಲಿ ಪ್ರಯಾಣಿಸುತ್ತಿದ್ದ ಜನರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಂಡರು. ಪ್ರಯಾಣಿಕರನ್ನು ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಹಾಗೂ ಇತರ ಖಾಸಗಿ ಬಸ್‌ಗಳ ಮೂಲಕ ಅವರ ಗಮ್ಯಸ್ಥಾನಗಳಿಗೆ ಕಳುಹಿಸಿಕೊಡಲಾಯಿತು. ಇದೇ ವೇಳೆ, ಬಸ್‌ಗಳಲ್ಲಿ ಅನಧಿಕೃತವಾಗಿ ಸರಕು ಸಾಗಾಣಿಕೆ ಮಾಡದಂತೆ ಮಾಲೀಕರು ಮತ್ತು ಚಾಲಕರಿಗೆ ಜಾಗೃತಿ ಮೂಡಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Read More
Next Story