ಸಚಿವ ರಾಜಣ್ಣ ವಜಾ: ಇದು ಕಾಂಗ್ರೆಸ್ ಆಂತರಿಕ ವಿಚಾರವಲ್ಲ ಎಂದ ವಿಜಯೇಂದ್ರ
x

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ 

ಸಚಿವ ರಾಜಣ್ಣ ವಜಾ: ಇದು ಕಾಂಗ್ರೆಸ್ ಆಂತರಿಕ ವಿಚಾರವಲ್ಲ ಎಂದ ವಿಜಯೇಂದ್ರ

ರಾಹುಲ್ ಗಾಂಧಿ ಅವರಿಗೆ ವಾಲ್ಮೀಕಿ ನಾಯಕ ಸಮುದಾಯದ ಮೇಲೆ ಪ್ರೀತಿ ಇದ್ದರೆ, ಸತ್ಯ ಹೇಳಿದ ರಾಜಣ್ಣ ಅವರನ್ನು ವಜಾ ಮಾಡಬಾರದಿತ್ತು ಎಂದು ವಿಜಯೇಂದ್ರ ಹೇಳಿದ್ದಾರೆ.


ಮುಖ್ಯಮಂತ್ರಿ ಪರಮಾಪ್ತ ರಾಜಣ್ಣ ಅವರನ್ನು ವಜಾ ಮಾಡಿದ ಪ್ರಕರಣವನ್ನು ಸದನದಲ್ಲಿ ಪ್ರಶ್ನಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ರಾಜಣ್ಣ ಅವರು ಯಾವ ಘೋರ ಅಪರಾಧ ಮಾಡಿದ್ದಾರೆ ಎಂಬುದನ್ನು ಜನ ಕೇಳುತ್ತಿದ್ದಾರೆ. ಇದು ಕಾಂಗ್ರೆಸ್ ಆಂತರಿಕ ವಿಚಾರವಲ್ಲ, ಸದನದಲ್ಲಿ ಚರ್ಚೆಯಾಗಬೇಕು” ಎಂದು ಒತ್ತಾಯಿಸಿದ್ದಾರೆ.

ರಾಹುಲ್ ಗಾಂಧಿ ಅವರಿಗೆ ವಾಲ್ಮೀಕಿ ನಾಯಕ ಸಮುದಾಯದ ಮೇಲೆ ಪ್ರೀತಿ ಇದ್ದರೆ, ಸತ್ಯ ಹೇಳಿದ ರಾಜಣ್ಣ ಅವರನ್ನು ವಜಾ ಮಾಡಬಾರದಿತ್ತು. ಬಿಜೆಪಿ ಅಕ್ರಮವಾಗಿ ಚುನಾವಣೆಯಲ್ಲಿ ಎಂದು ಕಾಂಗ್ರೆಸ್ ದೂರಿದೆ. ಆದರೆ, ಈ ಬಗ್ಗೆ ಆಯೋಗಕ್ಕೆ ದೂರು ನೀಡಲಿಲ್ಲ. ಇದರಲ್ಲಿ ಷಡ್ಯಂತ್ರ ಇದೆ” ಎಂದು ಹೇಳಿದ್ದಾರೆ.

ಧರ್ಮಸ್ಥಳ ಪ್ರಕರಣದ ಕುರಿತು ಮಾತನಾಡಿದ ಅವರು, “ಪ್ರಕರಣ ದಾರಿ ತಪ್ಪುತ್ತಿದೆ, ಹಲವು ಅನುಮಾನಗಳು ಎದ್ದಿವೆ. ಎಸ್‌ಡಿಪಿಐ ಮತ್ತು ಕಮ್ಯುನಿಸ್ಟ್ ಪಕ್ಷಗಳ ಪಾತ್ರದ ಬಗ್ಗೆ ಗುಮಾನಿ ಇದೆ. ಈ ಬಗ್ಗೆ ತನಿಖೆ ನಡೆಸಿ, ಸತ್ಯ ಬಹಿರಂಗಪಡಿಸಬೇಕು" ಎಂದು ಒತ್ತಾಯಿಸಿದ್ದಾರೆ.

“ಇಂದು ಸದನದಲ್ಲಿ ಈ ಎರಡೂ ವಿಷಯಗಳ ಕುರಿತು ಸರ್ಕಾರದಿಂದ ಸ್ಪಷ್ಟ ಉತ್ತರ ಕೇಳುತ್ತೇವೆ” ಎಂದು ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.

Read More
Next Story