ರಾಜಧಾನಿಯಲ್ಲಿ  ದಿಢೀರ್ ಮಳೆ;  ವಾಹನ ಸವಾರರು ಪರದಾಟ
x
ದಿಢೀರ್‌ ಮಳೆಗೆ ವಾಹನ ಸವಾರರು ಪರದಾಡುವಂತಾಯಿತು.

ರಾಜಧಾನಿಯಲ್ಲಿ ದಿಢೀರ್ ಮಳೆ; ವಾಹನ ಸವಾರರು ಪರದಾಟ

ವಿಲ್ಸ‌ನ್ ಗಾರ್ಡ್‌ನನ ಸಿದ್ದಯ್ಯ ರಸ್ತೆಯಲ್ಲಿ ಮಳೆ ನೀರು ನಿಂತ ಪರಿಣಾಮ‌ ಟ್ರಾಫಿಕ್‌ ಜಾಮ್ ಆಗಿದೆ. ಮತ್ತೊಂದೆಡೆ ನೀರು ನಿಂತ ಸ್ಥಳದಲ್ಲಿ ಗುಂಡಿ ಕಾಣದೇ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ.


ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರಿನಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ನಗರದ ಮೆಜೆಸ್ಟಿಕ್, ಕಾರ್ಪೊರೇಷನ್, ಕೋರಮಂಗಲ, ಆಡುಗೋಡಿ, ಮಡಿವಾಳ, ಬನ್ನೇರುಘಟ್ಟ ರಸ್ತೆ ಸೇರಿದಂತೆ ಹಲವೆಡೆ ಜೋರು ಮಳೆ ಸುರಿದಿದೆ. ದಿಢೀರ್ ಮಳೆಯಿಂದ ವಾಹನ ಸವಾರರು ಪರದಾಡಿದ್ದಾರೆ.

ನಗರದಲ್ಲಿ ಮುಂಜಾನೆಯಿಂದಲೂ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ಬಳಿಕ ದಿಢೀರ್‌ ಮಳೆಯಾಗಿದೆ. ಮಳೆಯಿಂದಾಗಿ ಮೆಜೆಸ್ಟಿಕ್, ಕೆಆರ್ ಸರ್ಕಲ್, ವಿಧಾನ ಸೌಧ ಸುತ್ತಮುತ್ತ ಬಾರೀ ಟ್ರಾಫಿಕ್ ಜಾಮ್​ ಉಂಟಾಗಿದೆ. ಜಾಮ್​ನಲ್ಲಿ ಸಿಲುಕಿ ದ್ವಿಚಕ್ರ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಇನ್ನು ಮಳೆಯಿಂದ ರಕ್ಷಣೆ ಪಡೆಯಲು ಜನರು ಫ್ಲೈಓವರ್ ಕೆಳಗೆ ನಿಂತುಕೊಂಡಿದ್ದರು. ಮಳೆ ಆರ್ಭಟಕ್ಕೆ ರಸ್ತೆಗಳು ಕೆರೆಯಂತಾಗಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಕೂಡ ಬಿರುಗಾಳಿ ಸಹಿತ ಮಳೆ ಅಬ್ಬರಿಸಿದೆ.

ವಿಲ್ಸ‌ನ್ ಗಾರ್ಡ್‌ನನ ಸಿದ್ದಯ್ಯ ರಸ್ತೆಯಲ್ಲಿ ಮಳೆ ನೀರು ನಿಂತ ಪರಿಣಾಮ‌ ಟ್ರಾಫಿಕ್‌ ಜಾಮ್ ಆಗಿದೆ. ಮತ್ತೊಂದೆಡೆ ನೀರು ನಿಂತ ಸ್ಥಳದಲ್ಲಿ ಗುಂಡಿ ಕಾಣದೇ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ. ಚರಂಡಿ ಕ್ಲೀನ್ ಮಾಡದ ಹಿನ್ನಲೆ ರಸ್ತೆ ಮೇಲೆ‌ ನೀರು ನಿಂತಕೊಂಡು ಸಾರ್ವಜನಿಕರು ಪರದಾಡುವಂತಾಯಿತು.

ಅ.1ರ ವರೆಗೂ ನಗರದಲ್ಲಿ ಹಗುರದಿಂದ ಸಾಧಾರಣ ಮಳೆ ಸಾಧ್ಯತೆ ಎಂದು ಬುಧವಾರ ರಾಜ್ಯ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿತ್ತು.ಇನ್ನು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೂಡ ಮಳೆ ಸುರಿಯುತ್ತಿದ್ದು, ಆ.30ರ ವರೆಗೆ ಆರೆಂಜ್​ ಅಲರ್ಟ್​ ಮತ್ತು ಕೊಡಗು, ಬೆಳಗಾವಿ ಜಿಲ್ಲೆಗಳಿಗೆ ಆ.30ರ ವರೆಗೆ ಯಲ್ಲೋ ಅಲರ್ಟ್​ ಘೋಷಿಣೆ ಮಾಡಲಾಗಿದೆ.

Read More
Next Story