ISRO Chief: ಇಸ್ರೋ ನೂತನ ಮುಖ್ಯಸ್ಥರಾಗಿ ವಿ ನಾರಾಯಣನ್ ನೇಮಕ
x
ವಿ ನಾರಾಯಣನ್

ISRO Chief: ಇಸ್ರೋ ನೂತನ ಮುಖ್ಯಸ್ಥರಾಗಿ ವಿ ನಾರಾಯಣನ್ ನೇಮಕ

ಹಾಲಿ ಇಸ್ರೋ ಅಧ್ಯಕ್ಷ ಅವರ ಸ್ಥಾನಕ್ಕೆ ವಿ.ನಾರಾಯಣನ್‌ ಅವರನ್ನು ನೇಮಕ ಮಾಡಿದ್ದು, ಜನವರಿ 14ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ನಾರಾಯಣನ್‌ ಅವರು ಹಿರಿಯ ವಿಜ್ಞಾನಿಯಾಗಿದ್ದು, ಪ್ರಸ್ತುತ ಕೇರಳದ ವಾಲಿಯಾಮಾಲಾದ ಲಿಕ್ವಿಡ್‌ ಪ್ರೊಪಲ್ಶನ್‌ ಸಿಸ್ಟಮ್ಸ್‌ ಸೆಂಟರ್‌ ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Click the Play button to hear this message in audio format

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹೊಸ ಅಧ್ಯಕ್ಷ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯನ್ನಾಗಿ ವಿ ನಾರಾಯಣನ್ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ.

ಹಾಲಿ ಇಸ್ರೋ ಅಧ್ಯಕ್ಷ ಅವರ ಸ್ಥಾನಕ್ಕೆ ವಿ.ನಾರಾಯಣನ್‌ ಅವರನ್ನು ನೇಮಕ ಮಾಡಿದ್ದು, ಜನವರಿ 14ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ನಾರಾಯಣನ್‌ ಅವರು ಹಿರಿಯ ವಿಜ್ಞಾನಿಯಾಗಿದ್ದು, ಪ್ರಸ್ತುತ ಕೇರಳದ ವಾಲಿಯಾಮಾಲಾದ ಲಿಕ್ವಿಡ್‌ ಪ್ರೊಪಲ್ಶನ್‌ ಸಿಸ್ಟಮ್ಸ್‌ ಸೆಂಟರ್‌ ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿ ನಾರಾಯಣನ್ ಅವರು ಎಸ್ ಸೋಮನಾಥ್ ಅವರ ಅಧಿಕಾರಾವಧಿ ಮುಗಿದ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಪ್ರಕಟಿಸಿದೆ.

ಪ್ರಸ್ತುತ ಇಸ್ರೋ ಮುಖ್ಯಸ್ಥರಾಗಿರುವ ಎಸ್ ಸೋಮನಾಥ್ ಅವರಿಂದ ವಿ ನಾರಾಯಣನ್ ಅವರು ಜನವರಿ 14 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕ್ಯಾಬಿನೆಟ್ ನೇಮಕಾತಿ ಸಮಿತಿಯು ಜನವರಿ 7, 2025 ರಂದು ಹೊರಡಿಸಿದ ಅಧಿಕೃತ ಆದೇಶದ ಪ್ರಕಾರ, ವಿ ನಾರಾಯಣನ್ ಅವರು ಎರಡು ವರ್ಷಗಳ ಅವಧಿಗೆ ಇಸ್ರೋ ಮುಖ್ಯಸ್ಥರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಸಂಪುಟದ ನೇಮಕಾತಿ ಸಮಿತಿಯ ಆದೇಶದ ಪ್ರಕಟಣೆಯಲ್ಲಿ ತಿಳಿಸಿದೆ.

Read More
Next Story