US tariff policy is unwise and unfair, Deve Gowda praises PM Modis China-Japan visit
x

ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ, ಪಿಎಂ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವಾದ್ಲಿಮಿರ್‌ ಪುಟಿನ್‌

ಬಹು-ಜೋಡಣೆ ನೀತಿ ಭಾರತಕ್ಕೆ ಲಾಭ; ಮೋದಿಯಜಪಾನ್-ಚೀನಾ ಪ್ರವಾಸಕ್ಕೆ ದೇವೇಗೌಡರ ಶ್ಲಾಘನೆ

ಎರಡೂ ದೇಶಗಳ ಪ್ರಧಾನಿ ಮೋದಿ ಭೇಟಿ ಅತ್ಯಂತ ಯಶಸ್ವಿಯಾಗಿದೆ. ನೀವು ಅನುಸರಿಸಿದ ಹೊಸ ಉಪಕ್ರಮಗಳ ಲಾಭವನ್ನು ಭಾರತವು ಪಡೆಯುತ್ತದೆ ಎಂದು ಭಾವಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ತಿಳಿಸಿದ್ದಾರೆ.


Click the Play button to hear this message in audio format

ಅಮೆರಿಕವು ಭಾರತದ ಉತ್ಪನ್ನಗಳ ಮೇಲೆ ಹೇರಿರುವ ಸುಂಕದ ಸವಾಲಿನ ನಡುವೆಯೇ, ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಜಪಾನ್ ಮತ್ತು ಚೀನಾಕ್ಕೆ ಕೈಗೊಂಡ ಯಶಸ್ವಿ ಪ್ರವಾಸವು ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನವನ್ನು ಬಲಪಡಿಸಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿರುವ ಅವರು, ಮೋದಿಯವರ 'ಬಹು-ಜೋಡಣೆ' (multi-alignment) ನೀತಿಯು ದೇಶಕ್ಕೆ ಭವಿಷ್ಯದಲ್ಲಿ ಸಮೃದ್ಧ ಲಾಭಾಂಶಗಳನ್ನು ತಂದುಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಅವಿವೇಕದ ಮತ್ತು ಅನ್ಯಾಯದ ಸುಂಕ ಯುದ್ಧದ ನಂತರ, ಪ್ರಧಾನಿ ಮೋದಿ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿರುವುದು ಸಮಾಧಾನ ತಂದಿದೆ ಎಂದು ದೇವೇಗೌಡರು ಹೇಳಿದ್ದಾರೆ. "ಧರ್ಮವು ನಮ್ಮ ಕಡೆಗಿದೆ. ನಮ್ಮ ದೇಶವು ಆರ್ಥಿಕವಾಗಿ ಮತ್ತು ಜನಸಂಖ್ಯೆಯಲ್ಲಿ ಜಗತ್ತಿನ ಬೇರಾವುದೇ ರಾಷ್ಟ್ರಕ್ಕಿಂತ ಅಗಾಧವಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾವು ಎತ್ತಿಹಿಡಿಯುತ್ತಿರುವುದರಿಂದ, ಅಮೆರಿಕವು ಬೇಗ ಅಥವಾ ತಡವಾಗಿ ನಮ್ಮ ಬಳಿಗೆ ಬರಲೇಬೇಕಾಗುತ್ತದೆ," ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮೂರು ದೇಶಗಳ ನಾಯಕರ ಸ್ನೇಹ: ಹೊಸ ಆರಂಭದ ಸಂಕೇತ

ಶಾಂಘೈ ಸಹಕಾರ ಸಂಘಟನೆಯ (SCO) ಶೃಂಗಸಭೆಯ ಸಂದರ್ಭದಲ್ಲಿ, ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಚಿತ್ರಗಳು ಜಾಗತಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗಿವೆ. ಇದನ್ನು ಉಲ್ಲೇಖಿಸಿರುವ ದೇವೇಗೌಡರು, "ಈ ಚಿತ್ರಗಳು ಕೇವಲ ರಾಷ್ಟ್ರಗಳ ಮುಖ್ಯಸ್ಥರ ನಡುವಿನ ಸ್ನೇಹವನ್ನು ಮೀರಿದವು. ಇದು ಜಾಗತಿಕ ಮಟ್ಟದಲ್ಲಿ ಹೊಸ ಜಾಗೃತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಭಾರತವನ್ನು ಜಾಗತಿಕ ಸಮೃದ್ಧಿ ಮತ್ತು ಶಾಂತಿಯ ಕೇಂದ್ರದಲ್ಲಿ ಇರಿಸುವ ಹೊಸ ವಿಶ್ವದ ಆರಂಭವನ್ನು ಸಂಕೇತಿಸುತ್ತದೆ," ಎಂದು ಬಣ್ಣಿಸಿದ್ದಾರೆ.

'ಬಹು-ಜೋಡಣೆ' ನೀತಿಗೆ ಪ್ರಶಂಸೆ

ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಪುಟಿನ್ ಅವರೊಂದಿಗೆ ಮೋದಿ ನಡೆಸಿದ ಮಾತುಕತೆಯನ್ನು ಶ್ಲಾಘಿಸಿರುವ ದೇವೇಗೌಡರು, "ನೀವು ಅನುಸರಿಸುತ್ತಿರುವ 'ಬಹು-ಜೋಡಣೆ' ನೀತಿಯು, ನಮ್ಮ ಹಿಂದಿನ 'ಅಲಿಪ್ತ ನೀತಿ'ಗೆ ಹೋಲಿಸಿದರೆ ಹೆಚ್ಚು ರಚನಾತ್ಮಕ ಮತ್ತು ಸಕಾರಾತ್ಮಕ ಸೂತ್ರೀಕರಣವಾಗಿದೆ. ಜಗತ್ತು ಈಗ ಅದರ ಪ್ರಾಮುಖ್ಯತೆಯನ್ನು ಅರಿಯಲು ಆರಂಭಿಸಿದೆ," ಎಂದಿದ್ದಾರೆ.

ಪ್ರಸ್ತುತ ಸವಾಲುಗಳನ್ನು ಅವಕಾಶವಾಗಿ ಪರಿವರ್ತಿಸಲು ಪ್ರಧಾನಿ ಮೋದಿ ದೃಢ ನಿಶ್ಚಯ ಮಾಡಿರುವುದನ್ನು ಶ್ಲಾಘಿಸಿರುವ ಅವರು, ದೇವರು ನಿಮಗೆ ಹೆಚ್ಚಿನ ಶಕ್ತಿ ಮತ್ತು ಉತ್ತಮ ಆರೋಗ್ಯವನ್ನು ನೀಡಲಿ ಎಂದು ಹಾರೈಸಿದ್ದಾರೆ.

Read More
Next Story