ಕೇಂದ್ರ ಸಚಿವರಾದ ಬಳಿಕ ಎಚ್‌ಡಿಕೆ ಮೊದಲ ಸಭೆ; ನೀಲನಕ್ಷೆ ತಯಾರಿಸಲು ಅಧಿಕಾರಿಗಳಿಗೆ ಸೂಚನೆ
x

ಕೇಂದ್ರ ಸಚಿವರಾದ ಬಳಿಕ ಎಚ್‌ಡಿಕೆ ಮೊದಲ ಸಭೆ; ನೀಲನಕ್ಷೆ ತಯಾರಿಸಲು ಅಧಿಕಾರಿಗಳಿಗೆ ಸೂಚನೆ


ದೇಶದ ಉದ್ದಗಲಕ್ಕೂ ಉತ್ಪಾದನೆ ಹೆಚ್ಚಿಸಿ ಹೆಚ್ಚೆಚ್ಚು ಉದ್ಯೋಗ ಕಲ್ಪಿಸುವುದು ತಮ್ಮ ಗುರಿಯಾಗಿದ್ದು, ಹದಿನೈದು ದಿನಗಳ ಒಳಗೆ ಈ ಕುರಿತಂತೆ ನೀಲನಕ್ಷೆ ಸಿದ್ಧಪಡಿಸಬೇಕೆಂದು ಅಧಿಕಾರಿಗಳಿಗೆ ಕೇಂದ್ರದ ನೂತನ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಸಭೆ ನಡೆಸಿದ ಅವರು, ಎಂದು ಅಧಿಕಾರಿಗಳಿಗೆ ತಿಳಿಸಿದ ಸಚಿವರು

ಹದಿನೈದು ದಿನಗಳ ಒಳಗಾಗಿ ನೀಲನಕ್ಷೆ ಸಿದ್ಧಪಡಿಸುವ ಬಗ್ಗೆ ಹೇಳಿದ ಸಚಿವರು ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆಗಳ ಬಗ್ಗೆ ಮಾಹಿತಿ ಪಡೆದರು. ಇಲಾಖೆಗಳ ಕುರಿತು ತಮ್ಮ ಕನಸುಗಳನ್ನು ಹಂಚಿಕೊಂಡ ಕುಮಾರಸ್ವಾಮಿ, ಕರ್ನಾಟಕದ ಸಿಎಂ ಆಗಿದ್ದಾಗ ಕೈಗಾರಿಕೆ ಇಲಾಖೆಯಲ್ಲಿ ತಂದ ಸುಧಾರಣೆಗಳ ಬಗ್ಗೆ ವಿವರಿಸಿದರಲ್ಲದೆ ನರೇಂದ್ರ ಮೋದಿ ಅವರ ಕನಸುಗಳನ್ನು ಈಡೇರಿಸುವ ಬದ್ಧತೆ ಬಗ್ಗೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಉಕ್ಕು ಸಚಿವಾಲಯದ ಕಾರ್ಯದರ್ಶಿ ನಾಗೇಂದ್ರನಾಥ ಸಿನ್ಹಾ, ಬೃಹತ್ ಕೈಗಾರಿಕೆ ಸಚಿವಾಲಯದ ಕಾರ್ಯದರ್ಶಿ ಕಮರನ್ ರಿಜ್ವಿ, ಕಾರ್ಯದರ್ಶಿ (ಸಾರ್ವಜನಿಕ ಉದ್ಯಮ) ಸಂದೀಪ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

ಕೆಜಿಎಫ್ ಗಣಿ ಪ್ರದೇಶದಲ್ಲಿ 12,000 ಎಕರೆ ಭೂಮಿಯನ್ನು ಕೈಗಾರಿಕೆ ಅಭಿವೃದ್ಧಿಗೆ ಬಳಸುವ ಬಗ್ಗೆ ಪ್ರಸ್ತಾಪಿಸಿದ ಕೋಲಾರ ಸಂಸದ ಮಲ್ಲೇಶ್ ಬಾಬು ಸಭೆಯಲ್ಲಿ ಪ್ರಾಸ್ತಾಪಿಸಿದರಲ್ಲದೆ ಯಾವುದೇ ಉದ್ದೇಶಕ್ಕೆ ಬಳಕೆಯಾಗದೆ ವ್ಯರ್ಥವಾಗಿ ಉಳಿದಿರುವ ಗಣಿ ಭೂಮಿ ಬಗ್ಗೆ ಗಮನಹಿರುಸವಂತೆ ಸಲಹೆ ನೀಡಿದರು.

Read More
Next Story