ಉಡುಪಿ ಅತ್ಯಾಚಾರ ಪ್ರಕರಣ | ಡ್ರಗ್ಸ್‌ ಕೇಸ್​ಗೆ ಟ್ವಿಸ್ಟ್: ಬಿಜೆಪಿ ಕಾರ್ಯಕರ್ತ, ಡ್ರಗ್ಸ್‌ ಪೆಡ್ಲರ್‌ ಅರೆಸ್ಟ್
x
ಬಂಧಿತ ಆರೋಪಿ ಅಭಯ್

ಉಡುಪಿ ಅತ್ಯಾಚಾರ ಪ್ರಕರಣ | ಡ್ರಗ್ಸ್‌ ಕೇಸ್​ಗೆ ಟ್ವಿಸ್ಟ್: ಬಿಜೆಪಿ ಕಾರ್ಯಕರ್ತ, ಡ್ರಗ್ಸ್‌ ಪೆಡ್ಲರ್‌ ಅರೆಸ್ಟ್

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಯುವತಿಯೊಬ್ಬಳಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸರು ಬಿಜೆಪಿ ಕಾರ್ಯಕರ್ತ ಹಾಗೂ ಹಿಂದೂ ಸಂಘಟನೆಗಳ ಪ್ರಮುಖನೊಬ್ಬನನ್ನು ಬಂಧಿಸಿದ್ದಾರೆ.


ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಯುವತಿಯೊಬ್ಬಳಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಠಾಣೆ ಪೊಲೀಸರು ಮೂರನೇ ಆರೋಪಿಯನ್ನು ಬಂಧಿಸಿದ್ದು, ಬಂಧಿತ ಅಭಯ್ ಬಿಜೆಪಿ ಕಾರ್ಯಕರ್ತ ಹಿಂದುತ್ವವಾದಿ ಸಂಘಟನೆಗಳಲ್ಲಿ ಪ್ರಮುಖನಾಗಿ ಗುರುತಿಸಿಕೊಂಡಿದ್ದ ಎನ್ನುವ ಮಾಹಿತಿ ಹೊರಬಿದ್ದಿದೆ.

ಉಡುಪಿ ಅತ್ಯಾಚಾರ ಕೇಸನ್ನು ಲವ್ ಜಿಹಾದ್​​ ಎಂದು ಆರೋಪಿಸಿದ್ದ ಬಿಜೆಪಿ, ಹಿಂದೂ ಸಂಘಟನೆಗಳಿಗೆ ಇದೀಗ ತಮ್ಮದೇ ಸಂಘಟನೆಯ ಪ್ರಮುಖನೇ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರ ಅತಿಥಿಯಾಗಿರುವುದು ಭಾರೀ ಮುಖಭಂಗ ತಂದಿದೆ. ಅಲ್ಲದೆ ಅಭಯ್ ಅತ್ಯಾಚಾರಿ ಅಲ್ತಾಫ್​ಗೆ ಡ್ರಗ್ಸ್ ತಂದು ಕೊಟ್ಟಿದ್ದ ಎಂದು ತಿಳಿದುಬಂದಿದೆ.

ಬಂಧಿತ ಆರೋಪಿ ಅಭಯ್ ಫೇಸ್​​ಬುಕ್​ನಲ್ಲಿ ಶಾಸಕ, ಮಾಜಿ ಸಚಿವ ಸುನೀಲ್​​ಕುಮಾರ್​​ ಫೋಟೋ ಹಾಕಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಬಿಜೆಪಿ ಮತ್ತು ಬಜರಂಗದಳ ಸಂಘಟನೆಗಳಲ್ಲಿ ಆ ಭಾಗದ ಪ್ರಮುಖನಾಗಿ ಗುರುತಿಸಿಕೊಂಡಿದ್ದಾನೆ.

ಇತ್ತೀಚೆಗೆ ಈ ಪ್ರಕರಣಕ್ಕೆ ಬಿಜೆಪಿ, ಹಿಂದೂ ಸಂಘಟನೆಗಳು ಲವ್ ಜಿಹಾದ್ ಹಣೆಪಟ್ಟಿ ಕಟ್ಟಿದ್ದರು. ಆದರೆ ಇದೀಗ ತಮ್ಮದೇ ಕಾರ್ಯಕರ್ತ ಈ ಪ್ರಕರಣದಲ್ಲಿ ಭಾಗಿಯಾಗಿರೋದು ಮುಖಭಂಗವಾಗಿದೆ. ಆರೋಪಿ ಅಭಯ್, ಪ್ರಮುಖ ಆರೋಪಿ ಅಲ್ತಾಫ್​ ಜೊತೆ ಆತ್ಮೀಯವಾಗಿದ್ದ. ಅತ್ಯಾಚಾರ ನಡೆದ ದಿನ ಅಲ್ತಾಫ್​ಗೆ ಡ್ರಗ್ಸ್​ ಒದಗಿಸಿದ್ದ. ಸದ್ಯ ಈಗ ಅಭಯ್ ಬಂಧನ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇನ್ನು ಕಳೆದ ತಿಂಗಳು ಬಜರಂಗದಳ ಡ್ರಗ್ಸ್​ ವಿರೋಧಿ ಅಭಿಯಾನ ನಡೆಸಿತ್ತು. ಈ ಡ್ರಗ್ಸ್​​ ವಿರೋಧಿ ಅಭಿಯಾನದಲ್ಲಿ ಅಭಯ್ ಸ್ವತಃ ನೇತೃತ್ವ ವಹಿಸಿ ಭಾಗಿಯಾಗಿದ್ದ. ಡ್ರಗ್ಸ್​ ಮಾರಾಟದ ವಿರುದ್ಧ ಸಿಡಿದೆದ್ದಿದ್ದ. ಇದೀಗ ಅದೇ ಅಭಯ್‌ ಡ್ರಗ್ಸ್‌ ಪೆಡ್ಲರ್‌ ಆಗಿ ಸಿಕ್ಕಿಬಿದ್ದಿರುವುದರಿಂದ ಜಾಲತಾಣದಲ್ಲಿ ಅಭಯ್ ಫೋಟೋ ವೈರಲ್ ಆಗುತ್ತಿದೆ. ಪ್ರಮುಖ ಆರೋಪಿ ಅಲ್ತಾಫ್​​​ಗೆ ಡ್ರಗ್ಸ್​ ಪೂರೈಸಿದ್ದ ಅಭಯ್​ನನ್ನು ಕಾರ್ಕಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

Read More
Next Story