Tungabhadra Dam Overhaul: 24th Crest Gate Cutting Underway; Stoplog Removal After Dec 30 Expected
x

ಸಾಂದರ್ಭಿಕ ಚಿತ್ರ

ತುಂಗಭದ್ರಾ ಜಲಾಶಯದ 24ನೇ ಕ್ರಸ್ಟ್‌ ಗೇಟ್ ತೆರವು; ಡಿ.30ರ ನಂತರ ಹೊಸ ಗೇಟ್ ಅಳವಡಿಕೆ

ಈಗಾಗಲೇ ಜಲಾಶಯದ 18 ಮತ್ತು 20ನೇ ಗೇಟ್‌ಗಳ ದುರಸ್ತಿ ಕಾರ್ಯದ ಭಾಗವಾಗಿ, ಆ ಗೇಟ್‌ಗಳ 10 ಅಡಿಯಷ್ಟು ಅಗಲದ ಭಾಗವನ್ನು ಕತ್ತರಿಸಿ ತೆಗೆಯಲಾಗಿದೆ. ಇದೀಗ 24ನೇ ಗೇಟ್‌ನ ಸರದಿ ಬಂದಿದ್ದು, ಹಂತ ಹಂತವಾಗಿ ತೆರವು ಕಾರ್ಯಾಚರಣೆ ನಡೆಯುತ್ತಿದೆ.


Click the Play button to hear this message in audio format

ತುಂಗಭದ್ರಾ ಅಣೆಕಟ್ಟೆಯ ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ಶುಕ್ರವಾರ 24ನೇ ಕ್ರಸ್ಟ್ ಗೇಟ್‌ನ ತೆರವು ಕಾರ್ಯಾಚರಣೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಗ್ಯಾಸ್ ಕಟರ್‌ಗಳ ಸಹಾಯದಿಂದ ಈ ಗೇಟ್‌ನ 10 ಅಡಿ ಭಾಗವನ್ನು ಕತ್ತರಿಸಿ ಪ್ರತ್ಯೇಕಿಸಲಾಗಿದೆ.

ಈಗಾಗಲೇ ಜಲಾಶಯದ 18 ಮತ್ತು 20ನೇ ಗೇಟ್‌ಗಳ ದುರಸ್ತಿ ಕಾರ್ಯದ ಭಾಗವಾಗಿ, ಆ ಗೇಟ್‌ಗಳ 10 ಅಡಿಯಷ್ಟು ಅಗಲದ ಭಾಗವನ್ನು ಕತ್ತರಿಸಿ ತೆಗೆಯಲಾಗಿದೆ. ಇದೀಗ 24ನೇ ಗೇಟ್‌ನ ಸರದಿ ಬಂದಿದ್ದು, ಹಂತ ಹಂತವಾಗಿ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ದಿನಕ್ಕೆ 1.8 ಟಿಎಂಸಿ ನೀರು ಖಾಲಿ

ಹೊಸ ಗೇಟ್ ಅಳವಡಿಕೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಜಲಾಶಯದ ನೀರಿನ ಮಟ್ಟವನ್ನು ತ್ವರಿತವಾಗಿ ತಗ್ಗಿಸಲಾಗುತ್ತಿದೆ. ಪ್ರಸ್ತುತ ಕಾಲುವೆಗಳಿಗೆ 10,972 ಕ್ಯೂಸೆಕ್ ಹಾಗೂ ನದಿಗೆ 5,900 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಈ ಮೂಲಕ ಜಲಾಶಯದಿಂದ ಪ್ರತಿದಿನ ಸರಾಸರಿ 1.8 ಟಿಎಂಸಿ ಅಡಿಯಷ್ಟು ನೀರು ಖಾಲಿಯಾಗುತ್ತಿದೆ.

ಡಿಸೆಂಬರ್ 30ರ ನಂತರ 'ಸ್ಟಾಪ್‌ಲಾಗ್' ತೆರವು?

ಸದ್ಯ ಜಲಾಶಯದಲ್ಲಿ 59.85 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಹಳೆ ಗೇಟ್‌ಗಳ ಜಾಗದಲ್ಲಿ ಹೊಸ ಗೇಟ್ ಅಳವಡಿಸಲು ನೀರಿನ ಸಂಗ್ರಹ ಮಟ್ಟ 43 ಟಿಎಂಸಿ ಅಡಿಗೆ ಕುಸಿಯುವುದು ಅನಿವಾರ್ಯ. ಸದ್ಯದ ನೀರಿನ ಹೊರಹರಿವಿನ ಪ್ರಮಾಣವನ್ನು ಗಮನಿಸಿದರೆ, ಡಿಸೆಂಬರ್ 30ರ ಸುಮಾರಿಗೆ ನೀರಿನ ಮಟ್ಟ ನಿಗದಿತ ಹಂತಕ್ಕೆ ತಲುಪುವ ನಿರೀಕ್ಷೆಯಿದೆ. ಆ ನಂತರವಷ್ಟೇ ಹೊಸ ಗೇಟ್ ಜೋಡಣೆ ಕಾರ್ಯ ಭರದಿಂದ ಸಾಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ

Read More
Next Story