Tungabhadra Dam Gate Break | 6 ದಿನಗಳಲ್ಲಿ 33 ಟಿಎಂಸಿ ನೀರು ಖಾಲಿ; ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯ ಆರಂಭ
x

Tungabhadra Dam Gate Break | 6 ದಿನಗಳಲ್ಲಿ 33 ಟಿಎಂಸಿ ನೀರು ಖಾಲಿ; ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯ ಆರಂಭ


ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟಗೇಟ್ ಕೊಚ್ಚಿಕೊಂಡು ಹೋಗಿದ್ದು, ಅಪಾರ ಪ್ರಮಾಣದ ಹೊರಹರಿವು ಹೆಚ್ಚುತ್ತಲೇ ಇದೆ. ಈ‌ ನಡುವೆ ತಾತ್ಕಾಲಿಕ ಗೇಟ್ ಅಳವಡಿಕೆ ಪ್ರಯತ್ನ ಶುಕ್ರವಾರ ಬೆಳಿಗ್ಗೆ 9ರಿಂದ ಮತ್ತೆ ಆರಂಭವಾಗಿದೆ.

ಜಿಂದಾಲ್‌ನಿಂದ ಇನ್ನೊಂದು ತಾತ್ಕಾಲಿಕ ಗೇಟ್‌ (ಪ್ಲಾನ್‌ ಬಿ) ಗುರುವಾರ ರಾತ್ರಿ 9ರ ಸುಮಾರಿಗೆ ಅಣೆಕಟ್ಟೆ ಪ್ರದೇಶಕ್ಕೆ ಬಂದಿದ್ದು. ಹೊಸಳ್ಳಿಯಿಂದ ಸಹ ಗೇಟ್ ತರಿಸಿಕೊಳ್ಳಲಾಗುತ್ತಿದೆ. ಮೊದಲಿಗೆ ಯಾವ ಗೇಟ್ ಅನ್ನು ನೀರಿಗೆ ಇಳಿಸುತ್ತಾರೆ. ಮತ್ತೆ ಕೊಂಡಿ ಸಮಸ್ಯೆ ಕಾಡಬಹುದೇ ಎಂಬ ಕುತೂಹಲ ಇದ್ದರೂ, ಬಹುತೇಕ ಶುಕ್ರವಾರ ಸಂಜೆಯೊಳಗೆ ಫಲಿತಾಂಶ ಲಬಿಸುವ ವಿಶ್ವಾಸದಲ್ಲಿ ಅಧಿಕಾರಿಗಳು ಇದ್ದಾರೆ.

ಸುರಕ್ಷತಾ ಕ್ರಮವಾಗಿ ಎಸ್‌ಡಿಆರ್‌ಎಫ್‌ ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ 80ಕ್ಕೂ ಅಧಿಕ ಕಾರ್ಮಿಕರು, ಎಂಜಿನಿಯರ್‌ಗಳು ಪಾಲ್ಗೊಂಡಿದ್ದು, ಒಂದು ವೇಳೆ ಆಯತಪ್ಪಿ ನದಿಗೆ ಯಾರಾದರು ಬಿದ್ದುಬಿಟ್ಟರೆ ಅವರನ್ನು ರಕ್ಷಿಸುವ ಸಲುವಾಗಿ ಐದಾರು ಮಂದಿಯ ಎಸ್‌ಡಿಆರ್‌ಎಫ್‌ ಸಿಬ್ಬಂದಿ ನದಿಯ ಕೆಳಭಾಗದಲ್ಲಿ ಸಜ್ಜಾಗಿ ನಿಂತಿದ್ದಾರೆ. ಸಂರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ದೋಣಿಗಳನ್ನು ಸಹ ತರಿಸಲಾಗುತ್ತಿದೆ.

ಸಾಧ್ಯವಾದಷ್ಟು ಮಟ್ಟಿಗೆ ನೀರು ಉಳಿಸುತ್ತಲೇ ಗೇಟ್ ಅಳವಡಿಸಬೇಕು ಎಂಬ ಪ್ರಯತ್ನದಲ್ಲಿ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ನಿರತರಾಗಿದ್ದು, ನೀರಿನ ಹೊರಹರಿವಿನ ಪ್ರಮಾಣವನ್ನು 1.10 ಲಕ್ಷ ಕ್ಯುಸೆಕ್‌ನಿಂದ 86,310 ಕ್ಯುಸೆಕ್‌ಗೆ ತಗ್ಗಿಸಿದ್ದಾರೆ. ಹೀಗಿದ್ದರೂ ಕಳದ ಆರು ದಿನಗಳಲ್ಲಿ 33 ಟಿಎಂಸಿ ಅಡಿಯಷ್ಟು ನೀರು ಜಲಾಶಯದಿಂದ ನದಿಗೆ ಹರಿದು ಹೋಗಿದೆ.

ಕ್ಷಣ ಕ್ಷಣವೂ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಇತ್ತೀಚೆಗಿನ ಬರಗಾಲದ ಸಮಯದಲ್ಲೂ ಕೂಡ ಜಲಾಶಯ ಖಾಲಿ ಆಗಿರಲಿಲ್ಲ. ಆದರೆ ಕ್ರಸ್ಟಗೇಟ್ ಕೊಚ್ಚಿಹೋದ ಪರಿಣಾಮ ಕಳೆದ ಹತ್ತು ವರ್ಷದಲ್ಲಿ ಜಲಾಶಯ ನೀರಿನ ಪ್ರಮಾಣ ಕನಿಷ್ಟ ಮಟ್ಟಕ್ಕೆ ಇಳಿದೆ.

ಅಣೆಕಟ್ಟೆಯ ಗರಿಷ್ಠ ನೀರಿನ ಮಟ್ಟ 1.633 ಅಡಿ ಆಗಿದ್ದು, ಸದ್ಯ 1.623.79ಕ್ಕೆ ಕುಸಿದಿದೆ. ಜಲಾಶಯದ ನೀರಿನ ಗರಿಷ್ಠ ಸಂಗ್ರಹ ಸಾಮರ್ಥ್ಯ 105.78 ಟಿಎಂಸಿ ಆಗಿದ್ದು, ಸದ್ಯ 72.60 ಟಿಎಂಸಿ ಅಡಿ ನೀರು ಇದೆ.

ಕಳೆದ ವರ್ಷ ಬರಗಾಲದಲ್ಲಿ ಕೂಡಾ 88 ಟಿಎಂಸಿ ನೀರು ಸಂಗ್ರಹವಾಗಿತ್ತು. ಕಳೆದ ಹತ್ತು ವರ್ಷದಲ್ಲಿ ಜಲಾಶಯದ ಸರಾಸರಿ 83 ಟಿಎಂಸಿ ನೀರಿದೆ. ಆ ಮೂಲಕ ಕಳೆದ ಆರು ದಿನದಲ್ಲಿ 33 ಟಿಎಂಸಿ ನೀರು ಖಾಲಿ ಮಾಡಲಾಗಿದೆ. ಈ ಬಾರಿ ಕೂಡಾ ಆಗಸ್ಟ್‌ನಲ್ಲಿಯೇ ಜಲಾಶಯ ಭರ್ತಿಯಾಗಿತ್ತು. ಆದರೆ ಕ್ರಸ್ಟಗೇಟ್ ಕೊಚ್ಚಿಕೊಂಡು ಹೋಗಿದ್ದರಿಂದ ನೀರಿನ ಪ್ರಮಾಣ ಕಡಿಮೆಯಾಗಿದೆ.

ಡ್ಯಾಂಗೆ ಶಾಶ್ವತ ಗೇಟ್ ಅಳವಡಿಕೆಯ ಬದಲು ಸ್ಟಾಪ್‌ಲ್ಯಾಗ್‌ ಗೇಟ್‌ ಅಳವಡಿಸಲಾಗುತ್ತೆ. ಒಟ್ಟು 20ಅಡಿ ಎತ್ತರದ ಗೇಟ್‌ನ್ನ ನಾಲ್ಕು ಭಾಗ ಮಾಡಲಾಗಿದೆ. ಒಂದೊಂದು ಭಾಗವು 4 ಅಡಿ ಎತ್ತರ, 64 ಅಡಿ ಅಗಲ ಇದ್ದು, ಪ್ರತಿ ಗೇಟ್‌ಗಳು ಬರೋಬ್ಬರಿ 13 ಟನ್‌ ತೂಕ ಹೊಂದಿವೆ. ಒಂದೊಂದು ಭಾಗದಿಂದಲೂ 25 ಟಿಎಂಸಿ ನೀರು ಸಂಗ್ರಹ ಆಗುತ್ತದೆ. ಸದ್ಯಕ್ಕೆ 3 ಭಾಗಗಳನ್ನು ಮಾತ್ರ ಅಳವಡಿಸಲಾಗುತ್ತಿದ್ದು, ಕೆಲಸ ಯಶಸ್ವಿ ಆಗುತ್ತಿದ್ದಂತೆ ಉಳಿದ 2 ಎಲೆಮೆಂಟ್ಸ್ ಫಿಕ್ಸ್‌ ಮಾಡಲಾಗುತ್ತದೆ.

Read More
Next Story