Trains Cancelled | ಎಂಟು ರೈಲುಗಳ ಸಂಚಾರ ವಾರ ಕಾಲ ಬಂದ್!
x

Trains Cancelled | ಎಂಟು ರೈಲುಗಳ ಸಂಚಾರ ವಾರ ಕಾಲ ಬಂದ್!


ವಿವಿಧ ಜಿಲ್ಲೆಗಳಿಗೆ ಬೆಂಗಳೂರು ನಗರದಿಂದ ಸಂಪರ್ಕ ಕಲ್ಪಿಸುವ ಕೆಲವು ರೈಲುಗಳ ಸಂಚಾರವನ್ನು ತಾಲ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ನಿಟ್ಟೂರು ಮತ್ತು ಸಂಪಿಗೆ ರಸ್ತೆ ರೈಲು ನಿಲ್ದಾಣಗಳ ನಡುವಿನ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಯಲ್ಲಿ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಸಂಚರಿಸುವ ಒಟ್ಟು ಎಂಟು ರೈಲುಗಳ ಸಂಚಾರವನ್ನು ರದ್ದು ಮಾಡಿ ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿದೆ.

ರೈಲ್ವೆ ಮೇಲ್ಸೇತುವೆಗಳಿಗೆ ಗರ್ಡರ್ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ಅ.17 ರಿಂದ 24ರವರೆಗೆ ಒಂದು ವಾರ ಕಾಲ ಆಯ್ದ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ. ಇನ್ನೂ ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳ ವೇಳೆಯನ್ನು ಬದಲಾಯಿಸಲಾಗಿದೆ.

ಸಂಪೂರ್ಣ ರದ್ದಾದ ರೈಲುಗಳು

ರೈಲು ಸಂಖ್ಯೆ: 07346- ತುಮಕೂರು-ಚಾಮರಾಜನಗರ ಪ್ಯಾಸೆಂಜರ್

ರೈಲು ಸಂಖ್ಯೆ: 07328- ಚಾಮರಾಜನಗರ-ಮೈಸೂರು ಪ್ಯಾಸೆಂಜರ್

ರೈಲು ಸಂಖ್ಯೆ: 16239- ಚಿಕ್ಕಮಗಳೂರು-ಯಶವಂತಪುರ ಎಕ್ಸ್ಪ್ರೆಸ್

ರೈಲು ಸಂಖ್ಯೆ: 16240- ಯಶವಂತಪುರ-ಚಿಕ್ಕಮಗಳೂರು ಎಕ್ಸ್ಪ್ರೆಸ್

ರೈಲು ಸಂಖ್ಯೆ: 06576- ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು

ರೈಲು ಸಂಖ್ಯೆ: 06575- ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು

ರೈಲು ಸಂಖ್ಯೆ: 16579- ಯಶವಂತಪುರ-ಶಿವಮೊಗ್ಗ ಟೌನ್

ರೈಲು ಸಂಖ್ಯೆ: 16580- ಶಿವಮೊಗ್ಗ ಟೌನ್-ಯಶವಂತಪುರ ರೈಲು ಸಂಚಾರ ಒಂದು ವಾರ ರದ್ದಾಗಲಿದೆ

ಭಾಗಶಃ ರದ್ದಾದ ರೈಲುಗಳು

ರೈಲು ಸಂಖ್ಯೆ: 06571- ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ರೈಲು ಹಿರೇಹಳ್ಳಿ-ತುಮಕೂರು ರೈಲು ನಿಲ್ದಾಣದ ನಡುವೆ ಸಂಚರಿಸುವುದಿಲ್ಲ.

ರೈಲು ಸಂಖ್ಯೆ: 06572- ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ರೈಲು ತುಮಕೂರು-ಹಿರೇಹಳ್ಳಿ ಮಧ್ಯೆ ಸಂಚರಿಸುವುದಿಲ್ಲ.

ರೈಲು ಸಂಖ್ಯೆ: 20652- ತಾಳಗುಪ್ಪ-ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲು ಅರಸೀಕೆರೆ-ಕೆಎಸ್ಆರ್ ಬೆಂಗಳೂರು ಮಧ್ಯೆ ಸಂಚರಿಸುವುದಿಲ್ಲ.

ರೈಲು ಸಂಖ್ಯೆ: 12725- ಕೆಎಸ್ಆರ್ ಬೆಂಗಳೂರು-ಧಾರವಾಡ ಎಕ್ಸ್ಪ್ರೆಸ್ ರೈಲು ಅರಸೀಕೆರೆ-ಕೆಎಸ್ಆರ್ ಬೆಂಗಳೂರು ಮಧ್ಯೆ ಸಂಚರಿಸುವುದಿಲ್ಲ.

ರೈಲು ಸಂಖ್ಯೆ: 12726- ಧಾರವಾಡ-ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲು ಅರಸೀಕೆರೆ-ಕೆಎಸ್ಆರ್ ಬೆಂಗಳೂರು ಮಧ್ಯೆ ಸಂಚರಿಸುವುದಿಲ್ಲ.

ರೈಲುಗಳ ಮಾರ್ಗ ಬದಲಾವಣೆ

ರೈಲು ಸಂಖ್ಯೆ: 17310- ವಾಸ್ಕೋ ಡ ಗಾಮಾ-ಯಶವಂತಪುರ ಎಕ್ಸ್ಪ್ರೆಸ್ ರೈಲು ಅರಸೀಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮಾರ್ಗವಾಗಿ ಸಂಚರಿಸುತ್ತದೆ.

ರೈಲು ಸಂಖ್ಯೆ: 22687- ಮೈಸೂರು-ವಾರಣಾಸಿ ಎಕ್ಸ್ಪ್ರೆಸ್ ರೈಲು ಯಶವಂತಪುರ, ನೆಲಮಂಗಲ ಹಾಸನ, ಅರಸೀಕೆರೆ ಮಾರ್ಗವಾಗಿ ಸಂಚರಿಸುತ್ತದೆ.

ರೈಲು ಸಂಖ್ಯೆ: 82653- ಯಶವಂತಪುರ-ಜೈಪುರ ಎಕ್ಸ್ಪ್ರೆಸ್ ರೈಲು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗವಾಗಿ ಸಂಚರಿಸುತ್ತದೆ.

ರೈಲು ಸಂಖ್ಯೆ: 19668- ಮೈಸೂರು-ಉದಯಪುರ ಸಿಟಿ ಎಕ್ಸ್ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು, ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ, ದಾವಣಗೆರೆ ಮಾರ್ಗವಾಗಿ ಸಂಚರಿಸುತ್ತದೆ.

ರೈಲು ಸಂಖ್ಯೆ: 17326- ಮೈಸೂರು-ಬೆಳಗಾವಿ ಎಕ್ಸ್ಪ್ರೆಸ್ ರೈಲು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗವಾಗಿ ಸಂಚರಿಸುತ್ತದೆ.

ರೈಲುಗಳ ವೇಳೆ ಬದಲಾವಣೆ

ರೈಲು ಸಂಖ್ಯೆ: 20651- ಕೆಎಸ್ಆರ್ ಬೆಂಗಳೂರು-ತಾಳಗುಪ್ಪ ಎಕ್ಸ್ಪ್ರೆಸ್ ರೈಲನ್ನು 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ರೈಲು ಸಂಖ್ಯೆ: 17325- ಬೆಳಗಾವಿ-ಮೈಸೂರು ಎಕ್ಸ್ಪ್ರೆಸ್ ರೈಲನ್ನು 55 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ರೈಲು ಸಂಖ್ಯೆ: 07345- ಚಾಮರಾಜನಗರ-ತುಮಕೂರು ಪ್ಯಾಸೆಂಜರ್ ರೈಲನ್ನು 120 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ರೈಲು ಸಂಖ್ಯೆ: 17309- ಯಶವಂತಪುರ – ವಾಸ್ಕೋ ಡ ಗಾಮಾ ಎಕ್ಸ್ಪ್ರೆಸ್ ರೈಲನ್ನು 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ರೈಲು ಸಂಖ್ಯೆ: 06513- ತುಮಕೂರು-ಶಿವಮೊಗ್ಗ ಟೌನ್ ರೈಲನ್ನು 85 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

Read More
Next Story