
ರೈಲ್ವೆ ಇಂಜಿನ್‌ನಿಂದ ಬೇರ್ಪಟ್ಟಿರುವ ಬೋಗಿಗಳು
ತುಂಗಾ ನದಿ ಸೇತುವೆ ಮೇಲೆ ಚಲಿಸುತ್ತಿರುವಾಗಲೇ ಬೇರ್ಪಟ್ಟ ರೈಲು ಎಂಜಿನ್, ಬೋಗಿಗಳು
ರೈಲ್ವೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೋಗಿ ಜೋಡಣೆ ಮಾಡಿ ಸಮಸ್ಯೆ ಬಗೆಹರಿಸಿದ್ದು, ಘಟನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಳಗುಪ್ಪದಿಂದ ಮೈಸೂರಿಗೆ ಹೊರಟಿದ್ದ ರೈಲು ಚಲಿಸುವಾಗಲೇ ಎಂಜಿನ್ ಮತ್ತು ಬೋಗಿ ಸಂಪರ್ಕ ಕಳೆದುಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ನಗರದೊಳಗೆ ಇರುವ ತುಂಗಾ ಸೇತುವೆ ಮೇಲೆ ಬುಧವಾರ ಸಂಜೆ 5 ಗಂಟೆಗೆ ಘಟನೆ ನಡೆದಿದ್ದು, ಎಂಜಿನ್ ಇಲ್ಲದೇ ಬೋಗಿಗಳು ಚಲಿಸಿವೆ. ಇದರಿಂದ ರೈಲಿನಲ್ಲಿದ್ದ ಪ್ರಯಾಣಿಕರು ಆತಂಕದಿಂದ ಗಾಬರಿಗೊಂಡಿದ್ದಾರೆ.
ಮೈಸೂರು ಕಡೆಗೆ ಹೊರಟಿದ್ದ ರೈಲು ತುಂಗಾ ನದಿಯ ರೈಲ್ವೆ ಸೇತುವೆ ಬಳಿ ಬಂದಾಗ ಎಂಜಿನ್‌ನಿಂದ 8 ನೇ ಬೋಗಿ ಕಳಚಿಕೊಂಡಿತ್ತು. ತಕ್ಷಣವೇ ರೈಲ್ವೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೋಗಿ ಜೋಡಣೆ ಮಾಡಿ ಸಮಸ್ಯೆ ಬಗೆಹರಿಸಿದ್ದಾರೆ. ಘಟನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story