Traffic Fine Rebate: ₹7 Crore Collected in Just Two Days
x
ಸಾಂದರ್ಭಿಕ ಚಿತ್ರ

ಟ್ರಾಫಿಕ್ ಫೈನ್ ರಿಯಾಯಿತಿ: ಎರಡೇ ದಿನದಲ್ಲಿ 7 ಕೋಟಿ ರೂಪಾಯಿ ದಂಡ ಸಂಗ್ರಹ

ರಾಜ್ಯ ಸರ್ಕಾರವು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ ಘೋಷಿಸಿದ ಬೆನ್ನಲ್ಲೇ, ವಾಹನ ಸವಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.


ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ರಾಜ್ಯ ಸರ್ಕಾರ ಶೇ.50 ರಿಯಾಯಿತಿ ಘೋಷಿಸಿದ ಹಿನ್ನೆಲೆಯಲ್ಲಿ ವಾಹನ ಸವಾರರು ಸದ್ಬಳಕೆ ಮಾಡುತ್ತಿದ್ದು ಕೇವಲ ಎರಡು ದಿನದಲ್ಲೇ 7 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ.

ಈ ಹಿಂದೆ 2023ರಲ್ಲಿಯೂ ಸರ್ಕಾರವು ಇದೇ ಮಾದರಿಯ ರಿಯಾಯಿತಿ ಯೋಜನೆಯನ್ನು ಮೂರು ಬಾರಿ ಜಾರಿಗೆ ತಂದಿತ್ತು. ಆ ಸಂದರ್ಭದಲ್ಲಿಯೂ ಕೋಟ್ಯಂತರ ರೂಪಾಯಿ ದಂಡ ಸಂಗ್ರಹವಾಗಿತ್ತು. ಈ ಅಭೂತಪೂರ್ವ ಸ್ಪಂದನೆಯಿಂದ ಉತ್ತೇಜಿತರಾಗಿರುವ ಸಾರಿಗೆ ಇಲಾಖೆಯು, ಯೋಜನೆ ಮುಗಿಯುವಷ್ಟರಲ್ಲಿ (ಸೆಪ್ಟೆಂಬರ್ 12) ಸುಮಾರು 100 ಕೋಟಿ ರೂಪಾಯಿ ಸಂಗ್ರಹಿಸುವ ನಿರೀಕ್ಷೆಯಲ್ಲಿದೆ.

ಆಗಸ್ಟ್ 23ರಂದು ಯೋಜನೆ ಆರಂಭವಾದ ಮೊದಲ ದಿನವೇ 1.48 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿದ್ದು, ಬರೋಬ್ಬರಿ 4.18 ಕೋಟಿ ರೂಪಾಯಿ ದಂಡ ಸಂಗ್ರಹವಾಗಿತ್ತು. ಎರಡನೇ ದಿನವಾದ ಶನಿವಾರವೂ ಈ ಸ್ಪಂದನೆ ಮುಂದುವರಿದಿದ್ದು, ಸುಮಾರು 3 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ. ಈ ಮೂಲಕ, ಎರಡೇ ದಿನಗಳಲ್ಲಿ ಒಟ್ಟು ಸಂಗ್ರಹವಾದ ಮೊತ್ತ 7 ಕೋಟಿ ರೂಪಾಯಿ ದಾಟಿದೆ.

ಈ ಹಿಂದೆ 2023ರಲ್ಲಿಯೂ ಸರ್ಕಾರವು ಇದೇ ಮಾದರಿಯ ರಿಯಾಯಿತಿ ಯೋಜನೆಯನ್ನು ಮೂರು ಬಾರಿ ಜಾರಿಗೆ ತಂದಿತ್ತು. ಆ ಸಂದರ್ಭದಲ್ಲಿಯೂ ಕೋಟ್ಯಂತರ ರೂಪಾಯಿ ದಂಡ ಸಂಗ್ರಹವಾಗಿತ್ತು. ಅದೇ ಯಶಸ್ಸಿನ ಹಿನ್ನೆಲೆಯಲ್ಲಿ, ಬಾಕಿ ಉಳಿದಿರುವ ಇ-ಚಲನ್ ಪ್ರಕರಣಗಳನ್ನು ಇತ್ಯರ್ಥಪಡಿಸಲು ಈ ಬಾರಿಯೂ ಆಗಸ್ಟ್ 23 ರಿಂದ ಸೆಪ್ಟೆಂಬರ್ 12ರವರೆಗೆ ರಿಯಾಯಿತಿ ಅವಕಾಶ ಕಲ್ಪಿಸಲಾಗಿದೆ. ವಾಹನ ಸವಾರರು ತಮ್ಮ ಬಾಕಿ ದಂಡವನ್ನು ಕರ್ನಾಟಕ ಒನ್, ಬೆಂಗಳೂರು ಒನ್, ಪೊಲೀಸ್ ಇಲಾಖೆಯ ಆ್ಯಪ್‌ಗಳು ಅಥವಾ ಹತ್ತಿರದ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಪಾವತಿಸಬಹುದಾಗಿದೆ.

Read More
Next Story