
ನಟ ಫಿಶ್ ವೆಂಕಟ್ ನಿಧನ
ತೆಲುಗು ಚಿತ್ರರಂಗದ ಹಾಸ್ಯ ನಟ ಫಿಶ್ ವೆಂಕಟ್ ಇನ್ನಿಲ್ಲ
ವೆಂಕಟ್ ಅವರ ಚಿಕಿತ್ಸೆಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್, ನಟ ವಿಶ್ವಕ್ ಸೇನ್ ಮತ್ತು ತೆಲಂಗಾಣ ಸರ್ಕಾರದ ಸಚಿವರು ಸೇರಿ ಹಲವರು ಆರ್ಥಿಕ ಸಹಾಯ ಮಾಡಿದ್ದರು.
ತೆಲುಗು ಸಿನಿಮಾಗಳಲ್ಲಿ ಕಾಮಿಡಿ ಹಾಗೂ ವಿಲನ್ ಪಾತ್ರಗಳಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದಿದ್ದ ಫಿಶ್ ವೆಂಕಟ್ ಖ್ಯಾತಿಯ ನಟ ಮಂಗಳಂಪಲ್ಲಿ ವೆಂಕಟೇಶ್ ಅವರು ಬಹು ಅಂಗಾಗ ವೈಫಲ್ಯದಿಂದ ನಿಧನರಾಗಿದ್ದಾರೆ.
ಕಿಡ್ನಿ ಮತ್ತು ಲಿವರ್ ವೈಫಲ್ಯದಿಂದ ವೆಂಕಟ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಕಟ್ ಅವರನ್ನು ಕಸಿ ಸರ್ಜರಿಗೆ ಆರ್ಥಿಕ ನೆರವು ಕೋರಿದ್ದರು. ಟಾಲಿವುಡ್‌ನ ಕೆಲ ನಟರು ಇವರ ಚಿಕಿತ್ಸೆ ಹಣಕಾಸಿನ ನೆರವು ನೀಡಿದ್ದರು. ಆದರೂ ಚಿಕಿತ್ಸೆ ಫಲಿಸದೆ ಅವರು 53ನೇ ವಯಸ್ಸಿನಲ್ಲಿ ನಿಧನರಾದರು.
ಇವರು ಹೆಚ್ಚಾಗಿ ಕಾಮಿಡಿ ಹಾಗೂ ವಿಲನ್ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು. ಚಿತ್ರರಂಗದಲ್ಲಿ ಇವರು ಫಿಶ್ ವೆಂಕಟ್ ಎಂದೇ ಕರೆಯಲ್ಪಡುತ್ತಿದ್ದರು. ವೆಂಕಟ್ ಭಾರತದ ಆಂಧ್ರಪ್ರದೇಶದ ಮಚಲಿಪಟ್ಟಣದಲ್ಲಿ ಜನಿಸಿದರು. ಅವರು ಮೀನುಗಾರರನ್ನು ನೆನಪಿಸುವ ತೆಲಂಗಾಣ ಉಪಭಾಷೆಯನ್ನು ಹೆಚ್ಚಾಗಿ ಬಳಸುತ್ತಿದ್ದರು. ಹೀಗಾಗಿ ಅವರಿಗೆ ಫಿಶ್ ವೆಂಕಟ್ ಎಂಬ ಹೆಸರು ಬಂದಿತ್ತು.
ನಟ ಶ್ರೀಹರಿ ಮೂಲಕ ತೆಲುಗು ಸಿನಮಾ ರಂಗಕ್ಕೆ ಕಾಲಿಟ್ಟ ಫಿಶ್ ವೆಂಕಟ್, 20 ವರ್ಷಕ್ಕೂ ಅಧಿಕ ಕಾಲ ಹಲವಾರು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದರು. ಇವರ ನಿಧನವು ತೆಲುಗು ಚಿತ್ರರಂಗ ಮತ್ತು ಅಭಿಮಾನಿಗಳಿಗೆ ದೊಡ್ಡ ನಷ್ಟವಾಗಿದ್ದು, ತಮ್ಮ ಹಾಸ್ಯದ ಮೂಲಕ ಪ್ರೇಕ್ಷಕರಿಗೆ ನಗು ಮೂಡಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮತ್ತು ಚಿತ್ರರಂಗದ ಸಹೋದ್ಯೋಗಿಗಳು ಸಂತಾಪ ಸೂಚಿಸುತ್ತಿದ್ದಾರೆ.
ವೆಂಕಟ್ ಅವರ ಚಿಕಿತ್ಸೆಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್, ನಟ ವಿಶ್ವಕ್ ಸೇನ್ ಮತ್ತು ತೆಲಂಗಾಣ ಸರ್ಕಾರದ ಸಚಿವರು ಸೇರಿ ಹಲವರು ಆರ್ಥಿಕ ಸಹಾಯ ಮಾಡಿದ್ದರು. ಆದರೆ ಸಮಯಕ್ಕೆ ಸರಿಯಾಗಿ ಯಾವುದೇ ಮೂತ್ರಪಿಂಡ ದಾನಿ ಸಿಗದ ಕಾರಣ ಮೃತಪಟ್ಟಿದ್ದಾರೆ.
ಫಿಶ್ ವೆಂಕಟ್ ಅವರು ಬನ್ನಿ, ದಿಲ್, ಅತ್ತಾರಿಂಟಿಕಿ ದಾರೇದಿ , ಗಬ್ಬರ್ ಸಿಂಗ್, ಡಿಜೆ ಟಿಲ್ಲು ಮತ್ತು ಇತರ ಹಿಟ್ ಚಿತ್ರಗಳಲ್ಲಿ ಖಳನಾಯಕನ ಜೊತೆಗೆ ಪಾತ್ರ ಕಲಾವಿದ ಮತ್ತು ಹಾಸ್ಯನಟನಾಗಿ ಪ್ರೇಕ್ಷಕರನ್ನು ಮೆಚ್ಚಿಸಿದ್ದರು. ಒಟ್ಟಾರೆಯಾಗಿ, ಅವರು 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.