ಬೆಂಗಳೂರು-ಮಂಗಳೂರು ಹೆದ್ದಾರಿ ಪ್ರಯಾಣ ದುಬಾರಿ: ಸೆಪ್ಟೆಂಬರ್ 1 ರಿಂದ ಟೋಲ್ ದರ ಭಾರೀ ಹೆಚ್ಚಳ
x

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ

ಬೆಂಗಳೂರು-ಮಂಗಳೂರು ಹೆದ್ದಾರಿ ಪ್ರಯಾಣ ದುಬಾರಿ: ಸೆಪ್ಟೆಂಬರ್ 1 ರಿಂದ ಟೋಲ್ ದರ ಭಾರೀ ಹೆಚ್ಚಳ

ಈ ಟೋಲ್‌ ಪ್ಲಾಜಾಗಳಲ್ಲಿ ಕಾರ್‌, ಪ್ಯಾಸೆಂಜರ್‌ ವ್ಯಾನ್‌ ಹಾಗೂ ಜೀಪ್‌ಗಳು ಸಿಂಗಲ್‌ ಟ್ರಿಪ್‌ಗೆ 60 ರೂಪಾಯಿ, ದಿನದಲ್ಲಿ ಹಲವು ಟ್ರಿಪ್‌ಗೆ 85 ರೂಪಾಯಿ ಹಾಗೂ ಮಾಸಿಕ ಪಾಸ್‌ಗೆ 1745 ರೂಪಾಯಿ ನೀಡಬೇಕಿದೆ.


ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುವ ವಾಹನ ಸವಾರರಿಗೆ ಸೆಪ್ಟೆಂಬರ್ 1ರಿಂದ ಪ್ರಯಾಣದ ಹೊರೆ ಹೆಚ್ಚಾಗಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಕರೇನಹಳ್ಳಿ ಮತ್ತು ತುಮಕೂರು ಜಿಲ್ಲೆಯ ಕರೆಬೈಲು ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ಹೊಸ ದರಗಳು ಜಾರಿಗೆ ಬರಲಿವೆ.

ಸುಮಾರು 40.13 ಕಿಲೋಮೀಟರ್ ವ್ಯಾಪ್ತಿಗೆ ಅನ್ವಯವಾಗುವ ಈ ಶುಲ್ಕ ಏರಿಕೆಯಿಂದಾಗಿ ನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ಸಾವಿರಾರು ವಾಹನ ಸವಾರರ ಜೇಬಿಗೆ ಕತ್ತರಿ ಬೀಳಲಿದೆ. ಹೊಸ ದರಗಳ ಪ್ರಕಾರ, ಕಾರು, ಜೀಪ್ ಮತ್ತು ಪ್ಯಾಸೆಂಜರ್ ವ್ಯಾನ್​​ಗಳಿಗೆ ಒಂದು ಬಾರಿಯ ಪ್ರಯಾಣಕ್ಕೆ 60 ರೂ., ಅದೇ ದಿನದ ಮರು ಪ್ರಯಾಣಕ್ಕೆ 85 ರೂ. ಹಾಗೂ ಮಾಸಿಕ ಪಾಸ್​​ಗೆ 1,745 ರೂ. ನಿಗದಿಪಡಿಸಲಾಗಿದೆ. ಲಘು ವಾಣಿಜ್ಯ ವಾಹನಗಳಿಗೆ (LCV) ಒಂದು ಬಾರಿಯ ಪ್ರಯಾಣಕ್ಕೆ 100 ರೂ., ಮರು ಪ್ರಯಾಣಕ್ಕೆ 155 ರೂ. ಮತ್ತು ಮಾಸಿಕ ಪಾಸ್ಗೆ 3,055 ರೂ. ಪಾವತಿಸಬೇಕಾಗುತ್ತದೆ.

ಇನ್ನು ಬಸ್ ಮತ್ತು ಟ್ರಕ್​​ಳಿಗೆ ಒಂದು ಬಾರಿಯ ಪ್ರಯಾಣಕ್ಕೆ 205 ರೂ. ಮತ್ತು ಅದೇ ದಿನದ ಮರು ಪ್ರಯಾಣಕ್ಕೆ 305 ರೂ. ಆಗಿದ್ದು, ಮಾಸಿಕ ಪಾಸ್​ಗೆ 6,015 ರೂ. ನಿಗದಿಪಡಿಸಲಾಗಿದೆ. ಭಾರೀ ಮತ್ತು ಮಲ್ಟಿ-ಆಕ್ಸಲ್ ವಾಹನಗಳು ಒಂದು ಬಾರಿಯ ಪ್ರಯಾಣಕ್ಕೆ 325 ರೂ., ಮರು ಪ್ರಯಾಣಕ್ಕೆ 490 ರೂ. ಹಾಗೂ ಮಾಸಿಕ ಪಾಸ್​ಗೆ 9,815 ರೂ. ಪಾವತಿಸಬೇಕಾಗುತ್ತದೆ.

Read More
Next Story