ʼಹುಲಿ ಸಂರಕ್ಷಿತ ಪ್ರದೇಶʼಕ್ಕೆ  ಸೌದೆ ತರಲು ತೆರಳಿದ ಮಹಿಳೆ ಹುಲಿ ದಾಳಿಗೆ ಬಲಿ
x

ʼಹುಲಿ ಸಂರಕ್ಷಿತ ಪ್ರದೇಶʼಕ್ಕೆ ಸೌದೆ ತರಲು ತೆರಳಿದ ಮಹಿಳೆ ಹುಲಿ ದಾಳಿಗೆ ಬಲಿ

ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಮಾನವ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಈ ಘಟನೆಯಲ್ಲಿ ಮೇಕೆ ಮೇಯಿಸಲು ತೆರಳಿದ್ದ ಮಹಿಳೆ ಅರಿವಿನ ಕೊರತೆಯಿಂದ ಸೌದೆ ಸಂಗ್ರಹಕ್ಕೆ ತೆರಳಿ ಹುಲಿ ದಾಳಿಗೆ ಬಲಿಯಾಗಿದ್ದಾಳೆ.


ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಎನ್‌ಬೇಗೂರು ವ್ಯಾಪ್ತಿಯಲ್ಲಿ ಸೌದೆ ತರಲು ತೆರಳಿದ ಮಹಿಳೆಯೊಬ್ಬರನ್ನು ಹುಲಿ ಹೊತ್ತೊಯ್ದು ಕೊಂದ ಘಟನೆ ಶನಿವಾರ ನಡೆದಿದೆ. ಹೆಚ್.ಡಿ.ಕೋಟೆ ತಾಲೂಕಿನ ಮೂರ್ಬಾಂದ್ ಬೆಟ್ಟದ ಬಳಿಯ ಅರಣ್ಯವೀಕ್ಷಣೆಯ ಟವರ್‌ ಬಳಿ ಆಕೆಯ ಮೃತ ದೇಹ ಪತ್ತೆಯಾಗಿದೆ.

ಹುಲಿ ದಾಲಿಗೆ ಬಲಿಯಾದ ಮಹಿಳೆಯನ್ನು ಎನ್.ಬೇಗೂರು ಸಮೀಪದ ಮಾಳದ ಹಾಡಿ ನಿವಾಸಿ ಚಿಕ್ಕಿ (48) ಎಂದು ಗುರುತಿಸಲಾಗಿದೆ. ಆದರೆ ಆಕೆಯ ಸಂಬಂಧಿಕರು ಆಕೆ ಮೇಕೆ ಮೇಯಿಸುತ್ತಿದ್ದ ಮಹಿಳೆ ಹುಲಿ ದಾಳಿಗೆ ಒಳಗಾಗಿದ್ದಾಳೆ ಎಂದು ಹೇಳಿದ್ದಾರೆ. ಆಕೆಯ ಜತೆ ಮೇಕೆ ಮೇಯಿಸಲು ತೆರಳಿದ್ದ ಸಂಬಂಧಿ ಗ್ರಾಮಕ್ಕೆ ತೆರಳಿ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.

ಆಕೆ ಮೇಕೆ ಮೇಯಿಸಲು ತೆರಳಿದ್ದಳು. ಆದರೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರವೇಶ ನಿರ್ಬಂಧಿಸಲಾದರೂ ಸೌದೆ ಒಲೆ ಸಂಗ್ರಹಕ್ಕೆಂದು ಆಕೆ ಅಲ್ಲಿಗೆ ತೆರಳಿದ್ದಳು. ಆಕೆಯ ಅರಿವಿನ ಕೊರತೆಯೇ ಈ ಘಟನೆಗೆ ಮುಖ್ಯಕಾರಣವಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ಎನ್.ಬೇಗೂರು ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶನಿವಾರ ಮೃತದೇಹಕ್ಕಾಗಿ ಹುಡುಕಾಟ ನಡೆದರೂ ಕತ್ತಲು ಆವರಿಸಿದ್ದರಿಂದ ಸಿಕ್ಕಿರಲಿಲ್ಲ. ಬಳಿಕ ಭಾನುವಾರ ಬೆಳಗ್ಗೆ ಅರಣ್ಯ ವೀಕ್ಷಣೆಯ ಟವರ್ ಮೇಲೆ ಶವ ಪತ್ತೆಯಾಗಿದೆ. ಹೆಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More
Next Story