
ವಸತಿ ಸಮುಚ್ಚಯದಲ್ಲಿ ಆಶ್ರಯ ಪಡೆದಿದ್ದ ಕಳ್ಳ ಬಾಂಬೆ ಸಲೀಂ
ಪೊಲೀಸ್ ಮನೆಯಲ್ಲೇ ಆಶ್ರಯ ಪಡೆದಿದ್ದ ಕಳ್ಳ ಬಾಂಬೆ ಸಲೀಂ ; ಕಾನ್ಸ್‌ಟೆಬಲ್ ಅಮಾನತು
ಗೋವಿಂದಪುರ ಠಾಣೆಯಲ್ಲಿ ಕಾನ್ಸ್‌ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಚ್.ಆರ್. ಸೋನಾರ, ಆಡುಗೋಡಿಯ ಪೊಲೀಸ್ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದ. ಕುಖ್ಯಾತ ಕಳ್ಳ ಬಾಂಬೆ ಸಲೀಂ ಜತೆ ಸ್ನೇಹ ಬೆಳೆಸಿ ತನ್ನ ಮನೆಯಲ್ಲೇ ಆಶ್ರಯ ನೀಡಿದ್ದರು.
ಕಳ್ಳರ ಹೆಡೆಮುರಿ ಕಟ್ಟಬೇಕಾಗಿದ್ದ ಪೊಲೀಸ್ ಸಿಬ್ಬಂದಿಯೇ ಕಳ್ಳನೊಬ್ಬನಿಗೆ ಆಶ್ರಯ ನೀಡಿದ್ದ ಘಟನೆ ಬೆಂಗಳೂರಿನ ಆಡುಗೋಡಿಯಲ್ಲಿ ನಡೆದಿದೆ.
ನಗರದ ಗೋವಿಂದಪುರ ಠಾಣೆಯಲ್ಲಿ ಕಾನ್ಸ್‌ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಚ್.ಆರ್. ಸೋನಾರ ಆಡುಗೋಡಿಯ ಪೊಲೀಸ್ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದು, ಕುಖ್ಯಾತ ಕಳ್ಳ ಬಾಂಬೆ ಸಲೀಂ ಜತೆ ಸ್ನೇಹ ಬೆಳೆಸಿದ್ದ. ಕಾನ್ಸ್‌ಟೆಬಲ್ ತನ್ನ ಮನೆಯಲ್ಲೇ ಆಶ್ರಯ ನೀಡಿದ್ದರು.
ಸಿಕ್ಕಿಬಿದ್ದಿದ್ದು ಹೇಗೆ?
ಕಳ್ಳ ಬಾಂಬೆ ಸಲೀಂ ಪದೇ ಪದೇ ಪೊಲೀಸ್ ಕಾನ್ಸ್‌ಟೆಬಲ್ ಸೋನಾರ ಅವರ ಸಮವಸ್ತ್ರವನ್ನು ಧರಿಸಿ, ತನ್ನ ಪತ್ನಿಗೆ ವಿಡಿಯೊ ಕರೆ ಮಾಡುತ್ತಿದ್ದ. ಕಳ್ಳನಾದರೂ ಪೊಲೀಸರ ಮನೆಯಲ್ಲಿದ್ದೇನೆ. ಅವರದ್ದೇ ಯೂನಿಫಾರಂ ಧರಿಸಿದ್ದೇನೆ ನೋಡು" ಎಂದು ಕೊಚ್ಚಿಕೊಳ್ಳುತ್ತಿದ್ದ. ಇದಕ್ಕೆ ಸಾಕ್ಷಿಯಾಗಿ ಸ್ಕ್ರೀನ್ ಶಾಟ್ ಫೋಟೋಗಳನ್ನು ತೆಗೆದಿಟ್ಟುಕೊಂಡಿದ್ದ. ಇದರಿಂದಲೇ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾನ್ಸ್‌ಸ್ಟೆಬಲ್ ಅಮಾನತು
ತನ್ನದೇ ಮನೆಯಲ್ಲಿ ಕಳ್ಳನಿಗೆ ಆಶ್ರಯ ನೀಡಿದ್ದ ಗೋವಿಂದಪುರ ಠಾಣೆ ಕಾನ್ಸ್‌ಟೆಬಲ್ ಎಚ್.ಆರ್. ಸೋನಾರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಪೂರ್ವ ವಿಭಾಗದ ಡಿಸಿಪಿ ದೇವರಾಜು ಆದೇಶ ಹೊರಡಿಸಿದ್ದಾರೆ.