
Drug and Cosmetics Ban | ರಕ್ತಹೀನತೆ ಚುಚ್ಚುಮದ್ದು ಸೇರಿ 15 ರೀತಿಯ ಔಷಧ, ಸೌಂದರ್ಯ ವರ್ಧಕಗಳ ಬಳಕೆಗೆ ನಿಷೇಧ
ಎಲ್ಲಾ ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳು ಸೂಚಿತ ಉತ್ಪನ್ನಗಳನ್ನು ಸಂಗ್ರಹಿಸುವುದು, ಮಾರಾಟ ಮಾಡುವುದು, ಬಳಸುವುದನ್ನು ತಕ್ಷಣವೇ ನಿಲ್ಲಿಸಬೇಕೆಂದು ದಿನೇಶ್ ಗುಂಡೂರಾವ್ ಅವರು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಮಾರಾಟವಾಗುತ್ತಿರುವ 15 ಬಗೆಯ ಔಷಧಗಳು ಹಾಗೂ ಸೌಂದರ್ಯವರ್ಧಕಗಳು ಗುಣಮಟ್ಟ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಅವುಗಳ ಸಂಗ್ರಹ, ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ರಕ್ತಹೀನತೆಗೆ ನೀಡುವ ಚುಚ್ಚುಮದ್ದು(ಐರನ್ ಸುಕ್ರೋಸ್) ಸೇರಿದಂತೆ ೧೫ ಬಗೆಯ ಸೂಚಿತ ಔಷಧಗಳು, ಸೌಂದರ್ಯ ವರ್ಧಕಗಳ ಬಳಕೆಯನ್ನು ಕರ್ನಾಟಕದ ಔಷಧ ಪರೀಕ್ಷಾ ಪ್ರಯೋಗಾಲಯ ನಿಷೇಧಿಸಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಎಲ್ಲಾ ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳು ನಿಷೇಧದಲ್ಲಿ ಸೂಚಿಸಿರುವ ಔಷಧಗಳನ್ನು ಸಂಗ್ರಹಿಸುವುದು, ಮಾರಾಟ ಮಾಡುವುದು, ಬಳಸುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಒಂದು ವೇಳೆ ನಿಷೇಧಿತ ಔಷಧಗಳನ್ನು ಸಂಗ್ರಹಿಸಿ ಮಾರಾಟ ಮಾಡಿದರೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು. ಸೌಂದರ್ಯವರ್ಧಕಗಳ ಸಂಗ್ರಹ ಗಮನಕ್ಕೆ ಬಂದರೆ ಕೂಡಲೇ ಸ್ಥಳೀಯ ಔಷಧ ನಿರೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರಿಗೆ ತಿಳಿಸುವಂತೆ ಮನವಿ ಮಾಡಿದ್ದಾರೆ.
ಸಾರ್ವಜನಿಕರ ಸುರಕ್ಷತೆ ನಮ್ಮ ಆದ್ಯತೆ. ಹಾಗಾಗಿ ಆರೋಗ್ಯ ಇಲಾಖೆ ಹಾಗೂ ಕರ್ನಾಟಕ ಔಷಧ ಪ್ರಯೋಗಾಲಯ ಹೊರಡಿಸಿರುವ ಪಟ್ಟಿಯಲ್ಲಿರುವ ಕೆಲ ಬ್ಯಾಚ್ನ ಔಷಧಗಳು/ಸೌಂದರ್ಯವರ್ಧಕಗಳ ಬಳಸಬಾರದು. ಈ ನಿಯಮ ಉಲ್ಲಂಘಿಸುವವರ ಈ ಔಷಧಗಳನ್ನು ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಅಲ್ಮಾ ಲ್ಯಾಬೋರೊಟರೀಸ್ ಅವರ ಕಾಂಪೌಂಡ್ ಸೋಡಿಯಮ್ ಲ್ಯಾಕೈಟ್ ಇಂಜೆಕ್ಷನ್ ಐ.ಪಿ, ಅಬಾನ್ ಫಾರ್ಮಾಸುಟಿಕಲ್ಸ್ನ ಪೋಮೋಲ್-650 ಸೇರಿ 15 ಬಗೆಯ ಔಷಧಗಳು, ಸೌಂದರ್ಯವರ್ಧಕಗಳನ್ನು ನಿಷೇಧಿಸಲಾಗಿದೆ.