NABARD REPORT | ದೇಶದಲ್ಲಿ ಕೃಷಿ ಅವಲಂಬಿತರ ಸಂಖ್ಯೆ ಹೆಚ್ಚಳ: ಕರ್ನಾಟಕದಲ್ಲಿ ಇಳಿಕೆ
x
ರಾಜ್ಯದಲ್ಲಿ ಕೃಷಿ ಅವಲಂಬಿತರ ಸಂಖ್ಯೆ ಇಳಿಮುಖ ಕಂಡಿದೆ.

NABARD REPORT | ದೇಶದಲ್ಲಿ ಕೃಷಿ ಅವಲಂಬಿತರ ಸಂಖ್ಯೆ ಹೆಚ್ಚಳ: ಕರ್ನಾಟಕದಲ್ಲಿ ಇಳಿಕೆ

ಭಾರತದಲ್ಲಿ ಈ ಹಿಂದೆ ಇದ್ದ ಕೃಷಿ ಕಳೆಗುಂದಲು ಆರಂಭವಾದರೂ 2016-17ರಲ್ಲಿ ಗ್ರಾಮೀಣ ಪ್ರದೇಶಗಳು ಮತ್ತು 50000ಕ್ಕಿಂತ ಕಡಿಮೆ ಜನಸಂಖ್ಯೆ ಅರೆ ನಗರಗಳ ಶೇ.48ರಷ್ಟು ಜನರು ಮತ್ತೆ ಕೃಷಿಯತ್ತ ಒಲವು ತೋರಿದ್ದಾರೆ. 2021-22ರಲ್ಲಿ ಈ ಪ್ರಮಾಣ ಶೇ.57ಕ್ಕೆ ಏರಿದೆ.


Click the Play button to hear this message in audio format

ದೇಶದ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳ ಜನತೆ ಕೃಷಿ ಚಟುವಟಿಕೆ ಮೇಲೆ ಅವಲಂಬಿತರಾಗುವ ಪ್ರಮಾಣ ಹೆಚ್ಚುತ್ತಿದೆ. ಅದಕ್ಕೆ ವ್ಯತಿರಿಕ್ತವಾಗಿ ಕರ್ನಾಟಕದಲ್ಲಿ ಕೃಷಿ ಅವಲಂಬಿತರ ಪ್ರಮಾಣ ಕುಸಿದಿದೆ ಎಂದು ರಾಷ್ಟ್ರೀಯ ಕೃಷಿ ಬ್ಯಾಂಕ್ ಮತ್ತು ಗ್ರಾಮೀಣ ಅಭಿವೃದ್ಧಿ (ನಬಾರ್ಡ್) ಬಿಡುಗಡೆ ಮಾಡಿರುವ ಗ್ರಾಮೀಣ ಹಣಕಾಸು ಒಳಗೊಳ್ಳುವಿಕೆ ಸಮೀಕ್ಷೆ ವರದಿಯಲ್ಲಿ ತಿಳಿದುಬಂದಿದೆ.

ಭಾರತದಲ್ಲಿ ಈ ಹಿಂದೆ ಕೃಷಿ ಕಳೆಗುಂದಲು ಆರಂಭವಾದರೂ 2016-17ರಲ್ಲಿ ಗ್ರಾಮೀಣ ಪ್ರದೇಶಗಳು ಮತ್ತು 50000ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಅರೆ ನಗರಗಳ ಶೇ.48ರಷ್ಟು ಜನರು ಮತ್ತೆ ಕೃಷಿಯತ್ತ ಒಲವು ತೋರಿದ್ದಾರೆ. 2021-22ರಲ್ಲಿ ಈ ಪ್ರಮಾಣ ಶೇ.57ಕ್ಕೆ ಏರಿದೆ. 2018-19ರಲ್ಲಿ ಗ್ರಾಮೀಣ ಭಾಗದ ಶೇ.57.8ರಷ್ಟು ಜನರಿಗೆ ಕೃಷಿ ವಲಯ ಉದ್ಯೋಗ ನೀಡಿದ್ದರೆ, 2023-24ರಲ್ಲಿ ಅದು ಶೇ.59.8ಕ್ಕೆ ಏರಿದೆ. ಇನ್ನು 2016-17ರಲ್ಲಿ ಕೃಷಿ ಕುಟುಂಬಗಳ ಸರಾಸರಿ ಮಾಸಿಕ ಆದಾಯ 8931 ರೂ.ನಷ್ಟಿತ್ತು. ಆದರೆ 2021-22ರಲ್ಲಿ ಈ ಪ್ರಮಾಣ 13,661ಕ್ಕೇ ಏರಿಕೆಯಾಗಿದೆ. ಲಾಕ್‌ಡೌನ್‌ ಕೃಷಿ ಕ್ಷೇತ್ರದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ ಎಂದು ವರದಿ ತಿಳಿಸಿದೆ.

ಆದರೆ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೃಷಿಯಲ್ಲಿ ಇಳಿಕೆ ಕಂಡುಬಂದಿದ್ದು, ಜಮ್ಮು- ಕಾಶ್ಮೀರ (ಶೇ.77ರಿಂದ 73ಕ್ಕೆ), ಹಿಮಾಚಲಪ್ರದೇಶ (ಶೇ.70ರಿಂದ 63ಕ್ಕೆ), ಕರ್ನಾಟಕ (ಶೇ.59ರಿಂದ 55ಕ್ಕೆ) ಗುಜರಾತ್ (ಶೇ.59ರಿಂದ 55ಕ್ಕೆ), ಪಂಜಾಬ್ (ಶೇ.42 ರಿಂದ ಶೇ.36ಕ್ಕೆ) ಇಳಿಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Read More
Next Story