ಭದ್ರಾವತಿಯಲ್ಲಿ ದುಷ್ಕೃತ್ಯ | ಫಸಲಿಗೆ ಬಂದಿದ್ದ ಅಡಿಕೆ ಮರಗಳನ್ನು ಕಡಿದು ಅಟ್ಟಹಾಸ
ಫಸಲಿಗೆ ಬಂದಿದ್ದ ನೂರಾರು ಅಡಿಕೆ ಮರಗಳನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಕಡಿದು ನಾಶ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಕಲ್ಲಿಹಾಳ್ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಫಸಲಿಗೆ ಬಂದಿದ್ದ ನೂರಾರು ಅಡಿಕೆ ಮರಗಳನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಕಡಿದು ನಾಶ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಕಲ್ಲಿಹಾಳು ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಕಲ್ಲಿಹಾಳ್ ಗ್ರಾಮದ ಷಹಿಮುನ್ನೀಸಾ ಅವರಿಗೆ ಸೇರಿದ 1.6 ಎಕರೆ ಜಮೀನಿನಲ್ಲಿ ಸುಮಾರು 34 ವರ್ಷ ಹಳೆಯ, ಫಲ ನೀಡುತ್ತಿದ್ದ ಅಡಿಕೆ ಮರಗಳಿದ್ದವು. ಬುಧವಾರ ಬೆಳಿಗ್ಗೆ ಅಡಕೆ ಗೊನೆ ಕಟಾವು ಮಾಡಬೇಕಿತ್ತು. ಮಂಗಳವಾರ ರಾತ್ರಿ ವೇಳೆಗೆ ದುಷ್ಕರ್ಮಿಗಳು ಸುಮಾರು 700 ಅಡಿಕೆ ಮರಗಳನ್ನು ಗರಗಸದಿಂದ ಕತ್ತರಿಸಿ ನಾಶಪಡಿಸಿದ್ದಾರೆ. ಇದರಿಂದ ಕೆಲ ಮರಗಳು ಧರೆಗುರುಳಿದ್ದು, ತೋಟ ದಲ್ಲಿ ಹಸಿ ಅಡಿಕೆ ಮಣ್ಣುಪಾಲಾಗಿದೆ. ಈ ಕೃತ್ಯದಿಂದ ಸುಮಾರು 70 ಲಕ್ಷ ರೂ. ಗಳಿಗೂ ಹೆಚ್ಚಿನ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story