ರೇಣುಕಾಸ್ವಾಮಿ ಕೊಲೆ ಪ್ರಕರಣ | ಹಣ ಬಳಕೆ ಕುರಿತು ದರ್ಶನ್‌ ವಿಚಾರಣೆಗೆ ಒಳಪಡಿಸಿದ ಐಟಿ
x
ನಟ ದರ್ಶನ್‌

ರೇಣುಕಾಸ್ವಾಮಿ ಕೊಲೆ ಪ್ರಕರಣ | ಹಣ ಬಳಕೆ ಕುರಿತು ದರ್ಶನ್‌ ವಿಚಾರಣೆಗೆ ಒಳಪಡಿಸಿದ ಐಟಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿಅಪಾರ ಹಣ ಬಳಕೆ ಆರೋಪ ಹಿನ್ನೆಲೆ ವಿಚಾರಣಾಧೀನ ಕೈದಿ, ನಟ ದರ್ಶನ್‌ ಅವರನ್ನು ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಐಟಿ ಅಧಿಕಾರಿಗಳು ಸತತ ಎರಡು ದಿನಗಳಿಂದ ವಿಚಾರಣೆಗೆ ಒಳಪಡಿಸಿದರು.


Click the Play button to hear this message in audio format

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿಅಪಾರ ಹಣ ಬಳಕೆಯಾಗಿರುವ ಕುರಿತು ಪ್ರಕರಣದ ತನಿಖೆ ನಡೆಸುತ್ತಿರುವ ಬೆಂಗಳೂರು ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿರುವ ಹಿನ್ನೆಲೆಯಲ್ಲಿ ವಿಚಾರಣಾಧೀನ ಕೈದಿ, ನಟ ದರ್ಶನ್‌ ಅವರನ್ನು ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಐಟಿ ಅಧಿಕಾರಿಗಳು ಸತತ ಎರಡು ದಿನಗಳಿಂದ ವಿಚಾರಣೆಗೆ ಒಳಪಡಿಸಿದರು.

ಐವರು ಅಧಿಕಾರಿಗಳ ಐಟಿ ತಂಡ ಆಗಮಿಸುತ್ತಿದ್ದಂತೆ ಹೈಸೆಕ್ಯೂರಿಟಿ ಸೆಲ್‌ನಲ್ಲಿದ್ದ ದರ್ಶನ್‌ ಅವರನ್ನು ಕಾರಾಗೃಹದ ಅಧೀಕ್ಷಕರ ಕಚೇರಿ ಪಕ್ಕದ ಕೊಠಡಿಗೆ ಕರೆತರಲಾಯಿತು. ಗುರುವಾರ ಸಂಜೆ 7.15ರವರೆಗೆ ವಿಚಾರಣೆ ನಡೆಯಿತು. ದರ್ಶನ್‌ ಪರ ಆಡಿಟರ್‌ ಎಂ.ಆರ್‌.ರಾವ್‌, ಸಹಾಯಕ ವಕೀಲ ರಾಮಸಿಂದ್‌ ಅವರು ಸಹ ಈ ವೇಳೆ ಜತೆಗಿದ್ದರು.

ತಮ್ಮ ಆಪ್ತ ವಲಯಕ್ಕೆ ಅಪಾರ ಹಣ ವರ್ಗಾವಣೆ ಆರೋಪ ಕುರಿತು ಪ್ರಶ್ನೆಗಳನ್ನು ಕೇಳಿದ ಐಟಿ ಅಧಿಕಾರಿಗಳು ದರ್ಶನ್‌ ಹೇಳಿಕೆ ದಾಖಲಿಸಿಕೊಂಡರು. ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲು ದರ್ಶನ್‌ ತಡಕಾಡಿದರು ಎನ್ನಲಾಗಿದೆ. ನಿದ್ದೆ ಮತ್ತು ಪುಸ್ತಕ ಓದುವ ಮೂಲಕ ದಿನದ ಬಹುತೇಕ ಅವಧಿ ವಿಶ್ರಾಂತಿಯಲ್ಲಿಯೇ ಕಳೆಯುತ್ತಿದ್ದ ದರ್ಶನ್‌ ಐಟಿ ಅಧಿಕಾರಿಗಳ ವಿಚಾರಣೆಯಿಂದ ದಿಗಿಲುಗೊಂಡಿದ್ದರು. ಮಧ್ಯಾಹ್ನದ ಊಟವನ್ನೂ ಮಾಡದೇ ಬಿಸ್ಕಿಟ್‌ ತಿಂದು ವಿಚಾರಣೆಗೆ ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ.

Read More
Next Story