ಧರ್ಮಸ್ಥಳ ಪ್ರಕರಣ|ಸರ್ಕಾರ ಹಿಂದೂಗಳ ಭಾವನೆಗೆ ದಕ್ಕೆ ತಂದಿದೆ; ನಿಖಿಲ್ ಕುಮಾರಸ್ವಾಮಿ
x

ನಿಖಿಲ್‌ ಕುಮಾರಸ್ವಾಮಿ 

ಧರ್ಮಸ್ಥಳ ಪ್ರಕರಣ|ಸರ್ಕಾರ ಹಿಂದೂಗಳ ಭಾವನೆಗೆ ದಕ್ಕೆ ತಂದಿದೆ; ನಿಖಿಲ್ ಕುಮಾರಸ್ವಾಮಿ

ಭಕ್ತರು ಮತ್ತು ಸಾರ್ವಜನಿಕರಲ್ಲಿ ಎಸ್ಐಟಿ ತನಿಖೆಯ ಬಗ್ಗೆ ಅನುಮಾನಗಳು ಹೆಚ್ಚಾಗಿವೆ. ಹೀಗಾಗಿ, ಧರ್ಮಸ್ಥಳದ ಪಾವಿತ್ರ್ಯತೆಯನ್ನು ಉಳಿಸಲು ಮತ್ತು ಸಂಪೂರ್ಣ ಸತ್ಯ ಬಯಲಿಗೆ ತರಲು ಈ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗೆ ವಹಿಸುವಂತೆ ಅವರು ಆಗ್ರಹಿಸಿದರು.


Click the Play button to hear this message in audio format

ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣದ ತನಿಖೆಯಲ್ಲಿ ರಾಜ್ಯ ಸರ್ಕಾರದ ನಿಲುವು ಮತ್ತು ವಿಶೇಷ ತನಿಖಾ ತಂಡದ (ಎಸ್‌ಐಟಿ) ಕಾರ್ಯವೈಖರಿ ಬಗ್ಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಸತ್ಯಾಸತ್ಯತೆಯನ್ನು ಹೊರತರಲು ರಚಿಸಲಾದ ಎಸ್‌ಐಟಿ, ತಿಂಗಳುಗಳೇ ಕಳೆದರೂ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ವಿಫಲವಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಅವರು ಶನಿವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಈ ವಿವಾದದ ಹಿಂದೆ ಷಡ್ಯಂತ್ರವಿದೆ ಎಂದು ಸ್ವತಃ ಉಪಮುಖ್ಯಮಂತ್ರಿ ಅವರೇ ಹೇಳಿಕೆ ನೀಡಿದ್ದರೂ, ಸರ್ಕಾರ ಆ ಷಡ್ಯಂತ್ರದ ಹಿಂದಿರುವ ಶಕ್ತಿಗಳನ್ನು ಹೊರಗಡೆ ತರಲು ವಿಫಲವಾಗಿದೆ. ಇದರಿಂದಾಗಿ ಭಕ್ತರು ಮತ್ತು ಸಾರ್ವಜನಿಕರಲ್ಲಿ ಎಸ್ಐಟಿ ತನಿಖೆಯ ಬಗ್ಗೆ ಅನುಮಾನಗಳು ಹೆಚ್ಚಾಗಿವೆ. ಹೀಗಾಗಿ, ಧರ್ಮಸ್ಥಳದ ಪಾವಿತ್ರ್ಯತೆಯನ್ನು ಉಳಿಸಲು ಮತ್ತು ಸಂಪೂರ್ಣ ಸತ್ಯ ಬಯಲಿಗೆ ತರಲು ಈ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗೆ ವಹಿಸುವಂತೆ ಅವರು ಆಗ್ರಹಿಸಿದರು.

ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ ನಿಖಿಲ್‌ ಕುಮಾರಸ್ವಾಮಿ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಸರ್ಕಾರದ ಯೋಜನೆಗಳ ಮೇಲೆ ಜನರಿಗೆ ವಿಶ್ವಾಸ ಮೂಡಬೇಕಾದರೆ, ಮೊದಲು 900 ಎಕರೆ ಕೆಐಡಿಬಿ ಭೂಮಿಯಲ್ಲಿ 'ಪೈಲೆಟ್ ಪ್ರಾಜೆಕ್ಟ್'ಮಾಡಿ ತೋರಿಸಲಿ. ಅದಲ್ಲದೇ ಜಿಬಿಡಿಎಗೆ ಯಾವುದೇ ಅನುಭವವಿಲ್ಲ, ಯೋಜನೆಯನ್ನು ಜಾರಿಗೆ ತರಲು ಅಗತ್ಯ ಸಿಬ್ಬಂದಿ ಮತ್ತು ಹಣಕಾಸು ಮೂಲಗಳನ್ನು ಸರ್ಕಾರ ಹೊಂದಿದೆಯೇ ಎಂಬ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕು. ಈ ಎಲ್ಲದರ ಕೊರತೆ ಎದ್ದು ಕಾಣುತ್ತಿದ್ದು, ಸರ್ಕಾರ ಪರಿಸರ ಇಲಾಖೆಯಿಂದ ಇಲ್ಲಿಯವರೆಗೆ ಅನುಮತಿ ಪಡೆದಿಲ್ಲ ಎಂದು ನಿಖಿಲ್ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಜನರ ಸಮಸ್ಯೆ ಬಗ್ಗೆ ಏಕೆ ಸರ್ಕಾರ ಆಲೋಚಿಸುತ್ತಿಲ್ಲ

ಸಾಮಾಜಿಕ ಹಾಗೂ ಶೈಕ್ಷಣಿಕ ಸರ್ವೇಯ ಹೆಸರಿನಲ್ಲಿ ಎಲ್ಲರಿಗೂ ನ್ಯಾಯ ಒದಗಿಸುತ್ತೇವೆ ಎಂದು ಹೇಳುತ್ತಿರುವ ಸರ್ಕಾರ, ಈ ಯೋಜನೆಯಿಂದ ತೊಂದರೆಗೊಳಗಾಗುವ 10 ಹಳ್ಳಿಗಳ ಜನತೆಯ ಬದುಕು, ಅವರ ಜೀವನಶೈಲಿ ಮತ್ತು ಸಮಸ್ಯೆಯ ಬಗ್ಗೆ ಏಕೆ ಆಲೋಚಿಸುತ್ತಿಲ್ಲ? ಆ ಜನತೆ ಹೇಗೆ ಬದುಕುತ್ತಿದ್ದಾರೆ, ಅವರ ಕನಿಷ್ಠ ಸಮಸ್ಯೆಗಳೇನು, ಮುಂದೆ ತಮ್ಮ ಜೀವನವನ್ನು ಹೇಗೆ ನಡೆಸುತ್ತಾರೆ ಎಂಬುದರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇರಬೇಕಲ್ಲವೇ ಎಂದು ನಿಖಿಲ್ ಪ್ರಶ್ನಿಸಿದ್ದಾರೆ.

ರೈತರ ಪರಿಹಾರದ ಬಗ್ಗೆ ಡಿಸಿಎಂ ಅವರು ಮಾತನಾಡುತ್ತಿದ್ದರೂ, ಇಲ್ಲಿಯವರೆಗೆ ಕೇವಲ 10 ರೈತರೊಂದಿಗೆ ಮುಖ್ಯಮಂತ್ರಿಗಳು ಸಭೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದ ನಿಖಿಲ್, ರೈತರ ಬಗ್ಗೆ ಕಾಳಜಿಗಾಗಿ ಒಂದು ಸಭೆಯನ್ನು ಕೂಡ ಮಾಡಿಲ್ಲ ಎಂದು ಆರೋಪಿಸಿದರು.

Read More
Next Story