Naxal Activity | ನಕ್ಸಲರ ಶರಣಾಗತಿಗೆ ಮುಕ್ತ ಆಹ್ವಾನ ನೀಡಿದ ಸರ್ಕಾರ
x

Naxal Activity | ನಕ್ಸಲರ ಶರಣಾಗತಿಗೆ ಮುಕ್ತ ಆಹ್ವಾನ ನೀಡಿದ ಸರ್ಕಾರ

ನಕ್ಸಲರು ಶರಣಾಗುವುದು ಉತ್ತಮ. ಕೂಂಬಿಂಗ್‌ ಕಾರ್ಯಾಚರಣೆ ವೇಳೆ ನಕ್ಸಲರು ಗುಂಡು ಹಾರಿಸುತ್ತಾರೆ, ಅದಕ್ಕೆ ಪ್ರತಿಯಾಗಿ ನಮ್ಮವರೂ ಗುಂಡು ಹಾರಿಸುತ್ತಾರೆ. ಹಾಗಾಗಿ ಶರಣಾಗತಿಗೆ ಮುಕ್ತ ಆಹ್ವಾನ ನೀಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.


ಮಲೆನಾಡಿನಲ್ಲಿ ನಕ್ಸಲ್‌ ಚಟುವಟಿಕೆ ಮತ್ತೆ ತಲೆ ಎತ್ತಿರುವ ಹಿನ್ನೆಲೆಯಲ್ಲಿ ಗೃಹ ಇಲಾಖೆಯು ನಕ್ಸಲರ ಶರಣಾಗತಿಗೆ ಮುಕ್ತ ಅವಕಾಶ ನೀಡಿದೆ.

ಕೆಲ ದಿನಗಳ ಹಿಂದಷ್ಟೇ ನಕ್ಸಲ್‌ ನಾಯಕ ವಿಕ್ರಂಗೌಡ ಎನ್‌ಕೌಂಟರ್‌ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಎನ್‌ಕೌಂಟರ್‌ ಬಗ್ಗೆ ಪ್ರಗತಿಪರರು ಅನುಮಾನ ವ್ಯಕ್ತಪಡಿಸಿದ್ದರು. ವಿಕ್ರಂಗೌಡ ಎನ್‌ಕೌಂಟರ್‌ ಬದಲು ಶರಣಾಗತಿಗೆ ಸೂಚಿಸಬಹುದಾಗಿತ್ತು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವರು ಹಾಗೂ ಡಿಜಿಪಿ ಪ್ರಣವ್‌ ಮೊಹಂತಿ, ಪ್ರತಿದಾಳಿಗೆ ಮುಂದಾದ ಹಿನ್ನೆಲೆಯಲ್ಲಿ ಎನ್‌ಕೌಂಟರ್‌ ಮಾಡಿದ್ದಾಗಿ ಹೇಳಿಕೆ ನೀಡಿದ್ದರು.

ಶನಿವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರನ್ನು ಡಿಜಿಪಿ ಪ್ರಣವ್‌ ಮೊಹಂತಿ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್‌, 'ನಕ್ಸಲರ ಶರಣಾಗತಿ ಕುರಿತು ಚರ್ಚಿಸಲು ಪ್ರಣವ್‌ ಮೊಹಂತಿ ಬಂದಿದ್ದರು. ಶರಣಾಗತಿ ಪ್ರಕ್ರಿಯೆ ನಡೆಸಲು ಕೆಲವು ಸೂಚನೆಗಳನ್ನು ನೀಡಿದ್ದೇನೆ ಎಂದು ಹೇಳಿದ್ದಾರೆ.

ನಕ್ಸಲರು ಶರಣಾಗುವುದು ಉತ್ತಮ. ಕೂಂಬಿಂಗ್‌ ಕಾರ್ಯಾಚರಣೆ ವೇಳೆ ನಕ್ಸಲರು ಗುಂಡು ಹಾರಿಸುತ್ತಾರೆ, ಅದಕ್ಕೆ ಪ್ರತಿಯಾಗಿ ನಮ್ಮವರೂ ಗುಂಡು ಹಾರಿಸುತ್ತಾರೆ. ಹಾಗಾಗಿ ಶರಣಾಗತಿಗೆ ಮುಕ್ತ ಆಹ್ವಾನ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಬಗೆಹರಿಸುವುದು ಉದ್ದೇಶ. ಬಿಜೆಪಿಯವರು ಹೋರಾಟ ಮಾಡಲಿ, ಬೇಡ ಎನ್ನುವುದಿಲ್ಲ. ಆ ಭಾಗದ ಜನರ ಸಮಸ್ಯೆ ಕುರಿತು ಹೆಚ್ಚು ಚರ್ಚಿಸಲಿ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

Read More
Next Story