Education Department| ಶಿಕ್ಷಣ ಇಲಾಖೆಯಿಂದ 2025-26ರ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ
x

 2025-26ರ ಸಾಲಿನ ಶೈಕ್ಷಣಿಕ ವೇಳಾ ಪಟ್ಟಿಯನ್ನು  ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.

Education Department| ಶಿಕ್ಷಣ ಇಲಾಖೆಯಿಂದ 2025-26ರ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ

ಈ ವೇಳಾಪಟ್ಟಿಯು ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಅನುಷ್ಠಾನಗೊಳ್ಳಬೇಕಾಗಿದೆ. ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಈ ಮಾರ್ಗಸೂಚಿ ಕಡ್ಡಾಯ.


ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯು 2025–26ನೇ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಪ್ರಕಟಿಸಿದೆ. ಈ ವೇಳಾಪಟ್ಟಿಯು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಅನ್ವಯವಾಗುತ್ತದೆ. ಶಾಲಾ ಕರ್ತವ್ಯದ ದಿನಗಳು ಮತ್ತು ರಜಾದಿನಗಳ ವಿವರಗಳೊಂದಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ಏಕರೂಪವಾಗಿ ನಡೆಸಲು ಈ ವೇಳಾಪಟ್ಟಿಯನ್ನು ರೂಪಿಸಲಾಗಿದೆ.

ಶೈಕ್ಷಣಿಕ ಅವಧಿಗಳು

ಮೊದಲನೇ ಅವಧಿ: 2025 ಮೇ 29 ರಿಂದ 2025 ಸೆಪ್ಟೆಂಬರ್ 19ರವರೆಗೆ

ಎರಡನೇ ಅವಧಿ: 2025 ಅಕ್ಟೋಬರ್ 08 ರಿಂದ 2026 ಏಪ್ರಿಲ್ 10ರವರೆಗೆ

ರಜಾದಿನಗಳ ವಿವರ

ದಸರಾ ರಜೆ: 2025 ಸೆಪ್ಟೆಂಬರ್ 20 ರಿಂದ 2025 ಅಕ್ಟೋಬರ್ 07ರವರೆಗೆ

ಬೇಸಿಗೆ ರಜೆ: 2026 ಏಪ್ರಿಲ್ 11 ರಿಂದ 2026 ಮೇ 05ರವರೆಗೆ

ಒಟ್ಟು ದಿನಗಳ ಅವಲೋಕನ

ಶಾಲಾ ಕಾರ್ಯದ ದಿನಗಳು: 242 ದಿನಗಳು

ಒಟ್ಟು ರಜಾದಿನಗಳು: 123 ದಿನಗಳು

ವಿವಿಧ ಚಟುವಟಿಕೆಗಳಿಗೆ ಮೀಸಲಾದ ದಿನಗಳು

ಬೋಧನಾ ಕಲಿಕಾ ಪ್ರಕ್ರಿಯೆ 178 ದಿನಗಳು

ಪರೀಕ್ಷೆ ಮತ್ತು ಮೌಲ್ಯಾಂಕನ ಕಾರ್ಯ 26 ದಿನಗಳು

ಪಠ್ಯೇತರ ಹಾಗೂ ಸ್ಪರ್ಧಾತ್ಮಕ ಚಟುವಟಿಕೆಗಳು 22 ದಿನಗಳು

ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ 10 ದಿನಗಳು

ಸ್ಥಳೀಯ ಶಾಲಾ ರಜೆಗಳು 4 ದಿನಗಳಾಗಿ ವಿಂಗಡಿಸಲಾಗಿದೆ.

ಈ ವೇಳಾಪಟ್ಟಿಯು ರಾಜ್ಯ ಪಠ್ಯಕ್ರಮದ ಪ್ರಕಾರ ಶಾಲೆಗಳಲ್ಲಿ ಅನುಷ್ಠಾನಗೊಳ್ಳಬೇಕಾಗಿದೆ. ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೂ ಈ ಮಾರ್ಗಸೂಚಿಯ ಅನುಸರಣೆ ಕಡ್ಡಾಯವಾಗಿದೆ. ಇದರಿಂದ ಶಾಲೆಗಳು ಸಮಯಕ್ಕೆ ಸರಿಯಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ರೂಪಿಸಿಕೊಂಡು ಯಶಸ್ವಿಯಾಗಿ ಶೈಕ್ಷಣಿಕ ವರ್ಷವನ್ನು ನಿರ್ವಹಿಸಬಹುದಾಗಿದೆ ಎಂದು ಶಿಕ್ಷಣ ಇಲಾಖೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

Read More
Next Story