ಕೃಷಿ ಉತ್ಪನ್ನ ಸಾಗಾಣಿಕೆ ವೆಚ್ಚ ಸರ್ಕಾರದಿಂದಲೇ ಭರಿಸಲು ನಿರ್ಧಾರ: ಚೌಹಾಣ್‌
x
ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್

ಕೃಷಿ ಉತ್ಪನ್ನ ಸಾಗಾಣಿಕೆ ವೆಚ್ಚ ಸರ್ಕಾರದಿಂದಲೇ ಭರಿಸಲು ನಿರ್ಧಾರ: ಚೌಹಾಣ್‌

ಸಾಗಾಣಿಕೆ ವೆಚ್ಚ ಭರಿಸಲಾಗದೇ ಹೆಚ್ಚಿನ ಬೆಲೆ ಸಿಗುವ ಮಾರುಕಟ್ಟೆಗೆ ಉತ್ಪನ್ನಗಳ ಕೊಂಡೊಯ್ಯಲು ರೈತರು ಮನಸ್ಸು ಮಾಡುತ್ತಿಲ್ಲ. ಬದಲಿಗೆ ಸ್ಥಳೀಯವಾಗಿ ಸಿಕ್ಕಷ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ.


ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಕೊಂಡೊಯ್ಯುವ ಸಾಗಾಣಿಕೆ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲು ನಿರ್ಧರಿಸಲಾಗಿದೆ. ಇದರಿಂದ ರೈತರ ಬೆಳೆಗೆ ನ್ಯಾಯಯತ ಬೆಲೆ ದೊರಕಿಸಲಾಗುವುದು ಎಂದು ಕೇಂದ್ರದ ಕೃಷಿ, ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.

ಶಿವಮೊಗ್ಗದಲ್ಲಿ ಶನಿವಾರ ಮಲೆನಾಡು ನವೋದ್ಯಮಿಗಳ ಶೃಂಗಸಭೆ-2025ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾಗಾಣಿಕೆ ವೆಚ್ಚ ಭರಿಸಲಾಗದೇ ಹೆಚ್ಚಿನ ಬೆಲೆ ಸಿಗುವ ಮಾರುಕಟ್ಟೆಗೆ ಉತ್ಪನ್ನಗಳ ಕೊಂಡೊಯ್ಯಲು ರೈತರು ಮನಸ್ಸು ಮಾಡುತ್ತಿಲ್ಲ. ಬದಲಿಗೆ ಸ್ಥಳೀಯವಾಗಿ ಸಿಕ್ಕಷ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಕೃಷಿ ಉತ್ಪನ್ನಗಳ ಲಾಭಾಂಶದ ಹೆಚ್ಚಿನ ಪಾಲು ಮಧ್ಯವರ್ತಿಗಳಿಗೆ ಸಿಗುತ್ತಿದೆ. ಅದನ್ನು ತಪ್ಪಿಸಲು ಸಾಗಾಣಿಕೆ ವೆಚ್ಚ ಸರ್ಕಾರವೇ ಭರಿಸಲಿದೆ ಎಂದರು.

ಶಿವಮೊಗ್ಗದ ರೈತ ತಾನು ಬೆಳೆದ ಬೆಳೆಯನ್ನು ದೆಹಲಿ ಮಾರುಕಟ್ಟೆಗೆ ಬೆಳೆ ಕೊಂಡೊಯ್ದರೂ ಅದಕ್ಕೆ ಸಾಗಾಣಿಕೆ ವೆಚ್ಚ ಸಿಗಲಿದೆ. ಇದರಲ್ಲಿ ಶೇ 50ರಷ್ಟು ಕೇಂದ್ರ ಹಾಗೂ ಉಳಿದ ಶೇ 50ರಷ್ಟು ಆಯಾ ರಾಜ್ಯ ಸರ್ಕಾರಗಳು ಭರಿಸಲಿವೆ. ರೈತರು ಮಾತ್ರವಲ್ಲ ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ) ಬೆಳೆಗಳನ್ನು ಮಾರುಕಟ್ಟೆಗೆ ಕೊಂಡೊಯ್ದರೂ ಸಾಗಾಣಿಕೆ ವೆಚ್ಚ ಭರಿಸುವ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದರು.

ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಶಾರದ ಪೂರ್ಯನಾಯ್ಕ, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್, ಅನ್ವೇಷಣಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಿ.ಎಂ.ಪಾಟೀಲ ಉಪಸ್ಥಿತರಿದ್ದರು.

Read More
Next Story