ಬಪ್ಪನಾಡು ದುರ್ಗಾಪರಮೇಶ್ವರಿ ರಥೋತ್ಸವ ವೇಳೆ ಮುರಿದು ಬಿದ್ದ ತೇರು!
x

ಬಪ್ಪನಾಡು ರಥೋತ್ಸವದ ವೇಳೆ ಮುರಿದು ಬಿದ್ದ ರಥ

ಬಪ್ಪನಾಡು ದುರ್ಗಾಪರಮೇಶ್ವರಿ ರಥೋತ್ಸವ ವೇಳೆ ಮುರಿದು ಬಿದ್ದ ತೇರು!

ಶುಕ್ರವಾರ ರಾತ್ರಿ ಸುಮಾರು 2 ಗಂಟೆಗೆ ಈ ಘಟನೆ ನಡೆದಿದೆ. ಈ ವೇಳೆ ಸಾಕಷ್ಟು ಭಕ್ತರು ಇದ್ದರು. ಯಾರಿಗೂ ತೊಂದರೆ ಆಗಿಲ್ಲ. ಬಳಿಕ ದೇವಿಯನ್ನು ಚಂದ್ರಮಂಡಲ ರಥದಲ್ಲಿ ಕುಳ್ಳಿರಿಸಿ ಉತ್ಸವ ಮುಂದುವರಿಸಲಾಯಿತು.


ಮಂಗಳೂರು ಹೊರವಲಯದ ಬಪ್ಪನಾಡು ವರ್ಷಾವಧಿ ಜಾತ್ರೆ ವೇಳೆ ಬ್ರಹ್ಮರಥೋತ್ಸವ ನಡೆಯುತ್ತಿದ್ದ ಸಂದರ್ಭ ರಥದ ಮೇಲ್ಬಾಗ ಮುರಿದುಬಿದ್ದರುವ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.

ಶುಕ್ರವಾರ ರಾತ್ರಿ ಸುಮಾರು 2 ಗಂಟೆಗೆ ಈ ಘಟನೆ ನಡೆದಿದೆ. ಈ ವೇಳೆ ಸಾಕಷ್ಟು ಭಕ್ತರು ಇದ್ದರು. ಯಾರಿಗೂ ತೊಂದರೆ ಆಗಿಲ್ಲ. ಬಳಿಕ ದೇವಿಯನ್ನು ಚಂದ್ರಮಂಡಲ ರಥದಲ್ಲಿ ಕುಳ್ಳಿರಿಸಿ ಉತ್ಸವ ಮುಂದುವರಿಸಲಾಯಿತು. ಕೆಲಕಾಲ ಭಕ್ತರು ಆತಂಕಗೊಂಡಿದ್ದು, ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ.

ಶುಕ್ರವಾರ ತಂತ್ರಿಗಳಿಂದ ವಿಶೇಷ ಪ್ರಾರ್ಥನೆಯೊಂದಿಗೆ ಬಲಿ ಆರಂಭಗೊಂಡಿತು. ಚಿನ್ನದ ಪಲ್ಲಕಿಯಲ್ಲಿ ಕುಳಿತು ಪೇಟೆ ಸವಾರಿಯಾಗಿ ರಥೋತ್ಸವ ಗದ್ದೆಗೆ ಆಗಮನವಾಯಿತು. ಈ ಸಂದರ್ಭದಲ್ಲಿ ಅರ್ಚಕರು ರಥದಲ್ಲಿ ಕುಳಿತಿದ್ದರು. ಕೆಳಗಡೆ ಸಾವಿರಾರು ಭಕ್ತರು ರಥ ಎಳೆಯುವುದರಲ್ಲಿ ತಲ್ಲೀನರಾಗಿದ್ದರು. ಏಕಾ ಏಕಿ ರಥವನ್ನು ನಿಗ್ರಹಿಸುವ ದಂಡ ತುಂಡಾದ ಪರಿಣಾಮ ರಥದ ಮೇಲ್ಬಾಗ ಸಂಪೂರ್ಣ ಧರೆಗೆ ಉರುಳಿದೆ. ಒಬ್ಬರು ಅರ್ಚಕರಿಗೆ ಸಣ್ಣಪುಟ್ಟ ತರಚಿದ ಗಾಯವಾಗಿದ್ದು, ಉಳಿದವರು ಅಪಾಯದಿಂದ ಪಾರಾಗಿದ್ದಾರೆ.

ಈ ಘಟನೆಯು ಭಕ್ತ ಸಮೂಹದಲ್ಲಿ ಆತಂಕಕ್ಕೆ ಕಾರಣವಾಯಿತು. ಬಳಿಕ ದೇವರ ಉತ್ಸವವನ್ನು ಚಂದ್ರ ಮಂಡಲ ರಥದಲ್ಲಿ ಮುಂದುವರಿಸಲಾಯಿತು. ಯಾವುದೇ ವಿಘ್ನವಿಲ್ಲದೆ ಜಾತ್ರೋತ್ಸವ ಮುಂದುವರಿದಿದೆ.

ಮಂಗಳೂರಿನ ಹೊರ ವಲಯದಲ್ಲಿರುವ ಮೂಲ್ಕಿಯಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪುರಾತನ ಪ್ರಸಿದ್ದ ದೇವಾಲಯವಾಗಿದೆ. ಇಲ್ಲಿನ ವಾರ್ಷಿಕ ಜಾತ್ರೆಗಳು ಮತ್ತು ಉತ್ಸವಗಳಲ್ಲಿ ಎಲ್ಲಾ ಜಾತಿ ಮತ್ತು ಸಮುದಾಯಗಳ ಜನರು ಭಾಗವಹಿಸುತ್ತಾರೆ. ಮೊಗವೀರರು ರಥವನ್ನು ಅಲಂಕರಿಸುತ್ತಾರೆ, ಕೊರಗರು ತಮ್ಮ ಡೊಳ್ಳು ಬಡಿತಕ್ಕೆ ನೃತ್ಯ ಮಾಡುತ್ತಾರೆ, ಬ್ರಾಹ್ಮಣರು ವೇದ ಮತ್ತು ಆಗಮಗಳ ಪ್ರಕಾರ ಪೂಜೆ ಮತ್ತು ಆಚರಣೆಗಳನ್ನು ಮಾಡುವುದು ಇಲ್ಲಿಯ ವಿಶೇಷ. ಬಪ್ಪನಾಡಿನ ದೇವಸ್ಥಾನವು ದುರ್ಗಾದೇವಿಗೆ ಸಮರ್ಪಿತವಾಗಿದೆ,ಆದರೆ ದೇವಿಯನ್ನು ಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ.

Read More
Next Story